ಊರಿನ ದೇವಸ್ಥಾನ ದೈವಸ್ಥಾನಗಳಿಗೆ ಮುಂಬೈಯವರ ಕೊಡುಗೆ ಅಪಾರ" ಮುಂಬೈನಲ್ಲಿರುವ ತುಳುನಾಡಿನವರು ಹುಟ್ಟೂರಿಗೆ ಬರಬೇಕು ರವೀಂದ್ರ ಶೆಟ್ಟಿ ಆಗ್ರಹ
ಬಜಗೋಳಿ : ಮುಂಬೈ ಹಾಗೂ ಪೂನಾದಲ್ಲಿರುವ ತುಳುನಾಡ ನಿವಾಸಿ ಗರು ತಮ್ಮ ಊರಿಗೆ ಬರುವಂತೆ ಕರಾವಳಿ ಸ್ಟೋನ್ ಕ್ರಷರ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಶೆಟ್ಟಿ ವಿನಂತಿಸಿದ್ದಾರೆ. ವಿಶ್ವದಾದ್ಯಂತ ಬಾಧಿಸುತ್ತಿರುವ ಕೊರೋನಾ ಜ್ವರದಿಂದಾಗಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.
![]() |
ಭಾರತದಲ್ಲಿ ಕೂಡಾ ಈ ಜ್ವರ ಬಹಳಷ್ಟು ಜನರನ್ನು ತೊಂದರೆಗೀಡುಮಾಡಿದೆ. ಮುಂಬೈಯಲ್ಲಿ ಕೂಡ ಈ ಜ್ವರದ ಸಮಸ್ಯೆ ತಾರಕಕ್ಕೇರಿದೆ. ಮುಂಬೈಯಲ್ಲಿರುವ ತುಳುನಾಡಿನ ನಿವಾಸಿಗರು ಲಾಕ್ ಡೌನ್ ಬಳಿಕ ಬಹಳ ಸಂಕಷ್ಟಕ್ಕೀಡಾಗಿದ್ದಾರೆ. ತುಳು ನಾಡಿನ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ದಿಗೆ ಮುಂಬೈಯವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಊರಿನಲ್ಲಿ ಪ್ರತೀವರ್ಷ ನಡೆಯುವ ಜಾತ್ರೆ. ಅಥವಾ ಊರಿನ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಂಬೈ ಉದ್ಯಮಿಗಳು ಲಕ್ಷಾಂತರ ಮೊತ್ತ ದೇಣಿಗೆಯಾಗಿ ನೀಡಿದ್ದಾರೆ. ಇವೆಲ್ಲವನ್ನೂ ನಾವೆಲ್ಲರೂ ಸದಾ ನೆನಪಿನಲ್ಲಿಟ್ಟುಕೊಂಡಿದ್ದೇವೆ.
ಲಾಕ್ ಡೌನ್ ಅವಧಿಯಲ್ಲಿ ಎಲ್ಲರೂ ಸಂಕಷ್ಠದಲ್ಲಿದ್ದಾರೆ. ಮುಂಬೈಯಲ್ಲಿರುವ ತುಳುವರು ಊರಿಗೆ ಬರೋಣವೆಂದರೂ ಬರಲಾಗುತ್ತಿರಲಿಲ್ಲ. ಇದೀಗ ಸರಕಾರ ಮುಂಬೈ ನಿವಾಸಿಗರನ್ನು ಊರಿಗೆ ಕರೆತರಲು ಕ್ರಮ ಕೈಗೊಂಡಿದೆ. ಈ ಅವಧಿಯಲ್ಲಿ ಮುಂಬೈ ತುಳುವರು ಹುಟ್ಟೂರಿಗೆ ಬರಬೇಕು. ಊರಿಗೆ ಬಂದ ತಕ್ಷಣ ಕ್ವಾರಂಟೈನ್ ಮಾಡಲು ಸರಕಾರ ನಿರ್ಧರಿಸಿದೆ. ಕ್ವಾರಂಟೈನ್ ವಿಚಾರದಲ್ಲಿ ಯಾರು ಕೂಡಾ ವಿಚಲಿತರಾಗಬಾರದು.
ಕೊರೋನಾದಿಂದಾಗಿ ಅಮೇರಿಕಾದಂತಹ ದೇಶದಲ್ಲಿಯೇ ಸ್ವೇಚ್ಚಾಚಾರದಿಂದಾಗಿ ಸಾವಿರಾರು ಮಂದಿ ಮೃತರಾಗಿದ್ದಾರೆ. ೧೪ ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಈ ವಿಚಾರವನ್ನು ನಾವೆಲ್ಲರೂ ತಿಳಿದು ಕ್ರಮ ಕೈಗೊಳ್ಳಬೇಕಿದೆ. ಈ ಕಾಲ ಸಂಕಷ್ಟದ ಕಾಲ. ಈ ಸಂಕಷ್ಟದ ಕಾಲದಲ್ಲಿ ನಾವೆಲ್ಲರೂ ಸಹೋದರತೆ ಹಾಗೂ ಉದಾತ್ತ ಮನೋಭಾವ ಬೆಳೆಸಿಕೊಂಡು ಬಾಳಬೇಕಿದೆ. ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಕಾರ್ಕಳ ಶಾಸಕರು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಶಾಸಕರು ಹಾಗೂ ಸರಕಾರಿ ಅಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಈ ಕ್ವಾರಂಟೈನ್ ಕೇಂದ್ರಗಳನ್ನು ಉತ್ತಮವಾಗಿ ರೂಪಿಸಿದ್ದಾರೆ. ಇವರೆಲ್ಲರೂ ಮುಂಬೈಯಿಂದ ಬರುವ ತುಳುವರನ್ನು ಗೌರವದಿಂದ ಕಾಣಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಯಾರು ಕೂಡಾ ಅನ್ಯಥ ಭಾವಿಸಬಾರದು ಎಂದು ತಿಳಿಸಿದ್ದಾರೆ
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment