"ವಲಸೆ ಕಾರ್ಮಿಕರು ಬೀದಿಗೆ ಬರಲು ಕಾಂಗ್ರೆಸ್ ಕಾರಣ"-ಸುದರ್ಶನ್ ಮೂಡುಬಿದಿರೆ-Times of karkala

"ವಲಸೆ ಕಾರ್ಮಿಕರು ಬೀದಿಗೆ ಬರಲು ಕಾಂಗ್ರೆಸ್ ಕಾರಣ"-ಸುದರ್ಶನ್ ಮೂಡುಬಿದಿರೆ 

ದಕ್ಷಿಣ ಕನ್ನಡ ಜಿಲ್ಲ್ಲೆಯಲ್ಲಿರುವ ವಲಸೆ ಕಾರ್ಮಿಕರು ಅವರವರ ಊರುಗಳಿಗೆ ಕಳುಹಿಸುವ ಕೆಲಸ ವ್ಯವಸ್ಥಿತವಾಗಿ ನಡೆಯಲಾಗುತ್ತಿದೆ.ಆದರೆ  ಕಾಂಗ್ರೆಸ್  ನ  ಕೆಲವು  ನಾಯಕರು ಕಾರ್ಮಿಕರ ದಿಕ್ಕು ತಪ್ಪಿಸಿ ಬೀದಿಗೆ ಬರುವಂತೆ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಗಂಭೀರ ಆರೋಪ ಮಾಡಿದ್ದಾರೆ.ಕಾರ್ಮಿಕರಿಂದ ಹಣ ಕೇಳಿದ ಮಹಿಳೆಯ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರ್ಮಿಕರನ್ನು ಕರೆತರಲು ಅಧಿಕಾರ ಕೊಟ್ಟವರು ಯಾರು?ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.


ನಮಸ್ತೆ ಟ್ರಂಪ್ ಕಾರ್ಯಕ್ರಮದಿಂದ ವೈರಸ್ ಹರಡಿದ್ದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್  ಆರೋಪ ಮಾಡಿದ್ದೂ, ಟ್ರಂಪ್ ಭಾರತಕ್ಕೆ ಬರುವ ವೇಳೆ ಅಮೇರಿಕಾದಲ್ಲಿ  ಕೇವಲ  ಒಂದು  ಪ್ರಕರಣ ದಾಖಲಾಗಿತ್ತು  ಹಾಗೂ ಭಾರತದಲ್ಲಿ ಯಾವುದೇ  ಪ್ರಕರಣ ಇರಲಿಲ್ಲ.ಅದರಿಂದ ಟ್ರಂಪ್ ಕಾರ್ಯಕ್ರಮದಿಂದ ವೈರಸ್ ಹರಡಿತು ಎಂಬುದು ಹಾಸ್ಯಾಸ್ಪದ  ಸಂಗತಿಯಾಗಿದೆ.

ನರೇಂದ್ರ ಮೋದಿ ಈಗಾಗಲೇ 20  ಲಕ್ಷ ಕೋಟಿ ಬಿಡುಗಡೆ ಮಾಡಿದ್ದು ಸ್ವಾವಲಂಬಿ ಭಾರತದ ಪರಿಕಲ್ಪನೆಯಾಗಿದೆ. ಮುಂದುವರಿದ ದೇಶಗಳೇ ಇಂದು ಕೊರೊನದಿಂದಾಗಿ ಕಂಗಾಲಾಗಿರುವಾಗ ಭಾರತ ಮಾತ್ರ ಮೋದಿಯವರ  ದಿಟ್ಟ ಕ್ರಮದಿಂದಾಗಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget