ಶಾಸಕರ ಹಾಗೂ ತಂಡದ ಅವಿರತ ಶ್ರಮಕ್ಕೆ ಫಿದಾ!ರಾಜ್ಯಕ್ಕೆ ಮಾದರಿ ಕಾರ್ಕಳದ ಕ್ವಾರಂಟೈನ್ ಗಳು-Times OF karkala

ಶಾಸಕರ ಹಾಗೂ ತಂಡದ  ಅವಿರತ ಶ್ರಮಕ್ಕೆ ಫಿದಾ!ರಾಜ್ಯಕ್ಕೆ ಮಾದರಿ ಕಾರ್ಕಳದ ಕ್ವಾರಂಟೈನ್ ಗಳು

ದೇಶದೆಲ್ಲೆಡೆ ಕೊರೋನಾ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಜನರು ಅಲ್ಲಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಊರಿಗೆ ಮರಳುವವರಿಗೆ ಮಾತ್ರ ತಮ್ಮ ಊರಿನಲ್ಲಿ ಕ್ವಾರಂಟೈನ್ ಕೇಂದ್ರಗಳು ಹೇಗಿರುತ್ತವೆ ಎಂಬ ಭಯವಂತೂ ಇದ್ದೆ ಇರುತ್ತದೆ ಯಾಕೆಂದರೆ ಹೊರ ರಾಜ್ಯದಿಂದ ಬರುವ ಪ್ರತಿಯೊಬ್ಬರೂ  14  ದಿನಗಳನ್ನು ಕ್ವಾರಂಟೈನ್ ನಲ್ಲಿಯೇ ಕಳೆಯಬೇಕಾಗುತ್ತದೆ. ಹೀಗಿರುವಾಗ ಕೊಂಚ ಭಯ ಇರುವುದು ಸರ್ವೇ ಸಾಮಾನ್ಯ.


ಆದರೆ ಕಾರ್ಕಳದ ಮಟ್ಟಿಗೆ ಆ 'ಭಯ' ಸುಳ್ಳಾಗಿದೆ. ಏಕೆಂದರೆ  ಕಾರ್ಕಳದಲ್ಲಿ ಕ್ವಾರಂಟೈನ್ ಶಾಸಕರ ನೇತೃತ್ವದ ತಂಡ ನೀಡುವ ಉಪಚಾರಕ್ಕೆ ಕ್ವಾರಂಟೈನ್ ನಲ್ಲಿರುವವರೂ ಆಗಿದ್ದಾರೆ.  ಹೌದು ಕ್ವಾರಂಟೈನ್ ಕೇಂದ್ರದಲ್ಲಿ ನಡೆಯುವ ಉಪಚಾರಗಳು ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಯಾವತ್ತೂ ಒಂಟಿತನವನ್ನು ಭಾದಿಸಲಿಲ್ಲ.

ಹೊರರಾಜ್ಯದಿಂದ ಬರುವವರನ್ನು ಪ್ರೀತಿಯಿಂದ ಸ್ವಾಗತಿಸುವ ಸ್ವಯಂ ಸೇವಕರ  ತಂಡ, ತದ ನಂತರ ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ.ಕ್ವಾರಂಟೈನ್  ಕೇಂದ್ರದಲ್ಲಿ ಅವರನ್ನು ಮನೆಯವರಂತೆ ನೋಡಿಕೊಳ್ಳಲಾಗುತ್ತದೆ ಹೊತ್ತು ಹೊತ್ತಿಗೆ ಊಟ ಆರೋಗ್ಯಕರ ಕಷಾಯ  ಇತ್ಯಾದಿಗಳನ್ನು ಪೂರೈಸಲಾಗುತ್ತದೆ. 500  ಕ್ಕೂ ಹೆಚ್ಚಿನ ಕಾರ್ಯಕರ್ತರು ಕ್ವಾರಂಟೈನ್ ಕೇಂದ್ರದದಲ್ಲಿರುವವರ ಉಪಚಾರಕ್ಕಾಗಿ ಶ್ರಮವಹಿಸುತ್ತಿದ್ದಾರೆ.

ದಿನದ 24  ಗಂಟೆಯೂ ಬಿಸಿನೀರು, ಜೊತೆಗೆ ಬೆಡ್ ಶೀಟ್ ನಿಂದ ಹಿಡಿದು ಅಗತ್ಯಕೆ ಬೇಕಾದ ಎಲ್ಲ ವಸ್ತುಗಳೂ ತಕ್ಷಣವೇ ಸಿಗುತ್ತದೆ. ಅಲ್ಲದೆ ಸ್ವಚ್ಛತೆಯ ವಿಷಯದಲ್ಲಿಯೂ ಕ್ವಾರಂಟೈನ್ ಕೇಂದ್ರಗಳು ಹೊಗಳಿಕೆಗೆ ಪಾತ್ರವಾಗಿದೆ.

"ಮೊದಮೊದಲಿಗೆ ಕ್ವಾರಂಟೈನ್ ನಲ್ಲಿರುವುದು ಎಂದರೆ ಭಯ ಇತ್ತು,ಮುಂಬೈ ನಿಂದ ಹೊರಡುವಾಗ ಭಯದಲ್ಲಿಆಯೇ ಹೊರಟಿದ್ದೇವೆಯೂ ಆದರೆ ಇಲ್ಲಿಗೆ ಬಂದ  ಮೇಲೆ ಆ ಭಯ ಇಲ್ಲವಾಗಿದೆ.ಮನೆಯವರಿಗಿಂತಲೂ ಹೆಚ್ಚಾಗಿ ಸ್ವಯಂ ಸೇವಕರು ನಮ್ಮ ಉಪಚಾರ ಮಾಡುತ್ತಿದ್ದಾರೆ. ಶಾಸಕರ ಉಪಚಾರಕ್ಕೆ ನಾವು ಧನ್ಯರಾಗಿದ್ದೇವೆ ಎಂದು ಕ್ವಾರಂಟೈನ್ ನಲ್ಲಿ ಇದ್ದವರು ಅಭಿಪ್ರಾಯ ಪಟ್ಟಿದ್ದಾರೆ.

ಸ್ವರ್ಣ ನಿರ್ಮಾಣ ಕಾರ್ಕಳವೆಂದರೆ  ಕೇವಲ ರಸ್ತೆ ಸೇತುವೆ ಯಲ್ಲ ನಮ್ಮೂರಿಗೆ ಬರುವವರ ಚೆನ್ನಾಗಿ ನೋಡಿಕೊಳ್ಳುವುದು ಕೂಡಾ ಸ್ವರ್ಣಕಾರ್ಕಳದ  ಪರಿಕಲ್ಪನೆಯೇ.ಆದುದರಿಂದ ನಮ್ಮೂರಿಗೆ ಬರುವರಿಗೆ ಯಾವುದೇ ರೀತಿಯ  ಚ್ಯುತಿಬಾರದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ. ಇದು ಕೇವಲ ನನ್ನೊಬ್ಬನ ಶ್ರಮವಲ್ಲ ಇಡೀ ತಂಡದ ಶ್ರಮ ಎಂದು ಶಾಸಕ ಸುನೀಲ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಕ್ವಾರಂಟೈನ್ ಎಂಬುದು ಶಿಕ್ಷೆಯಲ್ಲ ನಮ್ಮವರ ಜಾಗೃತಿಗಾಗಿ ನಾವು ತೆಗೆದುಕೊಳ್ಳಬೇಕಾದ ಜವಾಬ್ದಾರಿ ಎಂಬುದು ಪ್ರತಿಯೊಬ್ಬರೂ ಅರಿಯಿರಬೇಕಾದ್ದೇ .ಮುಂಬೈನಲ್ಲಿರುವವರು ನಮ್ಮವರು, ಅವರಿಗೆ ಕಷ್ಟ ಬಂದಾಗ ನಾವು ಒಟ್ಟಿಗೆ ನಿಲ್ಲುವುದು ನಮ್ಮ ಕರ್ತವ್ಯ. ಮುಂಬೈನವರ ಋಣ ತೀರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎನ್ನುತ್ತಾರೆ  ಕಾರ್ಕಳ ಬಿಜೆಪಿ ಅಧ್ಯಕ್ಷರಾದ ಮಹಾವೀರ್ ಹೆಗ್ಡೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget