ಕಾರ್ಕಳದಲ್ಲೊಂದು ಕ್ವಾರಂಟೈನ್ ಲವ್: ವಿವಾಹಿತೆ ಮಹಿಳೆ ಮಗುವನ್ನು ಬಿಟ್ಟು ವಿವಾಹಿತ ಪ್ರಿಯಕ್ರನೊಂದಿಗೆ ಪರಾರಿ-Times of kakala

ಕಾರ್ಕಳ:ಹೋಂ ಕ್ವಾರಂಟೈನ್‌ ಮುಗಿಯುತ್ತಿದ್ದಂತೆ ವಿವಾಹಿತೆಯೊಬ್ಬರು ತನ್ನ ಮಗು ಬಿಟ್ಟು ವಿವಾಹಿತ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ನಡೆದಿದೆ.

ಅಜೆಕಾರು ಕೈಕಂಬದ 28 ವರ್ಷದ ಗೃಹಿಣಿ 8 ವರ್ಷಗಳ ಹಿಂದೆ ಮದುವೆಯಾಗಿ ಪುಣೆಯಲ್ಲಿ ನೆಲೆಸಿದ್ದರು. ಆದರೆ, 4 ತಿಂಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದ 8 ವರ್ಷದ ಮಗಳೊಂದಿಗೆ ಊರಿಗೆ ಬಂದು ಈಕೆ ಹೆತ್ತವರೊಂದಿಗೆ ವಾಸವಾಗಿದ್ದರು.ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಸಂಬಂಧಿಕರ ವಿವಾಹಕ್ಕೆ ಹೋಗಿ ಊರಿಗೆ ಬಂದ ಆಕೆ, ತಾಯಿ, ಸಹೋದರನನ್ನು  ಅಜೆಕಾರಿನಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. 

ಮಂಗಳೂರಿನಲ್ಲೇ ಸಿಲುಕಿಕೊಂಡು ಕ್ವಾರಂಟೈನ್‌ನಲ್ಲಿದ್ದ ಆಕೆಯ ತಂದೆ ಮನೆಗೆ ಬರುವಷ್ಟರಲ್ಲಿ ಮಗಳು ತಾನು ಹಲವು ವರ್ಷಗಳ ಹಿಂದೆ ಪ್ರೀತಿಸಿದ್ದ ಮೂಡುಬಿದಿರೆ ಮೂಲದ ವಿವಾಹಿತ ವ್ಯಕ್ತಿಯೊಂದಿಗೆ ನಾಪತ್ತೆಯಾಗಿದ್ದಾಳೆ. ಅಜೆಕಾರು ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget