ಉಡುಪಿ: ಅಕ್ರಮ ಗೋ ಸಾಗಾಟ: ಕಡಿವಾಣ ಹಾಕುವಂತೆ ಹಿಂ.ಜಾ.ವೇ. ವತಿಯಿಂದ ಪೊಲೀಸರಿಗೆ ಮನವಿ-Times Of karkala

ಉಡುಪಿ: ಅಕ್ರಮ ಗೋ ಸಾಗಾಟ: ಕಡಿವಾಣ ಹಾಕುವಂತೆ ಹಿಂಜಾವೇ ವತಿಯಿಂದ ಪೊಲೀಸರಿಗೆ ಮನವಿ-Times of karkala 

ಉಡುಪಿ:ಕೊರೋನಾದಿಂದಾಗಿ ಬಹುತೇಕ ಚಟುವಟಿಕೆಗಳು ಬಂದ್ ಆಗಿದ್ದರೂವ್ ಗೋ ಕಳ್ಳತನ ಮಾತ್ರ ನಿಂತಿಲ್ಲ.ರಸ್ತೆ ಪಕ್ಕದಲ್ಲಿ ಮಲಗಿರುವ ಗೋವುಗಳನ್ನು ಕಡಿಯುವುದು ಮಾತ್ರವಲ್ಲದೆ ಮನೆಗೆ ನುಗ್ಗಿ ತಲ್ವಾರ್ ಗಳನ್ನು  ತೋರಿಸಿ ಕಳ್ಳತನ ಮಾಡಲಾಗುತ್ತಿದೆ. ಈ ಹಿಂದೆ  ಹೊರ ಜಿಲ್ಲೆಗಳಿಂದ ಬರುವವರಿಂದ ಗೋ ಕಳ್ಳತನವಾಗುತ್ತಿತ್ತು ಆದರೆ ಇದೀಗ ಇಲ್ಲಿಯೇ ಅನೇಕ ಗುಂಪುಗಳು ಹುಟ್ಟಿಕೊಂಡಿವೆ. ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗಳು ಇದೀಗ ಮನೆಗಳಲ್ಲಿಯೇ ಕಾರ್ಯಾಚರಿಸುತ್ತಿದ್ದು ಮನೆಯಿಂದಲೇ ಗೋವುಗಳನ್ನು ಕಡಿದು ಸಾಗಿಸಲಾಗುತ್ತಿದೆ.

ಈ ಹಿಂದೆ ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಅಕ್ರಮ ಗೋ ಸಾಗಾಟ   ನಿಯಂತ್ರಣಕ್ಕೆ ಬಂದಿಲ್ಲ. ಮಾರಕಾಯುಧಗಳನ್ನು ತೋರಿಸಿ ಹಟ್ಟಿಗೆ ನುಗ್ಗಿ ಗೋವುಗಳನ್ನು ಹೊತ್ತೊಯ್ಯಲಾಗುತ್ತಿದೆ. ಅಲ್ಲದೆ ಈಗಾಗಲೇ ರಂಜಾನ್ ಹಬ್ಬ ಬರಲಿದ್ದು  ಗೋವುಗಳನ್ನು ಶೇಖರಿಸಿ ಇಡಲಾಗುತ್ತಿದೆ. ಟರ್ಪಾಲು ಗಳನ್ನು ಕಟ್ಟಿ ಗೋವುಗಳನ್ನು ಕಡಿಯಲಾಗುತ್ತಿದೆ.

ಕರಾವಳಿ ಭಾಗದಲ್ಲಿ ಗೋವುಗಳ ಅಕ್ರಮ ಸಾಗಾಟದಿಂದಲೇ ಕೋಮು ಸೌಹಾರ್ದ ಕದಡಿದ ಉದಾಹರಣೆಗಳಿವೆ. ಇದರಿಂದಾಗಿ ಪೊಲೀಸರು ಅಲ್ಲಲ್ಲಿ ಚೆಕ್ ಪೋಸ್ಟ್ ಅಳವಡಿಸಿ ಗೋ ಕಳ್ಳತನಕ್ಕೆ ಕಡಿವಾಣ ಹಾಕಬೇಕೆಂದು,ಹಾಗೂ ಜಿಲ್ಲೆಯ ಶಾಂತಿ ಕಾಪಾಡಬೇಕು ಎಂದು  ಉಡುಪಿ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಜಿಲ್ಲಾ ಪೋಲಿಸ್ ಉಪವರಿಷ್ಟಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಮುಖಂಡರಾದ ಪ್ರಕಾಶ್ ಕುಕ್ಕೆಹಳ್ಳಿ, ಪ್ರಶಾಂತ್ ನಾಯಕ್,ಮಹೇಶ್ ಬೈಲೂರು,ದಿನೇಶ್ ಶೆಟ್ಟಿ ಹೆಬ್ರಿ,ಅವಿನಾಶ್ ಶೆಟ್ಟಿ ಬೆಳ್ವೆ,ಉಮೇಶ್ ಬೆಳ್ಮಣ್,ಶಂಕರ್ ಕೋಟ,ಅಶೋಕ್ ಕುಮ್ರಗೋಡು,ಸಂದೀಪ್ ಮಟ್ಟಾರು ಮತ್ತಿತರರು ಉಪಸ್ಥಿತರಿದ್ದರು.  

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget