ಕಾರ್ಕಳದಲ್ಲಿ ಲಾಕ್ ಡೌನ್ ಇದ್ದರೂ ಶಾಲೆ ಪ್ರಾರಂಭ:ಗೂಡ್ಸ್ ಗಾಡಿಯಲ್ಲಿ ಬಂದ ಮಕ್ಕಳು-Times of karkala

ಕಾರ್ಕಳದಲ್ಲಿ ಲಾಕ್  ಡೌನ್ ಇದ್ದರೂ ಶಾಲೆ ಪ್ರಾರಂಭ:ಗೂಡ್ಸ್ ಗಾಡಿಯಲ್ಲಿ ಬಂದ ಮಕ್ಕಳು-Times of karkala

ಕಾರ್ಕಳ: ಕೊರೊನದಿಂದಾಗಿ ದೇಶದೆಲ್ಲೆಡೆ ಲಾಕ್ ಡೌನ್ ಇದ್ದರೂ ಕ್ಯಾರೇ ಎನ್ನದೆ  ಕಾರ್ಕಳದ ಬೋರ್ಡ್ ಹೈಸ್ಕೂಲ್ ನಲ್ಲಿ  ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿದ್ದು,ವಿಷಯ ತಿಳಿಯುತ್ತಿದ್ದಂತೆ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಮುಖ್ಯೋಪಾದ್ಯಾಯರು ಏಕಾಏಕಿಯಾಗಿ ಮಕ್ಕಳಿಗೆ ಶಾಲೆಗೆ ಹಾಜರಾಗಲು ಹೇಳಿದ್ದು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳು ಗೂಡ್ಸ್ ವಾಹನಗಳಲ್ಲಿ ಬಂದಿದ್ದಾರೆ ಎನ್ನಲಾಗಿದೆ.

ಸಾಂಧರ್ಭಿಕ ಚಿತ್ರ.

ಶುಕ್ರವಾರ ಮುಖ್ಯೋಪಾದ್ಯಾಯರು ನೀಡಿದ ಅನುಮತಿ ಮೇರೆಗೆ ವಿದ್ಯಾಥಿಗಳು ಶಾಲೆಗೆ ಹಾಜರಾಗಿದ್ದಾರೆ. ಲಾಕ್ ಡೌನ್ ಇದ್ದರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾದ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ಮರೆತು ಶಾಲೆಯಲ್ಲಿ ಸೇರಿದ್ದುದರಿಂದ ಪೋಷಕರು ಶಾಲೆಗೆ  ಬಂದು ಮುಖ್ಯೋಪಾದ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
  
ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಮೇರೆಗೆ ತರಗತಿಗಳನ್ನು ಮತ್ತೆ ತೆರೆಯಲಾಗಿದೆ ಎಂದು ಮುಖ್ಯೋಪಾದ್ಯಾಯರು ಸಮಜಾಯಿಷಿ ನೀಡಿದರೂ ,"ಮಕ್ಕಳನ್ನು ಶಾಲೆಗೆ ಸೇರಿಸದಂತೆ ಖಡಾಖಂಡಿತವಾಗಿ ಹೇಳಿದ್ದೇವೆ, ಏನಾದರೂ ತೊಂದರೆಯಾದಲ್ಲಿ ಮುಖ್ಯೋಪಾಧ್ಯಾಯರೇ  ನೇರ ಹೊಣೆ"ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದ್ದಾರೆ.

ಶಾಲೆಗೆ ಬರುವ ಬಹುತೇಕ ವಿದ್ಯಾರ್ಥಿಗಳು ದೂರದ ಊರಿನವರಾಗಿದ್ದು ಬಸ್ ಅಥವಾ ಇನ್ನಿತರ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಏಕಾಏಕಿ ಶಾಲೆ ತೆರೆದುದರಿಂದ ಕಂಗಾಲಾದ ವಿದ್ಯಾರ್ಥಿಗಳು ಪೋಷಕರೊಂದಿಗೆ ಬೈಕ್ ಗಳಲ್ಲಿ ನಾಲ್ಕು ಜನ ಒಟ್ಟಿಗೆ ಬಂದ ಸನ್ನಿವೇಶಗಳೂ  ನಡೆದಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget