ಬೆಳುವಾಯಿ:ವಿಷಯುಕ್ತವಾಗುತ್ತಿದೆ ಬಾವಿಯ ನೀರು:ಊರ ಜನರ ಸಾಮೂಹಿಕ ಸಾವಿಗೆ ಕಾರಣವಾದೀತು ಎಣ್ಣೆ ಮಿಲ್ಲಿನ ತ್ಯಾಜ್ಯ!-Times Of karkala

ಬೆಳುವಾಯಿ:ವಿಷಯುಕ್ತವಾಗುತ್ತಿದೆ ಬಾವಿಯ ನೀರು:ಊರ ಜನರ ಸಾಮೂಹಿಕ ಸಾವಿಗೆ ಕಾರಣವಾದೀತು ಎಣ್ಣೆ ಮಿಲ್ಲಿನ ತ್ಯಾಜ್ಯ-Times Of karkala

ಬೆಳುವಾಯಿ ಗ್ರಾಮದ ನಾನಿಲು ಎಂಬಲ್ಲಿ ಕೆಂಪು ಕಲ್ಲಿನ 30 ಅಡಿ ಆಳದ ಕೋರೆಯನ್ನು ಮುಚ್ಚಲು ಮೂಡುಬಿದಿರೆಯ ಜ್ಯೋತಿನಗರದ ಎಣ್ಣೆ ಮಿಲ್ ನ ನೂರಾರು ಲೋಡು ಅಪಾಯಕಾರಿ ರಾಸಾಯನಿಕಗಳುಳ್ಳ ತ್ಯಾಜ್ಯವನ್ನುಸುರಿಯುತ್ತಿದ್ದು ಇಡೀ ಪರಿಸರವೇ ಮಾಲಿನ್ಯವಾಗಿದೆ.ಕಾಂತಾವರ ಗುಡ್ಡದಿಂದ ಹರಿದು ಬರುವ ನೀರಿನ ತೋಡಿಗೆ ಹೊಂದಿಕೊಂಡಿರುವ ಈ ಕೆಂಪು ಕಲ್ಲಿನ ಕೋರೆಯು ಮಳೆಗಾಲ ಆರಂಭದ ನಂತರ  ನವೆಂಬರ್ ತನಕ ನೀರು ತುಂಬಿ ಹರಿಯುತ್ತಿದ್ದು ಬೈಲು , ಬೆಟ್ಟು ಪ್ರದೇಶದ ಗದ್ದೆಗೆ ಇದೇ ನೀರಿನಾಶ್ರಯವಾಗಿದೆ.


ನಾನಿಲು, ಕಾಪಿಗುಂಡಿ, ಕೆಸರುಗದ್ದೆ,ಪಟ್ಲ, ಕೊಡ್ಯಡ್ಕ, ಗುಂಡ್ಯಡ್ಕಕ್ಕೆ ಈ ತೋಡಿನ ನೀರು ಹರಿಯುತ್ತದೆ. ಹಾಗಾಗಿ ಈ ಅಪಾಯಕಾರಿ ರಾಸಾಯನಿಕಗಳು ಇರುವ ನೀರು ಸಾವಿರಾರು ಎಕರೆ ಕೃಷಿ ಭೂಮಿ ನಾಶಕ್ಕೆ ಕಾರಣವಾಗಿ, ಕೋರೆಯ ಸಮೀಪದ ಎರಡು ಕಿಲೋಮೀಟರ್ ಸುತ್ತಳತೆಯಲ್ಲಿ ಅಂತರ್ಜಲದಲ್ಲಿ ಸೇರಿ ಬಾವಿ ಮತ್ತು ಕೊಳವೆ ಬಾವಿಯ ನೀರು ಸೇರುವ ಸಾಧ್ಯತೆಗಳಿದ್ದು, ಈ ನೀರು ಸೇವಿಸಿದಲ್ಲಿ ಮಾರಣಾಂತಿಕ ಖಾಯಿಲೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.
ತೋಡಿನ ಮೇಲ್ಭಾಗದಲ್ಲಿ ಪಂಚಾಯತ್ ವತಿಯಿಂದ ನಿರ್ಮಿಸಲಾದ ಕೃಷಿ ಭೂಮಿಗೆ ನೀರು ಹಾಯಿಸುವ ಕಾಲುವೆ
ಇಡೀ ಗ್ರಾಮದ ಜನರು ಅವಲಂಬಿಸಿರುವ ಪಂಚಾಯತ್ ನೀರಿನ ಕೊಳವೆಯ ಕೇವಲ 100 ಮೀಟರ್ ದೂರದಲ್ಲಿ ಈ ರಾಸಾಯನಿಕ ಇದ್ದು ಒಂದು ವೇಳೇ  ರಾಸಾಯನಿಕದೊಂದಿಗೆ ನೀರು ಮಿಶ್ರಣವಾದಲ್ಲಿ ಇಡೀ ಊರಿನ ಜನರು ಸಾಮೂಹಿಕವಾಗಿ ಸಾವನ್ನಪ್ಪುವ ಸಂಭವವಿದೆ.
ಬಲಬದಿಯಲ್ಲಿ ನೀರು ಹರಿದು ಬರುತ್ತಿದ್ದ ತೋಡು ಕೋರೆ ನಿರ್ಮಾಣ ಆಗಿ ಮಾಯ
ಈಗಾಗಲೇ ಇದರ ಬಗ್ಗೆ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಸೇರಿ ಆ ಪ್ರದೇಶದಲ್ಲಿ ಪ್ರತಿಭಟಿಸಿದರೂ ಕೂಡ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕ್ರಮ ಕೈಗೊಳ್ಳದಿರುವುದು ಯಾವುದೋ ಅಕ್ರಮದ ವಾಸನೆ ಮೂಗಿಗೆ ಬಡಿಯುವಂತೆ ಮಾಡಿದೆ.

ತಹಶೀಲ್ದಾರ್ ಅವರಿಗೆ ಮತ್ತು ಜಿಲ್ಲಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಗೆ ಗ್ರಾಮಸ್ಥರು ಮನವಿ ನೀಡಿದ್ದು ಮಳೆಗಾಲ ಪ್ರಾರಂಭವಾಗಲು ಇನ್ನೇನು ಕೆಲವೇ ವಾರಗಳಷ್ಟೇ ಇದೆ. ಈ ಮಧ್ಯೆ ಸಂಭಂದಪಟ್ಟವರು ಯಾವ ರೀತಿಯ ಕ್ರಮ ಜರುಗಿಸುತ್ತಾರೆ ಎಂದು ಕಾದುನೋಡಬೇಕಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತುPost a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget