ಕಾರ್ಕಳ:ಗಾಳಿ ಮಳೆಗೆ ಲಕ್ಷಾಂತರ ರೂ.ನಷ್ಟ-Times of karkala

ಕಾರ್ಕಳ:ಗಾಳಿ ಮಳೆಗೆ ಲಕ್ಷಾಂತರ ರೂ.ನಷ್ಟ-Times of karkala

ಕಾರ್ಕಳ ಪರಿಸರದಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸುರಿದ ಭಾರೀ ಗಾಳಿ ಮಳೆಗೆ  ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಎಪ್ರಿಲ್ 7 ರಂದು ಪಳ್ಳಿಯ ಗಿರಿಜಾ ಪೂಜಾರ್ತಿಯವರ ಮನೆಯ ವಿದ್ಯುತ್ ಗೊಡೆಗೆ ಹಾನಿಯಾಗಿ 10,000 ರೂ ನಷ್ಟ ಸಂಭವಿಸಿದೆ. ಬೋಳದ ವನಜ ಮೂಲ್ಯರ ಮನೆಗೆ ತೆಂಗಿನ ಗರಿ ಬಿದ್ದು ಸಿಮೆಂಟ್ ಸೀಟ್ ಗೆ ಹಾನಿಯಾಗಿ 5 ಸಾವಿರ ನಷ್ಟವಾಗಿದೆ.


ಎಪ್ರಿಲ್ 12ರಂದು ಕಾರ್ಕಳ ಕಸಬಾ ಗ್ರಾಮದ  ಸಂಜೀವ ಎಂಬುವವರ ಮೆನೆಗೆ ಸಿಡಿಲು ಬಡಿದು 5 ಸಾವಿರ ನಷ್ಟವಾಗಿದೆ.ಎರ್ಲಪಾಡಿಯ ಗ್ರಾಮದ ಮಹೇಶ್ ಹಾಗೂ ಲಕ್ಷ್ಮೀ ಎಂಬುವವರ ಮನೆ ಮೇಲೆ ಮರ ಬಿದ್ದು 10,000ರೂ ನಷ್ಟವಾಗಿದೆ. ನೆಲ್ಲಿಗುಡ್ಡೆಯ  ರಾಧಾ ಎಂಬುವವರ ಮನೆಗೆ ಮರ ಬಿದ್ದು 6,000 ರೂ ನಷ್ಟ,ಕುಕ್ಕುಂದೂರು ಜಯಂತಿ ಆಚಾರ್ಯರ ಮನೆಯ ಶಿಮೆಂಟ್ ಶೀಟ್ ಜಾರಿಗೋಗಿ 5000 ನಷ್ಟ,ಕಲ್ಯ ಗ್ರಾಮದ ಕುಂಟಾಡಿಯ ಅಶೋಕನಗರದ ಸುಮಿತ್ರಾರ ಮನೆಗೆ ಸಿಮೆಂಟ್ ಶೀಟ್ ಹಾರಿಹೋಗಿ  10000 ನಷ್ಟ, ಹೆರ್ಮುಂಡೆಯ  ಸುನಂದಾ ಪೂಜಾರಿ ಮನೆಗೆ ಹಾನಿಯಾಗಿ 8,000 ರೂ ನಷ್ಟ ಹಾಗೂ ಕುಕ್ಕುಂದೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹಾನಿಯಾಗಿ 10,000 ರೂ ನಷ್ಟ ಸಂಭವಿಸಿದೆ.

ಎಪ್ರಿಲ 18 ರಂದು ಮರ್ಣೆಗ್ರಾಮದ ಮಾಬು ಶೆಟ್ಟಿ ಮನೆಗೆ ಸಿಡಿಲು ಬಡಿದು ರೂ.25000 ನಷ್ಟವಾಗಿದೆ. ಎಪ್ರಿಲ 21 ರಂದು ಎಳ್ಳಾರೆ ಗ್ರಾಮದ ಹೊಗೈಜಡ್ಡು ಗ್ರಾಮದ ೋಬಯ್ಯ ನಾಯ್ಕರ ಮನೆಗೆ ಸಿಡಿಲು ಬಡಿದು ರೂ 5000 ನಷ್ಟವಾಗಿದೆ.ಮರ್ಣೆಯ ವಿನೋದ್ ನಾಯ್ಕರ ಮನೆಗೆ ಸಿಡಿಲು ಬಡಿದು 25000 ರೂ ನಷ್ಟವಾಗಿದೆ.ಹೆರ್ಮುಂಡೆಯ ಇಂದಿರಾ ಹೆಗ್ಡೆಯ ಮನೆಗೆ ಸಿಡಿಲು ಬಡಿದು ರೂ 8000 ನಷ್ಟವಾಗಿದೆ.

ಏಪ್ರಿಲ್ 27ರಂದುಕಾಂತಾವರ ನೆಲ್ಲಿಬೆಟ್ಟು ಮುತ್ತಯ್ಯ ಪೂಜಾರಿ ಮನೆಗೆ ಹಾನಿಯಾಗಿ  20,000 ರೂ ನಷ್ಟ ಸಂಭವಿಸಿದೆ.ಮೇ 2 ರಂದು ಪಳ್ಳಿ ಗ್ರಾಮದ ಪುಷ್ಪ ಎಂಬುವವರ ಮನೆಗೆ ರೂ 5000 ದಷ್ಟು ನಷ್ಟವಾಗಿದೆ.ಹಿರ್ಗಾನದ  ಜ್ಯೋತಿಲತಾ ಮನೆಗೆ ಮರಬಿದ್ದು 5000 ರೂ,ಬೈಲೂರಿನ  ಈಶ್ವರ್ ಪೂಜಾರಿ ಮನೆಗೆ ಹಾನಿಯಾಗಿ 5000 ರೂ ನಷ್ಟ ಸಂಭವಿಸಿದೆ.


ಮೇ 3 ರಂದು ಕಾರ್ಕಳ  ಬಂಗ್ಲೆಗುಡ್ಡೆ ಹಸೀನಾಬಾನು  ಮನೆಗೆ ಹಾನಿಯಾಗಿ ರೂ 10000,ಬಂಗ್ಲೆಗುಡ್ಡೆ  ಜೊಹಾರಾ ಮನೆಗೆ ಹಾನಿಯಾಗಿ 10000 ರೂ ನಷ್ಟ ಸಂಭವಿಸಿದೆ.ಕುಂಟಲ್ಪಾಡಿ ಸರೋಜಿನಿ ಮನೆಗೆ ಹಾನಿಯಾಗಿ 15000 ರೂ ನಷ್ಟ ಸಂಭವಿಸಿದೆ.ಇನ್ನೂ ಅನೇಕ ಕಡೆಗಳಲ್ಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ್ದು ಲಾಕ್ ಡೌನ್ ಬರೆಯಲ್ಲಿ ಕಂಗಾಲಾಗಿರುವ ಜನ ಪ್ರಾಕೃತಿಕ ವಿಕೋಪದ  ಏಟಿನಿಂದ ಅಕ್ಷರಶಃ ನಲುಗಿಹೋಗಿದ್ದಾರೆ.
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget