►►“ಶಾಲೆಯ ಮಕ್ಕಳಿಗೆ ಬಿಕ್ಷೆ ಬೇಡಿದ ಸಂಸದರಿಗೆ ತನ್ನ ಊರಿನ ಜನ ಹಸಿವೆಯಿಂದ ಕಂಗೆಟ್ಟಿರುವುದು ಕಾಣಿಸುತ್ತಿಲ್ಲವೇ?” ►►“ಶೋಭಾ ಕರಂದ್ಲಾಜೆ ತನ್ನ ಕ್ಷೇತ್ರ ಕೋಸ್ಕರ ಪ್ರಾಮಾಣಿಕವಾಗಿ ದುಡಿಯದೇ ಅನುಕಂಪಕ್ಕೋಸ್ಕರ ಫೋನ್ ಬೆದರಿಕೆ ಕರೆ ನಾಟಕವಾಡುತ್ತಿದ್ದಾರೆ” ►►“ಜನ ಬುದ್ದಿವಂತರಾಗಿದ್ದಾರೆ ಇಂತಹ ನಾಟಕಗಳನ್ನು ಬಹಳಷ್ಟು ಕಂಡಿದ್ದಾರೆ” ”-ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮದ್

►►“ಶಾಲೆಯ ಮಕ್ಕಳಿಗೆ ಬಿಕ್ಷೆ ಬೇಡಿದ ಸಂಸದರಿಗೆ ತನ್ನ ಊರಿನ ಜ ಹಸಿವೆಯಿಂದ ಕಂಗೆಟ್ಟಿರುವುದು ಕಾಣಿಸುತ್ತಿಲ್ಲವೇ?”

►►“ಶೋಭಾ ಕರಂದ್ಲಾಜೆ ತನ್ನ  ಕ್ಷೇತ್ರ ಕೋಸ್ಕರ ಪ್ರಾಮಾಣಿಕವಾಗಿ ದುಡಿಯದೇ ಅನುಕಂಪಕ್ಕೋಸ್ಕರ ಫೋನ್ ಬೆದರಿಕೆ ಕರೆ ನಾಟಕವಾಡುತ್ತಿದ್ದಾರೆ”

►►“ಜನ ಬುದ್ದಿವಂತರಾಗಿದ್ದಾರೆ ಇಂತಹ ನಾಟಕಗಳನ್ನು ಬಹಳಷ್ಟು ಕಂಡಿದ್ದಾರೆ” ”-ಸಾಮಾಜಿಕ ಕಾರ್ಯಕರ್ತ  ಅನ್ಸಾರ್ ಅಹಮದ್

ಕೋವಿಡ್ 19 ವೈರಸ್ ನಿಂದ ಪಾರಾಗಲು ಇಡೀ ದೇಶ ಲಾಕ್ ಡೌನ್ ಆಗಿದ್ದು  ಆಯಾ ಕ್ಷೇತ್ರದ ಶಾಸಕರು, ಸಚಿವರು, ಸಂಸದರು ನಮ್ಮ ಕೈಲಾಗುವ ಎಲ್ಲಾ ಸಹಾಯ ಹಸ್ತವನ್ನು ನೀಡಿದ್ದು ಅದರಲ್ಲಿ ಹಲವಾರು ಮಂದಿ ಇಡೀ ದೇಶಕ್ಕೆ ಮಾದರಿ ಎನಿಸಿಕೊಂಡಿದ್ದಾರೆ.    ಆದರೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯ ಸಂಸದೆ ಶೋಭಾ ಕರಂದ್ಲಾಜೆಯವರು ತನ್ನ  ಕ್ಷೇತ್ರದ ಜನರು ಹಾಗೂ  ಮತದಾರರ ಬಗ್ಗೆ  ಕಿಂಚಿತ್ತೂ ಕಾಳಜಿ ವಹಿಸದಿರುವುದು ನಾಚಿಕೆಗೇಡಿನ ವಿಷಯವಾಗಿರುತ್ತದೆ.
     
    ಆವತ್ತೊಂದು ದಿನ ಸರಕಾರ ಯಾವುದೋ ಶಾಲೆಗೆ ಅನುದಾನ ನಿಲ್ಲಿಸಿತು ಎಂದು ಹೇಳಿ ಆ ಶಾಲೆಯ ಮಕ್ಕಳ ಹಸಿವಿ ಗೋಸ್ಕರ ಅಕ್ಕಿಯನ್ನು ಭಿಕ್ಷೆ ಬೇಡಿ ಶಾಲೆಗೆ ನೀಡಿದವರಿಗೆ ಇಂದು ತನ್ನ ಕ್ಷೇತ್ರದ ಜನರು  ಹಸಿವೆಯಿಂದ ಕಂಗೆಟ್ಟಿರುವುದು ಇವರ ಕಣ್ಣಿಗೆ ಕಾಣಿಸದೆ ಹೋಯಿತೇ.....

     ಕ್ಷೇತ್ರದ ಜನರ ಬಗ್ಗೆ ಕಿಂಚಿತ್ತು  ಕಾಳಜಿ ವಹಿಸದ ಶೋಭಾ ಕರಂದ್ಲಾಜೆಯವರು ಈಗ ಕ್ಷೇತ್ರದ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನವಾಗಿ ಬೆದರಿಕೆ ಕರೆಗಳು ಬಂದಿರುತ್ತದೆ  ಎಂಬ ನಾಟಕವಾಡುತ್ತಿದ್ದಾರೆ.ಜನರು ಬುದ್ಧಿವಂತರಾಗಿದ್ದಾರೆ ಹಾಗೂ ಇಂತಹ ನಾಟಕಗಳನ್ನು ಬಹಳಷ್ಟು ಕಂಡವರಾಗಿರುತ್ತಾರೆ.

ಒಂದು ವೇಳೆ ಬೆದರಿಕೆ ಕರೆಗಳು ಬಂದಿದ್ದರೆ ಸಂಬಂಧಪಟ್ಟ ಇಲಾಖೆಗೆ ದಾಖಲೆ ಗಳನ್ನು ತೋರಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿ.  ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆಯಾಗಲೇಬೇಕು.
ಒಂದು ವೇಳೆ ಫೋನ್ ಕರೆ ಬಂದಿದ್ದರೆ ಫೋನ್ ಸಂಭಾಷಣೆ ರೆಕಾರ್ಡುಗಳನ್ನು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡದಿರುವಷ್ಟು ದಡ್ಡರು ತಾವೇನಲ್ಲ.

ಸಂಸದೆಯರು  ತಮ್ಮ ಕರ್ತವ್ಯದಿಂದ ವಿಮುಖರಾಗಿ ತಮ್ಮ ಕ್ಷೇತ್ರದ ಜನರ ಕಷ್ಟ ಕಾರ್ಪಣ್ಯಗಳ ಬಗ್ಗೆ  ಗಮನ ಹರಿಸದಿರುವುದನ್ನು ಜನರು ಆಕ್ಷೇಪ ವ್ಯಕ್ತಪಡಿಸಿ ತಮ್ಮ ವಿರುದ್ಧ ದಂಗೆ ಏಳುವುದನ್ನು ತಪ್ಪಿಸಲು  ಬೆದರಿಕೆ ಫೋನ್ ಕರೆ ನಾಟಕವಾಡುತ್ತಿದ್ದಾರೆ ಎಂದು  ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್  ಅಹ್ಮದ್ ರವರು ಅಭಿಪ್ರಾಯ ಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget