ಕರ್ಫ್ಯೂ ನಡುವೆಯೂ ಉಡುಪಿಯಲ್ಲಿ 27 ಮದುವೆ

ಉಡುಪಿ: ಭಾನುವಾರದ ಕೊರೊನಾ ಕರ್ಫ್ಯೂ ನಡುವೆ ಉಡುಪಿ ಜಿಲ್ಲೆಯಲ್ಲಿ 27 ಜೋಡಿಗಳು ಹಸೆಮಣೆಗೆ ಏರಿವೆ. ರಾಜ್ಯ ಸರ್ಕಾರ ಭಾನುವಾರ ಕಠಿಣ ಕರ್ಫ್ಯೂ ಘೋಷಣೆ ಮಾಡಿದರೂ ಮೊದಲೇ ನಿರ್ಧಾರವಾದ ಮದುವೆಗಳಿಗೆ ಅನುಮತಿ ಕೊಟ್ಟಿತ್ತು. ಹೀಗಾಗಿ ಜಿಲ್ಲೆಯಲ್ಲಿ ಮದುವೆ ನಿಶ್ಚಿತಾರ್ಥ ಸೇರಿದಂತೆ 27 ಶುಭ ಕಾರ್ಯಗಳು ನಡೆದಿದೆ.


ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ತಲಾ ಆರು ಮದುವೆಗಳಾಗಿದೆ. ಉಡುಪಿ ಮತ್ತು ಬೈಂದೂರಿನಲ್ಲಿ ತಲಾ ನಾಲ್ಕು ಮದುವೆಗಳಾಗಿದ್ದು, ನಿಶ್ಚಿತಾರ್ಥ ಮತ್ತು ರಿಸೆಪ್ಷನ್‍ಗಳು ಕಾಪು ತಾಲೂಕು ಮತ್ತು ಬ್ರಹ್ಮಾವರದಲ್ಲಿ ನಡೆದಿದೆ. ತಹಶೀಲ್ದಾರ್ ಎಲ್ಲ ಕಾರ್ಯಕ್ರಮಗಳಿಗೆ ಪರವಾನಿಗೆ ಕೊಟ್ಟ ನಂತರ ಶುಭ ಕಾರ್ಯಗಳು ನೆರವೇರಿದೆ.

ಉಡುಪಿ ಅಂಬಲಪಾಡಿಯಲ್ಲಿ ಕೃಷ್ಣದಾಸ್ ಮತ್ತು ಐಶ್ವರ್ಯ ಮನೆಯಲ್ಲೇ ಸತಿಪತಿಗಳಾದರು. ಬೆಂಗಳೂರಿನಲ್ಲಿ ಅಕೌಂಟೆಂಟ್ ಆಗಿರುವ ಕೃಷ್ಣ ದಾಸ್ ಎರಡು ತಿಂಗಳ ಹಿಂದೆ ಮದುವೆ ತಯಾರಿಗೆ ಬಂದವರು ಊರಲ್ಲೇ ಲಾಕ್ ಆಗಿದ್ದರು. ಐಶ್ವರ್ಯ ಉಡುಪಿಯ ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ಟೀಚಿಂಗ್ ಮಾಡುತ್ತಿದ್ದಾರೆ. ಉಡುಪಿಯ ಶ್ರೀಕೃಷ್ಣ ಸಭಾದಲ್ಲಿ ಮದುವೆ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ ಸರ್ಕಾರ ಏಕಾಏಕಿ ಕರ್ಫ್ಯೂ ಹೇರಿದೆ. ಹಾಗಾಗಿ ಮದುವೆಯನ್ನು ಹಾಲ್‍ನಿಂದ ಮನೆಗೆ ಶಿಫ್ಟ್ ಮಾಡಲಾಯಿತು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget