ಉದ್ಯಾವರ: ಪ್ರಸಿಧ್ಧ ಬಟ್ಟೆ ಅಂಗಡಿಗೆ “ಮುಸ್ಲಿಮ್ ಗ್ರಾಹಕರ ಅಗತ್ಯ ಇಲ್ಲ” ಎಂದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆಯುತ್ತಿರುವ ಕಿಡಿಗೇಡಿಗಳು:ಪ್ರಕರಣ ದಾಖಲು

ಉದ್ಯಾವರ: ಪ್ರಸಿಧ್ಧ ಬಟ್ಟೆ ಅಂಗಡಿಗೆ  “ಮುಸ್ಲಿಮ್ ಗ್ರಾಹಕರ  ಅಗತ್ಯ ಇಲ್ಲ” ಎಂದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆಯುತ್ತಿರುವ ಕಿಡಿಗೇಡಿಗಳು:ಪ್ರಕರಣ ದಾಖಲು

ಉದ್ಯಾವರದ ಪ್ರಸಿದ್ಧ ಜವಳಿ ಮಳಿಗೆ ಜಯಲಕ್ಷ್ಮಿ ಸಿಲ್ಕ್ಸ್ ನ ಜಾಹೀರಾತು ಪೋಸ್ಟರ್ ಗೆ  ಕಿಡಿಗೇಡಿಗಳು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿ ವಿಕೃತಿ ಮೆರೆಯುತ್ತಿದ್ದು ಇದರ ವಿರುಧ್ಧ ಉಡುಪಿ ಸೈಬರ್ ಕ್ರೈಂ ನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉದ್ಯಾವರದ ಯಶಸ್ವಿ ವ್ಯಾಪರೀ ಮಳಿಗೆಯಾದ ಜಯಲಕ್ಷ್ಮಿ ಸಿಲ್ಕ್ಸ್ ನ ಜಾಹೀರಾತಿನಲ್ಲಿ ಮಂಗಳವಾರ ಮಧ್ಯಾಹ್ನದವರೆಗೆ ಮಾತ್ರ ತೆರೆದಿರುತ್ತದೆ ಎಂದು ಬರೆದಿರುವ ಜಾಗದಲ್ಲಿ ಮುಸ್ಲಿಂ ಗ್ರಾಹಕರ ಅಗತ್ಯ ಇಲ್ಲ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ  ಶೇರ್ ಮಾಡಲಾಗುತ್ತಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಜಯಲಕ್ಷ್ಮಿ ಸಿಲ್ಕ್ ನ ಮಾಲಕರಾದ ವೀರೇಂದ್ರ ಹೆಗ್ಡೆ ಯವರು  “ ಜಯಲಕ್ಸ್ಮಿ ಸಿಲ್ಕ್ಸ್ ನ ಹೆಸರಿನಲ್ಲಿ ಈಗಾಗಲೇ ಅಪಪ್ರಚಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ವ್ಯಾಪಾರದ ಏಳಿಗೆಯನ್ನು ಸಹಿಸದ ಕಿಡಿಗೇಡಿಗಳು ಈ ರೀತಿಯ ವಿಕೃತಿ ಮೆರೆಯುತ್ತಿದ್ದಾರೆ. ಇದರ ಕುರಿತಾಗಿ ಉಡುಪಿ ಸೈಬರ್ ಕ್ರೈಂ ಗೆ ಪ್ರಕರಣ ದಾಖಲಿಸಿದ್ದೇವೆ. ಶೀಘ್ರದಲ್ಲಿಯೇ ಕಿಡಿಗೇಡಿಗಳ ಬಂಧನವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.


ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget