ಕೊರೋನಾ ಅಟ್ಟಾಹಾಸ,ಸಂಕಷ್ಟದಲ್ಲಿ ಪತ್ರಿಕೋದ್ಯಮ-ವಸಂತ್ ಬಿಂಬ

ಕೊರೋನಾ ಅಟ್ಟಾಹಾಸ,ಸಂಕಷ್ಟದಲ್ಲಿ ಪತ್ರಿಕೋದ್ಯಮ-ವಸಂತ್ ಬಿಂಬ

ಕಾರ್ಕಳ:ವಿಶ್ವವೇ ಇಂದು ಕೊರೋನಾದ ಸಂಕಷ್ಟದಲ್ಲಿದೆ. ಬದುಕಿರುವ ಎಲ್ಲರಲ್ಲೂ ಈಗ ಕಾಡುವುದು ಒಂದೇ ಪ್ರಶ್ನೆ. ಈ ಹಿಂದೆ ನಾವು ಕಂಡ ಬದುಕು ಮುಂದಿನ ದಿನಗಳಲ್ಲಿ ಹೇಗಿರಬಹುದು ಎಂದು.ಆಧುನಿಕ ವ್ಯವಸ್ಥೆಯಲ್ಲಿ ಬಹಳ ವ್ಯವಸ್ಥಿತವಾಗಿ ಬದುಕು ಕಂಡವರಿಗೆಲ್ಲಾ ಭೀತಿ ಆರಂಭವಾಗಿದೆ. ನಮ್ಮ ಮಕ್ಕಳ ಕಾಲಕ್ಕೆ ಪುನ: ನಾವು ಮಕ್ಕಳಿರುವ ಸಂಧರ್ಭ ಕಾಲ ಘಟ್ಟಬರುವುದೋ ಎಂದು. ದೇಶ-ವಿದೇಶಗಳಲ್ಲಿ ದೊಡ್ಡ ಹುದ್ದೆ ಗಳಲ್ಲಿರುವವರು, ಉದ್ಯಮಿಗಳು, ಬಹಳಷು ಐಶಾರಾಮಿ ಬದುಕನ್ನು ಕಂಡ ವರಿಗೆಲ್ಲಾ ಮುಂದಿನ ಕಾಲ ಘಟ್ಟ ಹೇಗಿರ ಬಹುದು ಎಂಬ ಭಯ ಕಾಡುವುದು ಸಹಜವೇ.


ನಾವು ಸಣ್ಣವರಿರುವಾಗ ನಮ್ಮ ಹಿರಿಯರ ದೈಹಿಕ ಶಕ್ತಿ ಕೃಷಿ, ಕೂಲಿ ಕೆಲಸ ಮಾಡಿಯೇ ಗಟಿಗಿತ್ತು. ಆದರೆ ನಾವು ಮಾತ್ರ ಕೃಷಿ ಕಾರ್ಯ ಮಾಡದೆ ಉದ್ಯೋಗಗಳಲ್ಲಿ, ಉದ್ಯಮದಲ್ಲಿ ನಮ್ಮ ಬಹುಪಾಲು ಬದುಕನ್ನು ಕಳೆದಿದ್ದೇವೆ. ಪುನ: ಕೃಷಿ ಕೆಲಸ ಮಾಡುವ ಶಕ್ತಿ ನಮ್ಮ ಲ್ಲಿಲ್ಲ. ಇವೆಲ್ಲದರ ಬಗ್ಗೆ ಆಲೋಚಿಸಿಯೇ ಬಹಳಷ್ಟು ಜನ ಭೀತರಾಗಿದ್ದಾರೆ.     ಮುಂದಿನ ದಿನಗಳಲ್ಲಿ ಉದ್ಯಮ ರಂಗ ಈ ಹಿಂದಿನ ರೀತಿ ನಮ್ಮ ಪೀಳಿಗೆಯ ಅವಧಿಯಲ್ಲಿ ಮುನ್ನಡೆ ಸಾಧಿಸಬಹುದೇ.... ಕೊರೋನಾ ಎಲ್ಲವನ್ನೂ ಹಾಳು ಮಾಡಿದೆ.     ಪತ್ರಿಕೆಗಳಿಗೂ ಸಂಕಷ್ಟ     ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಯಾವುದೇ ಕಾರ್ಯಗಳಾದರೂ ಆಯಾಯ ಪ್ರದೇಶಕ್ಕೆ ಸಂಬAಧಪಟ್ಟ ಪತ್ರಿಕೆಗಳು ವರದಿ ಮಾಡುತ್ತಿದ್ದವು.     ಸಾಮಾಜಿಕ ಬದುಕಿನಲ್ಲಿ ಯಾರಿಗಾ ದರೂ ತೊಂದರೆಯಾದಾಗ ಪತ್ರಕರ್ತರು ಆ ಪರಿಸ್ಥಿತಿಯ ಅಥವಾ ತೊಂದರೆಗೊಳಗಾದ ವ್ಯಕ್ತಿಯ ಬದುಕಿನ ಚಿತ್ರಣವನ್ನು ಪತ್ರಿಕೆಗಳಲ್ಲಿ ಬಿತ್ತರಿಸು ತ್ತಿದ್ದರು. ನ್ಯಾಯ ಸಿಗುವವರೆಗೆ ವರದಿ ಮುಂದುವರಿಯುತ್ತಿತ್ತು.     ಅದೆಷ್ಟೋ ಮಂದಿ ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಸಂಘ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ಬೇಕಾದಾಗ ಪತ್ರಕರ್ತರೇ ವರದಿ ತಯಾರಿಸಿ ಎಲ್ಲೆಲ್ಲಿಂದಲೋ ಹಣ ತರಿಸಿ ಅವರ ಅವಶ್ಯಕತೆ ಪೂರೈಸುತ್ತಿದ್ದರು.

 

ಆದರೆ ಕೊರೋನಾ ಎಂಬ ಮಹಾ ಮಾರಿ ಪತ್ರಿಕೋದ್ಯಮವನ್ನೂ ಮುಚ್ಚ ಹೊರಟಿದೆ.     ರಾಜ್ಯ, ಜಿಲ್ಲೆಯಲ್ಲಿರುವ ಪ್ರಭಾವಿ ಪತ್ರಿಕೆಗಳೇ ಇಂದು  ತಮ್ಮ ಪುಟಗಳನ್ನು ಕಡಿಮೆ ಮಾಡಿವೆ. ಬಹುತೇಕ ಜಿಲ್ಲಾ ಪತ್ರಿಕೆಗಳು ಮುದ್ರಣ ಮಾಧ್ಯಮದಿಂದ ಇ-ಪೇಪರ್‌ಗೆ ರೂಪಾಂತರಗೊಂಡಿದೆ. ಇ- ಪೇಪರ್‌ನಿಂದಾಗಿ   ಜಾಹೀರಾತು ವಿಭಾಗದ ಸಿಬ್ಬಂದಿ, ಬಹುತೇಕ ವರದಿ ಗಾರರು, ಪ್ರಸರಣ ವಿಭಾಗದ ಸಿಬ್ಬಂದಿ, ಪ್ಯಾಂಕಿಗ್ ಕಾರ್ಮಿಕರು, ಪತ್ರಿಕೆ ಸಾಗಾಟ ಮಾಡುವ ವಾಹನ ಮಾಲಕರು, ಪತ್ರಿಕೆ ಹಾಕುವ ಏಜೆಂಟರು ಹೀಗೆ ಸರಣಿ ಉದ್ಯೋಗಿಗಳು ಕೆಲಸವಿಲ್ಲದೆ ಸಂಕಷ್ಟದತ್ತ ಸಾಗಿದ್ದಾರೆ.     ಪತ್ರಿಕೆಗಳು ನೆಚ್ಚಿಕೊಂಡಿರುವುದು ಜಾಹೀರಾತನ್ನೇ, ಜಾಹೀರಾತು ಆದರಿಸಿ ಪತ್ರಿಕೆಗಳಲ್ಲಿ ಪುಟಗಳ ಸಂಖ್ಯೆ ಯಿರುತ್ತದೆ. ಜಾಹೀರಾತು  ಆಧರಿಸಿ ಪ್ರಸರಣ ಸಂಖ್ಯೆಯನ್ನು ನಿರ್ಧರಿಸ ಲಾಗುತ್ತದೆ. ಸಿಬ್ಬಂದಿಗಳ ವೇತನ ನಿರ್ಧರಿಸ ಲಾಗುತ್ತದೆ. ಆದರೆ ಇಂದು ಜಾಹೀ ರಾತು ಕ್ಷೇತ್ರವೇ ನೆಲಕಚ್ಚಿದೆ.     ಮುದ್ರಣ ಮಾಧ್ಯಮಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಸ್ವಾತಂತ್ರö್ಯ ಸಂಗ್ರಾಮಗಳ ಸಂದರ್ಭ ಹಲವಾರು ಕಡೆಗಳಲ್ಲಿ ಕಾಗದಗಳಲ್ಲಿ ಮಾಹಿತಿ ಬರೆದು, ಮೊಳೆಯಚ್ಚಿನಲ್ಲಿ ಮುದ್ರಿಸಿ ಹಂಚಿದ ಉದಾಹರಣೆಗಳಿವೆ. ಸ್ವಾತಂತ್ರö್ಯ ಸಂಗ್ರಾಮವನ್ನು ಜಾಗೃತ ಸ್ಥಿತಿಯಲ್ಲಿಡುವ ಕರ‍್ಯ ಈ ಸಂದರ್ಭ ದಲ್ಲೂ ನಡೆದಿತ್ತು.     ಸ್ವಾತಂತ್ರö್ಯ ಸಂದರ್ಭ ಪತ್ರಿಕೆಗಳನ್ನು ಪ್ರಕಟಿಸಿದ, ಹಂಚಿದ ಹಲವಾರು ಮಂದಿ ಪೊಲೀಸರ ಏಟು ತಿಂದು ಜೈಲು ಸೇರಿದ ನಿದರ್ಶನಗಳಿವೆ.     ಭಾರತಕ್ಕೆ ಸ್ವಾತಂತ್ರö್ಯ ದೊರೆತ ನಂತರದ ದಿನಗಳಲ್ಲಿ ಪತ್ರಿಕೋದ್ಯಮ ಗಟ್ಟಿಯಾಗುತ್ತಾ ಸಾಗಿದೆ. ಬಳಿಕದ ದಿನಗಳಲ್ಲಿ ಇಲೆಕ್ಟಾçನಿಕ್ ಮಾಧ್ಯಮಗಳು ಕೂಡಾ ಜನರಿಗೆ ದೇಶ ವಿದೇಶಗಳ ಮಾಹಿತಿಯನ್ನು ಕ್ಷಣ ಮಾತ್ರöದಲ್ಲಿ ನೀಡುವ ಪೈಪೋಟಿಯಲ್ಲಿದೆ.     ಆದರೆ ಇಂದು ಎಲ್ಲವೂ ತಲೆ ಕೆಳಗಾಗಿದೆ. ಮುದ್ರಣ ಮಾಧ್ಯಮ, ಇಲೆಕ್ಟಾçನಿಕ್ ಮಾಧ್ಯಮಕ್ಕಿದ್ದ ಉದ್ಯಮ ಕ್ಷೇತ್ರದ ಜಾಹೀರಾತು ಒಪ್ಪಂದ ಮುಗಿಯುತ್ತಾ ಬಂದಿದೆ. ಬಹುತೇಕ ಮುಗಿದೇ ಹೋಗಿದೆ. ಪತ್ರಿಕೆಗಳು ಬಡಕ ಲಾಗಿದೆ. ಇಲೆಕ್ಟಾçನಿಕ್ ಮಾಧ್ಯಮವೂ ನೆಲಕಚ್ಚುವ ಸ್ಥಿತಿಯಲ್ಲಿದೆ.

 ನೀರಿಗೆ ಬಿದ್ದಾಗಿದೆ, ಮುಳುಗುವ ಮೊದಲು ಕೈ ಕಾಲು ಬಡಿದರೆ ಮಾತ್ರ ಜೀವ ಉಳಿಯಬಲ್ಲುದು. ಇಂದು ಪತ್ರಿಕೋದ್ಯಮಕ್ಕೂ ಅದೇ ಸ್ಥಿತಿ. ಪತ್ರಿಕೋದ್ಯಮವೆಂಬ ಆಳವಾದ ಸಮುದ್ರಕ್ಕೆ ಬಿದ್ದಾಗಿದೆ. ಕಾಲು ಬಡಿಯಲೇಬೇಕು. ಇಲ್ಲದಿದ್ದಲ್ಲಿ ನೂರಾರು ವರ್ಷಗಳ ಕ್ರಾಂತಿಕಾರಿ ಇತಿಹಾಸವಿರುವ ಪತ್ರಿಕೋದ್ಯಮ ಉಸಿರು ನಿಲ್ಲಿಸಿಯೇ ಬಿಡುತ್ತವೆ.     ಹಾಗಾಗಬಾರದು... ರಾಜಕಾರಣ, ಸಾಮಾಜಿಕ, ಶೈಕ್ಷಣಿಕ, ಕೃಷಿ, ಕಲೆ, ಸಾಹಿತ್ಯ ಇವೆಲ್ಲವೂ ಬೆಳೆ ಯಲು, ಬೆಳಗಲು, ಪತ್ರಿಕೆಗಳ ಪಾತ್ರ ಮಹತ್ತರವಾದುದು. ಯಾವುದೇ ಕ್ಷೇತ್ರ ಗಳ ಕಾರ್ಯಗಳಾದರೂ ಪತ್ರಿಕೋದ್ಯಮ ಕ್ಷೇತ್ರ ಧಾವಿಸಿ ಹೋಗಿ ಅವುಗಳ ವರದಿ ತಯಾರಿಸಿ ಓದುಗ ಬಂಧುಗಳಿಗೆ ನೀಡಿದ್ದಿದೆ.    ಪರಿಹಾರವೇ ಕಾಣದ ಸಮಸ್ಯೆಯ ಬಗ್ಗೆ ವರದಿ ತಯಾರಿಸಿ ಪರಿಹಾರ ಆಗುವವರೆಗೆ ಪಟ್ಟು ಬಿಡದೆ ಬೆನ್ನಟ್ಟಿದ ಹಲವಾರು ನಿದರ್ಶನಗಳಿವೆ. ಅದೆಷ್ಟೋ ಮಂದಿ ಪತ್ರಿಕೆಗಳ ವರದಿ ಯಿಂದಲೇ ಸಾರ್ಥಕತೆ ಕಂಡವ ರಿದ್ದಾರೆ.     ಪತ್ರಿಕೋದ್ಯಮದ ಈ ಸಂಕಷ್ಟದ ಕಾಲಘಟ್ಟದಲ್ಲಿ ಓದುಗ ಬಂಧುಗಳ ಸಹಕಾರದಿಂದ ಮಾತ್ರ ಪತ್ರಿಕೆಗಳು ಬೆಳಗಲು ಸಾಧ್ಯ.

                              -ವಸಂತ್ ಕುಮಾರ್ ಬೆಳ್ತಂಗಡಿ,ವ್ಯವಸ್ಥಾಪಕ ಸಂಪಾದಕರು ಮಾಧ್ಯಮ ಬಿಂಬ

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget