ಕ್ವಾರಂಟೈನ್ ನಲ್ಲಿ ಇರುವವರಿಗೆ ವೆಂಕಟರಮಣ ದೇವಸ್ಥಾನದ ವತಿಯಿಂದಲೇ ಊಟದ ವ್ಯವಸ್ಥೆ:
ಕಾರ್ಕಳ: ಮುಂಬಯಿ ಹಾಗೂ ಇತರ ಹೊರ ರಾಜ್ಯಗಳಿಂದ ಬಂದಿರುವ ಮೂಲತಃ ಕಾರ್ಕಳದ ಜನತೆಗೆ ನಗರದ ವಿವಿಧ ಸ್ಥಳಗಳಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು ಸುಮಾರು ೧೦ ಕೇಂದ್ರಗಳಲ್ಲಿ ೧೪ ದಿನಗಳ ಕಾಲ ಅಂದಾಜು ೬೦೦ಕ್ಕೂ ಮಿಕ್ಕಿ ಜನರಿಗೆ ಉಟೋಪಚಾರ ವ್ಯವಸ್ಥೆಯನ್ನು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ವತಿಯಿಂದ ನೀಡಲಾಗುತ್ತಿದೆ.
ಬೆಳಗ್ಗಿನ ಉಪಹಾರ, ಮದ್ಯಾಹ್ನ ಭೋಜನ, ರಾತ್ರಿ ಊಟವನ್ನು ಆಯಾಯ ಕೇಂದ್ರಗಳಿಗೆ ತಲುಪಿಸುವ ಕಾರ್ಯವನ್ನು ಸ್ವಯಂ ಸೇವಕರು ಮಾಡುತ್ತಿದ್ದಾರೆ.
ಗುರುವಾರದಂದು ಊಟ ಉಪಹಾರ ತಯಾರಿ ಆಗುವ ಸ್ಥಳಕ್ಕೆ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಭೇಟಿ ನೀಡಿ ಶ್ರೀವೆಂಕಟರಮಣ ದೇವಸ್ಥಾನದ ಸ್ವಯಂ ಸೇವಕರು, ಪುರಸಭೆ ಅಧಿಕಾರಿಗಳು ಹಾಗೂ ಪಾಕ ತಜ್ಞರೊಡನೆ ಸಭೆ ನಡೆಸಿ ವ್ಯವಸ್ಥೆಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಶ್ರೀ ವೆಂಕಟರಮಣ ದೇವಳದ ಆಡಳಿತ ಮಂಡಳಿಯವರ ಸಹಕಾರಕ್ಕೆ ಸರಕಾರದ ಪರವಾಗಿ ಕೃತಜ್ಞತೆ ಸಲ್ಲಿಸಿದರು.
Post a comment