"ಅರ್ಚಕರನ್ನು ನಡೆಸಿಕೊಂಡ ರೀತಿ ಖೇಧಕರ"-ಯುವ ಕಾಂಗ್ರೆಸ್ ಖಂಡನೆ-Times Of karkala

"ಅರ್ಚಕರನ್ನು ನಡೆಸಿಕೊಂಡ ರೀತಿ ಖೇಧಕರ"-ಯುವ ಕಾಂಗ್ರೆಸ್ ಖಂಡನೆ-Times Of karkala

ಇನ್ನಾ: ದೇವಸ್ಥಾನದ ಅರ್ಚಕರಿಗೆ ಕಿಟ್ ನೀಡಲು ಕಾರ್ಕಳಕ್ಕೆ ಕರೆಯುವ ಪ್ರಕ್ರಿಯೆ ನಿಜಕ್ಕೂ ಬೇಸರ ತಂದಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೊರೊನಾ ಹಿನ್ನಲೆಯಲ್ಲಿ ಲಾಕ್ ಡೌನ್ ಉಂಟಾದಾಗ ಅರ್ಚಕರಿಗೆ ಕಿಟ್ ನೀಡಲಿಕ್ಕಾಗಿ ಕಾರ್ಕಳಕ್ಕೆ ಕರೆಯಲಾಗಿತ್ತು. ತೀರಾ ಗ್ರಾಮಾಂತರ ಪ್ರದೇಶದ ದೇವಸ್ಥಾನಗಳಲ್ಲಿರುವ ಅರ್ಚಕರನ್ನು ದೂರದ ಕಾರ್ಕಳಕ್ಕೆ ಕರೆದಿರುವುದು ಅಧಿಕಾರದ ದುರುಪಯೋಗ ಮಾಡಿದಂತೆ. ಅರ್ಚಕರು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಧಾನ ಪಾತ್ರವಹಿಸುತ್ತಾರೆ. ಹಿಂದೂ ಧರ್ಮದ ತಳಹದಿಗೆ ದೇವಸ್ಥಾನಗಳ ಪಾತ್ರ ಮಹತ್ತರವಾದುದು. ಇವೆಲ್ಲವೂ ಎಲ್ಲರಿಗೂ ತಿಳಿದುದ್ದಾಗಿದೆ. 

ಆದರೆ ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡಿದವರು, ಚುನಾ ವಣೆಯಲ್ಲಿ ವಿಜಯಿಯಾದವರು. ಬರೆಯ ಆಹಾರ ಕಿಟ್‌ಗಾಗಿ ಪರಮ ಪೂಜ್ಯ ಅರ್ಚಕರನ್ನು ಕಾರ್ಕಳಕ್ಕೆ ಬರ ಹೇಳಿರುವುದು ಶೋಭೆ ತರುವಂತದ್ದಲ್ಲ. ದಾರ್ಮಿಕ ಕಾರ್ಯಗಳಿಗೆ ಅರ್ಚಕರು  ಬೇಕೆ ಬೇಕು. ಅವರು ಪರಮ ಪೂಜ್ಯರು. ಅರ್ಚಕರಿಲ್ಲದೆ  ದೇವಸ್ಥಾನ ಗಳಲ್ಲಿ ಧಾರ್ಮಿಕ ಕಾರ್ಯ ನಡೆಯು ವುದಿಲ್ಲ. ಹುಟ್ಟಿನಿಂದ ಸಾವಿನವರೆಗೆ
ಎಲ್ಲರಿಗೂ ಎಲ್ಲಾ ಕಾರ್ಯಕ್ಕೂ ಅರ್ಚಕರು ಬೇಕೇ ಬೇಕು.ಇವೆಲ್ಲವೂ ಎಲ್ಲರಿಗೂ ತಿಳಿದಿದ್ದರೂ ಅರ್ಚಕರನ್ನು ಕಾರ್ಕಳದ ಜನಪ್ರತಿನಿಧಿಗಳು ಕಾರ್ಕಳಕ್ಕೆ ಬಂದು ಆಹಾರ ಕಿಟ್ ಕೊಂಡೊಯ್ಯಿರಿ ಎಂಬ ಸಂದೇಶ ನೀಡಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. 

ಕಾಂಗ್ರೇಸ್ ಸರಕಾರ ಅಧಿಕಾರದಲ್ಲಿ ಇದ್ದಾಗ  ಎಂದು ಕೂಡಾ ಅರ್ಚಕರನ್ನು ಕೀಳಾಗಿ ಕಂಡದ್ದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ  ಕಾರ್ಕಳದ ರಾಜಕೀಯ ಆಡಳಿತದ ಅವಧಿಯಲ್ಲಿ ಇಂತಹ ಹಲವಾರು ದುರ್ವರ್ತನೆ ತರುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ನಕಲಿ ಹಿಂದುತ್ವದ ಮುಖವಾಡವನ್ನು  ಬಯಲಿಗೆಳೆಯಲು ಯುವ ಕಾಂಗ್ರೆಸ್ ನಿರಂತರವಾಗಿ ಶವ್ರಿÄಸಲಿದೆ ಎಂದು ಅವರು ತಿಳಿಸಿದ್ದಾರೆ 
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget