June 2020

ಪೊರ್ತು ಚಾರಿಟೇಬಲ್ ಟ್ರಸ್ಟ್ ತುರ್ತು ಸೇವಾಯೋಜನೆ ಕ್ರಮಾಂಕ 4 - ಫಲಾನುಭವಿ  -  ಭಾಸ್ಕರ್ ಪರಿವಾರ 

ಕ್ಯಾನ್ಸರ್ ನಿಂದ ಹಾಸಿಗೆ ಹಿಡಿದ ಮನೆಯ ಯಜಮಾನ, ದಯನೀಯವಾಗಿದೆ ಮನೆಯವರ ಬದುಕು, ಆಸರೆಯಾಗಬೇಕಿದೆ ದಾನಿಗಳು.. ..
   
 28.06.2020 

ಜೀವನೋಪಾಯಕ್ಕಾಗಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಕಾರ್ಕಳ ತಾಲೂಕು, ಮುನಿಯಾಲಿನ ಭಾಸ್ಕರ್ ಅವರು, ತನ್ನ ಪತ್ನಿ, ಮಗು, ಅಮ್ಮ , ಅಕ್ಕ ಮತ್ತು ಅಕ್ಕನ ಮೂವರು ಮಕ್ಕಳು, ಅವರ ವಿದ್ಯಾಭ್ಯಾಸ, ಅಕ್ಕನ ಹಿರಿಯ ಮಗಳು 23 ವರ್ಷಗಳಿಂದ ಹುಟ್ಟು ಬುದ್ದಿ ಮಾಂದ್ಯೆ. ಹೀಗೆ ಎಲ್ಲರ ಜವಾಬ್ದಾರಿ ಹೊತ್ತು ಬಂದ ಆದಾಯದಲ್ಲಿ ಎಲ್ಲವನ್ನೂ ಸರಿದೂಗಿಸುತ್ತಾ ನೆಮ್ಮದಿಯಾಗಿದ್ದವರು. ಮನೆಯ ಎಲ್ಲಾ ಖರ್ಚು ವೆಚ್ಚಗಳಿಗೂ   ಭಾಸ್ಕರ್ ಅವರನ್ನೇ ಅವಲಂಭಿಸಿತ್ತು ಈ ಪರಿವಾರ. ಎರಡುವರೆ ವರ್ಷದ ಹಿಂದೆ ಬಾಯಿಯ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಆಯುಷ್ಮಾನ್ ಆರೋಗ್ಯ ವಿಮೆಯ ಮೂಲಕ 8 ಕೆಮಿಯೋಥೆರಪಿ ನಡೆಸಿ, ಸ್ವಲ್ಪ ಚೇತರಿಸಿಕೊಂಡಿದ್ದ ಬಾಸ್ಕರ್ ಅವರಿಗೆ  ಮತ್ತೆ ಬಾಯಲ್ಲಿ ಈ ಹಿಂದೆ ಚಿಕಿತ್ಸೆ ಕೊಡಿಸಿದ ಜಾಗದಲ್ಲೆ ಮತ್ತೆ ಹುಣ್ಣು ಆಗ ತೊಡಗಿತು ಹುಣ್ಣು ಗೆಡ್ಡೆ ರೂಪದಲ್ಲಿ ಮಾಂಸದ ತುಂಡಿನಂತೆ ಬಾಯಿಯಲ್ಲಿ ಕಾಣತೊಡಗಿತ್ತು. ಮತ್ತೆ ವೈದ್ಯರ ಬಳಿ ತೆರಳಿದಾಗ ಇದಕ್ಕೆ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕು ಎಂದು ತಿಳಿಸಿದಾಗ, ಹೆಲ್ತ್ ಕಾರ್ಡ್ ನ ಮಿತಿ ಈಗಾಗಲೇ ಮುಗಿದಿದ್ದು,  ಹೇಗೊ ದಾನಿಗಳ ನೆರವು, ಮನೆಯ ಮೇಲೆ ಸಾಲ, ಗೆಳೆಯರ ಸಹಾಯದಿಂದ ಅವರ ಶಸ್ತ್ರಚಿಕಿತ್ಸೆ ಹತ್ತು ತಿಂಗಳ ಹಿಂದೆ ಮಾಡಿಸಿದ್ದು ,ಶಸ್ತ್ರಚಿಕಿತ್ಸೆ ನಂತರ ಸುಮಾರು ನಾಲ್ಕು ರೆಡಿಯೇಷನ್ ಮಾಡಿಸಿದರೂ ನೋವು ಇನ್ನೂ ಹಾಗೆ ಇದ್ದು ಗಂಜಿಯನ್ನು ಕಡೆದು ಕುಡಿಸುತ್ತಿದ್ದಾರೆ  ಮನೆಯವರು..

 ಸದ್ಯಕ್ಕೆ ಮನೆಯ ಎಲ್ಲಾ  ಖರ್ಚು ವೆಚ್ಚ ಇವರ ಅಕ್ಕ ಬೀಡಿ ಕಟ್ಟಿ ತರುವ  ಆದಾಯದಿಂದ ಆಗಬೇಕಿದ್ದು ಇವರ ಹೆಂಡತಿಗೆ ಇವರನ್ನು ನೋಡಿಕೊಳ್ಳಲು, ಮನೆ ಕೆಲಸ ಮಾಡುವ ಸ್ಥಿತಿಯಲ್ಲಿ ಎಲ್ಲೂ ಕೆಲಸಕ್ಕೂ ಹೋಗಲಾಗುತ್ತಿಲ್ಲ ಮತ್ತು ಇವರಿಗೆ ಒಂದು ಚಿಕ್ಕ ಮಗು ಕೂಡ ಇದೆ. ಭಾಸ್ಕರ್ ಅವರ ಅಕ್ಕನ  3 ಮಕ್ಕಳಲ್ಲಿ, ಒಬ್ಬ S.S.L.C .ಓದುತಿದ್ದು ಉತ್ತಮ ಕ್ರೀಡಾಪಟು. ಇನ್ನೊಬ್ಬ ಮಗ  ಪ್ರಥಮ ವರ್ಷದ P.U.C. ಕಲಿಯುತಿದ್ದಾನೆ. 23 ವರ್ಷದ  ಹಿರಿಯ ಮಗಳು ಬುದ್ದಿಮಾಂದ್ಯೆ,ಇವಳ ಚಿಕಿತ್ಸೆಗೂ ಸುಮಾರು ಖರ್ಚು ಮಾಡಿದ್ದು ಯಾವುದೆ ಉಪಯೋಗ ಆಗಲಿಲ್ಲ. ಹೀಗೆ ಕಷ್ಟಗಳ ಸುಳಿಗೆ ಸಿಕ್ಕಿ,  ಮನೆಯಲ್ಲಿ ದುಡಿದು ಸಂಪಾದಿಸುತಿದ್ದ ಯಜಮಾನ ಕಾಯಿಲೆಯಿಂದ ಹಾಸಿಗೆ ಹಿಡಿದು, ಆತನ ಚಿಕಿತ್ಸೆಗೆ, ಸಾಲ, ಸೋಲ ಮಾಡಿಯೂ ಗುಣಮುಖನಾಗದೆ,  ದಿಕ್ಕು ತೋಚದೆ, ಜೀವನ ನಿರ್ವಹಣೆಗೆ ದಾರಿ ಕಾಣದೆ ಪರದಾಡುತ್ತಿರುವ ಕುಟುಂಬದ ಅಸಹಾಯಕ ಸ್ಥಿತಿ ಪರಿಗಣಿಸಿ, ಈ ಕುಟುಂಬಕ್ಕೆ  ನೆರವಾಗಲು, ಪೊರ್ತು ಚಾರಿಟೇಬಲ್ ಟ್ರಸ್ಟ್ (ರಿ)  ರೂ. 30,000 ದ ಧನಸಂಗ್ರಹದ  ಗುರಿಯೊಂದಿಗೆ, ತನ್ನ ತುರ್ತು ಯೋಜನೆಯ ಫಲಾನುಭವಿಯನ್ನಾಗಿ ಭಾಸ್ಕರ್  ಅವರ ಕುಟುಂಬವನ್ನು ಆರಿಸಿದೆ. ತಮ್ಮ ಭವಿಷ್ಯದ ದಾರಿ ಕಾಣದೆ ಅಂಧಕಾರದಲ್ಲಿ ಮುಳುಗಿರುವ ಈ ಪರಿವಾರಕ್ಕೆ ಭವಿಷ್ಯದ ಬೆಳಕು ತೋರಿಸುವ ಪುಟ್ಟ ಪ್ರಯತ್ನ ಮಾಡೋಣ. ಬನ್ನಿ ತಮ್ಮ ಕೈಲಾದ ಮೊತ್ತ ಕೆಳಗೆ ನೀಡಿರುವ  ಲಿಂಕ್ ಮೂಲಕ ಧನಸಹಾಯ ಮಾಡಿ, ಮಾನವೀಯತೆ ಮೆರೆಯೋಣ.
http://ket.to/Porthucharitabletrust-emergency-fundraising

ಧನ್ಯವಾದಗಳು,
 ಪೊರ್ತು ಆಡಳಿತ ಮಂಡಳಿ 

Times Of karkala whatsapp Group link:
ಜಾಹೀರಾತು 


ಜಾಹೀರಾತು 
ಜಾಹೀರಾತು 
Add caption


ಜಾಹೀರಾತು 
https://wa.me/919945283600
ಜಾಹೀರಾತು 

ಜಾಹೀರಾತು 

ಜಾಹೀರಾತು 
ಜಾಹೀರಾತು 


ಕೊರೋನಾ ಸಂಕಷ್ಟ:ಸಹಾಯಕ್ಕೆ ಧಾವಿಸಿದ ಬಜರಂಗದಳ ಸಾಣೂರು ವಲಯ 

ಕೋರೋನ ಸೊಂಕಿನಿಂದ ಚಿಕಿತ್ಸೆಗೆ ಒಳಗಾಗಿ ಇದೀಗ ಸಂಪೂರ್ಣ ಗುಣಮುಖರಾಗಿ ಹೊರಬಂದಿರುವ ಸಾಣೂರು ವಲಯ ಬಜರಂಗದಳ ಕಾರ್ಯಕರ್ತನ ಒಂದು ಕುಟುಂಬ ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಣೂರು ವಲಯ 3 ತಿಂಗಳ ರೇಷನ್ ಕಿಟ್ ನೀಡಿ ಸಹಕರಿಸಿದರು.

 ಬಜರಂಗದಳ ಪ್ರಾಂತ ಸಂಯೋಜಕರಾದ ಸುನಿಲ್ ಕೆ.ಆರ್, ವಿಶ್ವ ಹಿಂದೂ ಪರಿಷದ್ ಕಾರ್ಕಳ ಪ್ರಖಂಡ ಉಪಾಧ್ಯಕ್ಷರಾದ ಜಗದೀಶ್ ಸಾಣೂರು, ಅಶೋಕ್ ಪಾಲಡ್ಕ, ಸಹ ಕಾರ್ಯದರ್ಶಿ ಸುಧಿರ್ ನಿಟ್ಟೆ, ಮತ್ತು ವಲಯ ಸಂಚಾಲಕ್ ಶರತ್ ಸಾಣೂರು ಸಹ ಸಂಚಾಲಕ್ ಶೈಲೇಶ್ ಸಾಣೂರು ಹಾಗೂ ಜವಾಬ್ದಾರಿಯುತ ಕಾರ್ಯಕರ್ತರು ಉಪಸ್ಥಿತರಿದ್ದರು.

Times Of karkala whatsapp Group link:

ಜಾಹೀರಾತು 

ಜಾಹೀರಾತು 
ಜಾಹೀರಾತು 
Add caption

ಜಾಹೀರಾತು 
https://wa.me/919945283600
ಜಾಹೀರಾತು 

ಜಾಹೀರಾತು 

ಜಾಹೀರಾತು 
ಜಾಹೀರಾತು ರೋಟರಿ ಕ್ಲಬ್ ಕಾರ್ಕಳ ಹಾಗೂ ಆ್ಯನ್ಸ್ ಕ್ಲಬ್ ಕಾರ್ಕಳ ಇದರ ವತಿಯಿಂದ ಉಡುಗೆ ವಿತರಣೆ-Times of karkala  

ರೋಟರಿ ಕ್ಲಬ್ ಕಾರ್ಕಳ ಹಾಗೂ ಆ್ಯನ್ಸ್ ಕ್ಲಬ್ ಕಾರ್ಕಳ ಇದರ ವತಿಯಿಂದ   ದಿನಾಂಕ ಜೂನ್ 29 ರಂದು  ಕಾಂತಾವರದ ಬಡಕುಟುಂಬದ ಮೂರು ಹೆಣ್ಣುಮಕ್ಕಳಿಗೆ ದಿನನಿತ್ಯದ ಉಡುಗೆಗಳನ್ನು  ಮಹಿಳಾ ಸಹಾಯವಾಣಿ ಕೇಂದ್ರ ಕಾರ್ಕಳ ಇದರ ಮುಖಾಂತರ ,  ಅವರಿಗೆ ಹಸ್ತಾಂತರಿಸಲಾಯಿತು . ಈ ಕಾರ್ಯಕ್ರಮದಲ್ಲಿ  ಮಹಿಳಾ ಸಹಾಯವಾಣಿ ಕೇಂದ್ರ ಕಾರ್ಕಳ ಅಧ್ಯಕ್ಷರಾಗಿರುವ ಯಶೋದ ಶೆಟ್ಟಿಯವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ  ರೇಖಾ ಉಪಾಧ್ಯಾಯ, ಕಾರ್ಯದರ್ಶಿ  ಶಶಿಕಲಾ ಹೆಗಡೆ, ರೋಟರಿ ಆನ್ಸ್ ನಿಯೋಜಿತ ಅಧ್ಯಕ್ಷೆ ರಮಿತಾ ಶೈಲೆಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್ ಮತ್ತು ಸುವರ್ಣ ನಾಯಕ್ ,ವೃಂದಾ ಹರಿಪ್ರಕಾಶ್ ಶೆಟ್ಟಿ ಹಾಗೂ ಕೌಟುಂಬಿಕ ಸಮಾಲೋಚಕಿ ಸುನೀತಾ ರವರು ಉಪಸ್ಥಿತರಿದ್ದರು .

Times Of karkala whatsapp Group link:

ಜಾಹೀರಾತು 
ಜಾಹೀರಾತು 
ಜಾಹೀರಾತು 
Add caption

ಜಾಹೀರಾತು 
https://wa.me/919945283600
ಜಾಹೀರಾತು 

ಜಾಹೀರಾತು 

ಜಾಹೀರಾತು 
ಜಾಹೀರಾತು ಕಾರ್ಕಳ ರೋಟರಿಯ ಈ ಕಾರ್ಯಕ್ಕೆ ದೇಶ ವಿದೇಶದಿಂದ ಬೆಂಬಲ-Times of karkala

ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಆನ್ಸ್ ಕಾರ್ಕಳ ಇದರ ವತಿಯಿಂದ ಲಾಕ್‌ಡೌನ್ ಸಂದರ್ಭ ಮಹಿಳೆಯರಿಗಾಗಿ ವಿಶಿಷ್ಠ, ವಿಭಿನ್ನವಾದ ಕಾರ್ಯವೊಂದು ನಡೆದಿದ್ದು ಅದೀಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ರೋಟರಿ "10 ದಿವಸ 20 ವಿಷಯ" ಶೀರ್ಷಿಕೆಯಡಿ ಮಹಿಳೆಯರಿಗಾಗಿ ಆನ್ಲೈನ್ ಮೂಲಕವೇ 20 ಕಿಂತ ಹೆಚ್ಚು ವಿಷಯದ ಕುರಿತು ತರಬೇತಿ ನೀಡಲಾಗಿದ್ದು, ದೇಶ ವಿದೇಶ ದಿಂದ  ಮಹಿಳೆಯರು ಈ ಒಂದು ತರಬೇತಿಯ ಪ್ರಯೋಜನ ಪಡೆದುಕೊಂಡಿರುತ್ತಾರೆ.ಯೋಗ, ಪ್ರಾಣಾಯಾಮ, ಮುದ್ರೆ, ಅಡುಗೆ ಅರಮನೆ, ಆರೋಗ್ಯವೇ ಭಾಗ್ಯ, ಬಾಡಿ ಫಿಟ್‌ನೆಸ್, ಡಾನ್ಸ್, ಬ್ಯೂಟಿ ಟಿಪ್ಸ್, ತರಕಾರಿ ವಿನ್ಯಾಸ, ಸಾರಿ ವಿನ್ಯಾಸ, ಕೇಶ ಅಲಂಕಾರ, ರಂಗೋಲಿ, ಸಂಸ್ಕೃತ ಸಂಭಾಷಣಾ, ಭಜನೆ, ಶ್ಲೋಕ, ಕ್ರಾಪ್ಟ್, ಚಿತ್ರಕಲೆ, ಕೈ ತೋಟ, ಬಟ್ಟೆ ಚೀಲ ತಯಾರಿ, ಮೆಹಂದಿ, ಆಯುರ್ವೇದ, ಶ್ಲೋಕ, ಸಾಕು ಪ್ರಾಣಿ ಆರೈಕೆ ಈ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಆನ್ ಲೈನ್ ಮೂಲಕವೇ ಮಾಹಿತಿ ಕಾರ್ಯಗಾರ ನಡೆಸಲಾಗಿದ್ದು, ರೋಟರಿಯ ಈ ಕಾರ್ಯದ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳಿಂದ ವಿಡಿಯೋ ಕ್ಲಿಪ್ ಸಂಗ್ರಹಿಸಿ, ವ್ಯಾಟ್ಸಪ್ ಮೂಲಕ ನೋಂದಣಿಯಾದ ಮಹಿಳೆಯರಿಗೆ ಈ ವಿಡಿಯೋ ಕಳುಹಿಸುವ ನಿಟ್ಟಿನಲ್ಲಿ ಜೂ. 19ರಂದು ಕಾರ್ಕಳ ಶಿವತಿಕೆರೆ ವರ್ಧಮಾನ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಯಿತು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷೆ ರೇಖಾ ಸೌಜನ್ಯ ಉಪಾಧ್ಯಾಯ, ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ರೋಟರಿ ಆನ್ಸ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್ ವಿಡಿಯೋ ಕ್ಲಿಪ್ ಸಮಾರೋಪ ಸಮಾರಂಭವನ್ನು ನಡೆಸಿದರು ಇವರೊಂದಿಗೆ Rtn ಸುವರ್ಣ ನಾಯಕ್ ಮತ್ತು Ann ವೃಂದಾ ಶೆಟ್ಟಿಯವರು ಹಾಜರಿದ್ದರು. ಇಂತ ಹಲವು ಯೋಜನೆ ಯನ್ನೂ ಇಟ್ಟುಕೊಂಡು 10 ದಿವಸ ರೋಟರಿ ಚಿಣ್ಣರ ಚಿಲಿಪಿಲಿ ಇನ್ನೊಂದು ಕಾರ್ಯಕ್ರಮವನ್ನು ಪ್ರಾರಂಭಿಸಲು ಹೆಮ್ಮೆಯಿಂದ ಈ ತಂಡವು ಸಿದ್ಧವಾಗಿ ನಿಂತಿದೆ.

Times Of karkala whatsapp Group link:


ಜಾಹೀರಾತು 
ಜಾಹೀರಾತು 
ಜಾಹೀರಾತು 
Add caption

ಜಾಹೀರಾತು 
https://wa.me/919945283600
ಜಾಹೀರಾತು 

ಜಾಹೀರಾತು 
ಜಾಹೀರಾತು 


ನಿಟ್ಟೆ:ವ್ಯಕ್ತಿ ಆತ್ಮಹತ್ಯೆ-Times of karkala 


ನಿಟ್ಟೆ ಗ್ರಾಮದ ನಿವಾಸಿ ಜಯ ದೇವಾಡಿಗ(50) ಜೂ 27ರಂದು ಮನೆಯ ಪಕ್ಕಾಸಿಗೆ  ಸೀರೆ  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Times Of karkala whatsapp Group link:

ಜಾಹೀರಾತು 
ಜಾಹೀರಾತು 
ಜಾಹೀರಾತು 
Add caption

ಜಾಹೀರಾತು 
https://wa.me/919945283600
ಜಾಹೀರಾತು 

ಜಾಹೀರಾತು 
ಜಾಹೀರಾತು 


ಗೋಪಾಲ ಭಂಡಾರಿಯವರ  ದೇಹ ಅಳಿದರೂ ಅವರು ಹಚ್ಚಿದ ಸೇವೆಯ ದೀಪ ಉರಿಯುತ್ತಲೇ ಇದೆ-ಅಗಲಿದ ಚೇತನ ಒಂದು ನೆನಪು 
Times Of karkala whatsapp Group link:
ರಾಜ್ಯದ ಸಜ್ಜನ ರಾಜಕಾರಣದ ಕೊಂಡಿಯೊಂದು ಕಳಚಿ ಹೋಗಿದೆ. ತಮ್ಮ ಸರಳ ನಡೆ ನುಡಿಯ ಮೂಲಕ ಜನಮನಗೆದ್ದಿದ್ದ ದಿ.ಹೆಬ್ರಿ ಗೋಪಾಲ ಭಂಡಾರಿ ಮುತ್ಸದ್ದಿ, ಸಜ್ಜನ ರಾಜಕಾರಣಿ, ಸ್ವಚ್ಚ ಆಡಳಿತಗಾರ. ಅವರು ನಮ್ಮನ್ನಗಲಿ ವರ್ಷ ಸಮೀಪಿಸುತ್ತಿದೆ. ಗೋಪಾಲ ಭಂಡಾರಿಯವರು ನಮ್ಮೊಂದಿಗಿಲ್ಲ ಎನ್ನುವುದನ್ನು ಈಗಲೂ ಯೋಚಿಸಲು ಸಾಧ್ಯವಾಗುತ್ತಿಲ್ಲ. ಅವರ ಸಾವು ಸಾವಲ್ಲ, ಅಲ್ಲಿ ಅಳಿದದ್ದಕ್ಕಿಂತ ಉಳಿದದ್ದೇ ಹೆಚ್ಚು !.


ರಾಜ್ಯದ ಕಂಡ ಸ್ವಚ್ಚ ಆಡಳಿಗಾರ. ಕಡುಬಡವರೂ ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಬಹುದೊಡ್ಡ ಕೆಲಸ ಮಾಡಿದ ವ್ಯಕ್ತಿ. ಸರಳತೆ,ಸಜ್ಜನಿಕೆಗೆ ಮಾದರಿ.ಭ್ರಷ್ಟಾಚಾರದ ಸೋಂಕು ಲವಲೇಶವೂ ಅಂಟಿಸಿಕೊಳ್ಳದ ಬಹಳ ಎತ್ತರದ ವ್ಯಕ್ತಿತ್ವ. ಕಾರ್ಕಳ ಕ್ಷೇತ್ರದಲ್ಲಿ ಬಡವರ್ಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕೆಲಸ ಮಾಡಿದರು. ನಾನು ಕಂಡಂತೆ ಗೋಪಾಲ ಭಂಡಾರಿ ಒಬ್ಬ ಅಪರೂಪದ ವ್ಯಕ್ತಿ. ಅಸೂಯೇ ಮನೋಭಾವವೇ ಅವರಲ್ಲಿ ಇರಲಿಲ್ಲ. ಎಲ್ಲರನ್ನೂ ಬಹಳ ಪ್ರೀತಿ ವಾತ್ಸಲ್ಯದಿಂದಲೇ ಕಾಣುತ್ತಿದ್ದರು. ಯಾವೂದೇ ರೀತಿಯ ಸಣ್ಣತನ ಅಥವಾ ಅಧಿಕಾರದ ಶ್ರೀಮಂತಿಕೆಯ ದರ್ಪವನ್ನು ಪ್ರದರ್ಶಿಸಿದ ವ್ಯಕ್ತಿಯಲ್ಲ. ಹೀಗಾಗಿ ಗೋಪಾಲ ಭಂಡಾರಿ ಅವರು ಒಬ್ಬ ವ್ಯಕ್ತಿಯಾಗಿ, ರಾಜಕೀಯ ನಾಯಕರಾಗಿ ಅಥವಾ ಶಾಸಕರಾಗಿ ಅಧಿಕಾರದಲ್ಲಿ ಇದ್ದರೂ ಎಲ್ಲಿಯೂ ಯಾವೂದೇ ರೀತಿಯ ಕಳಂಕಗಳನ್ನು ಅಂಟಿಸಿಕೊಂಡವರಲ್ಲ.


ಒರ್ವ ಪತ್ರಕರ್ತನಾಗಿ ಒಬ್ಬ ವ್ಯಕ್ತಿಯ ಬಗೆಗೆ ರಾಜಕೀಯ ಪಕ್ಷಕ್ಕೆ ಸೇರಿದ್ದ ವ್ಯಕ್ತಿಯ ಬಗೆಗೆ ಬರೆಯುವುದು ಸರಿಯೋ ತಪ್ಪೋ ಗೊತ್ತಿಲ್ಲ. ಸ್ಮರಿಸುವುದು ಧರ್ಮ. ನನಗೂ ಅವರಿಗೂ ಸುದೀರ್ಘ ಕಾಲದ ಒಡನಾಟವಿತ್ತು. ವಯಸ್ಸಿನಲ್ಲಿ ನಾನು ಅವರಿಗಿಂತ ಸುಮಾರು ೩೫ ವರ್ಷ ಚಿಕ್ಕವನು. ಆದರೆ ಅವರು ಚಿಕ್ಕವರು - ದೊಡ್ಡವರು ಎನ್ನದೆ ಎಲ್ಲರನ್ನೂ ಬಹಳ ಪ್ರೀತಿ ಗೌರವದಿಂದಲೇ ನಡೆದುಕೊಳ್ಳುತ್ತಿದ್ದರು. ತಪ್ಪುಗಳನ್ನು ಮಾಡಿದ್ದಾಗ ಬಹಳಷ್ಟು ಸಲ ಬುದ್ಧಿ ಮಾತು ಹೇಳುತ್ತಿದ್ದರು. ನಾನು ನೋಡಿರುವಂತೆ ಅದರಲ್ಲಿಯೂ ರಾಜಕಾರಣದಲ್ಲಿ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಇನ್ನು ಒಬ್ಬ ವ್ಯಕ್ತಿಯಾಗಿ ಅವರು ಬದುಕನ್ನು ತುಂಬಾ ಪ್ರೀತಿಸುತ್ತಿದ್ದರು. ವೈಯಕ್ತಿಕವಾಗಿ ಕಾಳಜಿವಹಿಸುತ್ತಿದ್ದರು. ಎಲ್ಲರ ಸಂಕಷ್ಟಗಳಿಗೂ ಸ್ಪಂದಿಸಬೇಕೆಂಬ ಕಾಳಜಿ ಅವರಲ್ಲಿ ಸದಾ ಇರುತ್ತಿತ್ತು. 


ಸಾರ್ವಜನಿಕ ಬದುಕಿನಲ್ಲಿ ಇದ್ದರೂ ವೈಯಕ್ತಿವಾಗಿ ತಮ್ಮ ಕುಟುಂಬದ ಜವಾಬ್ಧಾರಿಗಳನ್ನು ಕೂಡ ಅಷ್ಟೇ ಶಿಸ್ತು ಕ್ರಮಬದ್ಧವಾಗಿ ನಿಭಾಯಿಸುತ್ತಿದ್ದರು. ಸಾಮಾಜಿಕವಾಗಿ ಯಾವೂದೇ ಜಾತಿ ಧರ್ಮಕ್ಕೆ ಸೀಮಿತರಾಗಿರಲಿಲ್ಲ. ವ್ಯಕ್ತಿ ಒಂದು ಜಾತಿ ಧರ್ಮದಲ್ಲಿ ಹುಟ್ಟಿರಬಹುದು.ಆದರೆ ಜಾತಿ ಧರ್ಮಗಳನ್ನು ಮೀರಿನಿಂತು ಒಬ್ಬ ಅಪ್ಪಟ ಜಾತ್ಯತೀತವಾದಿಯಾಗಿ ಬದುಕಿದವರು. ನಾವು ಇಂತಹ ಜಾತಿಯಲ್ಲೇ ಹುಟ್ಟಬೇಕು, ಶ್ರೀಮಂತರಾಗಿಯೇ ಹುಟ್ಟುಬೇಕು ಎಂದು ಯಾರೂ ಅರ್ಜಿ ಹಾಕಿ ಹುಟ್ಟಲು ಸಾಧ್ಯವಿಲ್ಲ. ಸಾಧ್ಯವಿದ್ದರೆ ಎಲ್ಲರೂ ಸ್ಥಿತಿವಂತರ ಮನೆಯಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕುತ್ತಿದ್ದರು ಎಂದು ಗೋಪಾಲ ಭಂಡಾರಿಯವರು ಸದಾ ಹೇಳುತ್ತಿದ್ದರು. ಬಡವನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗಿ ಸಾಯುವುದು ತಪ್ಪು ಎಂದು ಯಾವಾಗಲೂ ಹೇಳುತ್ತ ಯುವಕರಿಗೆ ಪ್ರೇರಣೆಯ ಶಕ್ತಿಯಾಗಿದ್ದರು.


ರಾಜಕಾರಣದ  ಹೊರತಾಗಿಯೂ ಕೃಷಿಯಲ್ಲಿ ಬಹಳಷ್ಟು ಆಸಕ್ತಿ ತೋರುತ್ತಿದರು. ಅವರ ತಂದೆ ತಾಯಿ ಕೃಷಿ ಮಾಡುತ್ತಿದ್ದರು. ಗೋಪಾಲ ಭಂಡಾರಿ ತಾನೂ ಕೂಡ ಗದ್ದೆ ಉಳುಮೆ ಮಾಡುತ್ತಿದ್ದರು. ಭತ್ತದ ಗದ್ದೆಯಲ್ಲಿ ನೇಜಿ ಹೊತ್ತು ನಾಟಿ ಮಾಡಿದವರು. ಅವರಿಗೆ ಭತ್ತ ಬೇಸಾಯ ಮಾಡದಿದ್ದರೆ ಮನಸ್ಸಿಗೆ ಸಮಾಧಾನ ಇರುತ್ತಿರಲಿಲ್ಲ. ಈಗ ಮಕ್ಕಳೂ ಕೂಡ ಅವರ ಇಛ್ಛೆಯಂತೆ ಬೇಸಾಯ ಮುಂದುವರಿಸಿದ್ದಾರೆ.  ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣಗಳನ್ನು ಮಾಡಬೇಕಾದರೂ ಬಹಳಷ್ಟು ತಯಾರಿ ಅಧ್ಯಯನ ಮಾಡಿಕೊಂಡು ಬರುತ್ತಿದ್ದರು. ಅಪಾರ ಜ್ಞಾನವಿತ್ತು, ತಿಳಿದುಕೊಳ್ಳವ ತವಕ ವಿತ್ತು.ಸಾಹಿತ್ಯ ಆಸಕ್ತಿ ಇತ್ತು.ನಾಡಿನ ಶ್ರೇಷ್ಠ ಸಾಹಿತಿಗಳ ಒಡನಾಟವಿತ್ತು. ಓದುವ ಅಭಿರುಚಿ ಇತ್ತು. ಪುಸ್ತಕ ಪ್ರೇಮಿಯಾಗಿದ್ದರು. ಭಂಡಾರಿ ಜ್ಞಾನದ ಭಂಡಾರ ಆಗಿದ್ದರು. ಕ್ಲಿಷ್ಟಕರವಾದ ಸವಾಲನ್ನೂ ಕೂಡ ಅತೀ ಸುಲಭವಾಗಿ ಪರಿಹರಿಸುತ್ತಿದ್ದರು. ಬಿಜೆಪಿಯವರು ಕೂಡ ಗೋಪಾಲ ಭಂಡಾರಿಯವರನ್ನು ಶ್ಲಾಘಿಸುತ್ತಿದ್ದರು. ರಾಜಕಾರಣದಲ್ಲಿ ಒಂದು ಪಕ್ಷಕ್ಕೆ ಸೀಮಿತವಾದರೂ ಬಿಜೆಪಿ ಸೇರಿ ಎಲ್ಲಾ ಪಕ್ಷದಲ್ಲೂ ಸ್ನೇಹಿತರನ್ನು ಸಂಪಾದಿಸಿದ್ದರು. 

ಜನ ಸಂಪತ್ತೇ ಅವರ ನಿಜವಾದ ಸಂಪತ್ತು ಆಗಿದೆ. ಅನುಭವ, ನಿಷ್ಠೆ, ದಕ್ಷತೆಯಿಂದಾಗಿ ಅವರು ವಿಧಾನ ಸೌಧದಲ್ಲಿ ಆಡುತ್ತಿದ್ದ ಮಾತುಗಳಿಗೆ ಒಮ್ಮೆ ಎಲ್ಲರೂ ಕಿವಿಯಾಗುತ್ತಿದ್ದರು. ಎಲ್ಲಾ ರಾಜಕೀಯ ಪಕ್ಷಗಳು ಗೋಪಾಲ ಭಂಡಾರಿಯವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದರು. ಆದರೆ ಅವರು ಮಾತ್ರ ಕೊನೆಯ ಉಸಿರಿನ ತನಕವೂ ಪಕ್ಷ ನಿಷ್ಠರಾಗಿ ಉಳಿದರು. ತನ್ನ ಕೊನೆಯ ದಿನದ ವರೆಗೂ ಜನರ ಸೇವೆಗಾಗಿ ತನ್ನ ಬದುಕು ಸಮರ್ಪಿಸಿದರು. ಅವರ ಪಾರ್ಥಿವ ಶರೀರದ ಜೊತೆಗೆ ಬಂದ ಅವರ ಸಣ್ಣ ಸೂಟ್‌ ಕೇಸ್‌ನಲ್ಲಿ ಜನರ ಕೆಲವು ಅರ್ಜಿಗಳಿದ್ದವು ಎನ್ನುವಾಗ ಕಣ್ಣೀರಾಗುತ್ತದೆ. ಜನಪ್ರತಿನಿಧಿಯಾಗಿ ತನಗೆ ಅಧಿಕಾರ ಇಲ್ಲದಿದ್ದರೂ ಜನಸೇವೆಗಾಗಿ ತಾನು ಸದಾ ಸಿದ್ಧರಿದ್ದರು ಎಂಬುದು ತಿಳಿಯುತ್ತದೆ.

 ಸೌಮ್ಯ ಸ್ವಭಾವದವರಾಗಿದ್ದರೂ ಅವರ ಜತೆಗೆ  ಮಾತನಾಡಬೇಕಾದರೇ ನಮಗೆಲ್ಲ ಭಯವಾಗುತ್ತಿತ್ತು. ಆದರೂ ಅವರು ಅಷ್ಟೇ ದೊಡ್ಡ ಸ್ನೇಹಮಯಿ ಕೂಡ ಆಗಿದ್ದರು. ಅಧಿಕಾರಕ್ಕಾಗಿ ಈಗೀನ ರಾಜಕಾರಣವೇ ಒಂದು ತರವಿದ್ದರೇ ಗೋಪಾಲ ಭಂಡಾರಿ ತಾನು ಅವಕಾಶವನ್ನು ಕೇಳಿಕೊಂಡು ಹೋಗುತ್ತಿರಲಿಲ್ಲ. ಎಂಎಲ್‌ಸಿ ಸಹಿತ ಅವರಿಗೆ ರಾಜಕೀಯ ದ ಹೊಸ ಜವಾಬ್ಧಾರಿಯನ್ನು ತನಗೆ ಕೇಳುವ ಅವಕಾಶವಿದ್ದರೂ ಅವರು ಕೇಳಲಿಲ್ಲ. ನಾಯಕರು ಕೊಡಲು ಇಲ್ಲ. ಅಧಿಕಾರದ ವ್ಯಾಮೋಹವಿರಲಿಲ್ಲ. ರಾಜಕಾರಣ ನನಗೆ ವೃತ್ತಿ ಅಲ್ಲ ಎನ್ನುತ್ತಿದ್ದರು. ವೃತ್ತಿ ರಾಜಕಾರಣದ ಜೊತೆಗೆ ಇದ್ದರೂ ತಮ್ಮತನವನ್ನು ಕಾಯ್ದುಕೊಂಡು ಬಂದರು. ಕೃಷಿ ಕೆಲಸ ಮಾಡಿದರು. ಜಾತಿಯ ಕಸುಬು ಮಾಡಿದರು. ಅಂದೇ ಜನಸೇವೆಯ, ನಾಯಕತ್ವದ ಗುಣ ಅವರಲ್ಲಿ ಚಿಗುರೊಡೆದಿತ್ತು. ಮುಂದೆ ಜನಸೇವೆಗಾಗಿ ರಾಜಕಾರಣ ಪ್ರವೇಶ ಮಾಡಿದರು. ನಾಯಕರ ಬೆನ್ನ ಹಿಂದೇ ನಿಂತು ಅವಿರತವಾಗಿ ದುಡಿದರು. 

ಪಕ್ಷದಲ್ಲಿ ಎಳವೇಯಲ್ಲೇ ಎಲ್ಲಾ ಜವಾಬ್ಧಾರಿಯನ್ನು, ತಾಲ್ಲೂಕು ಪಂಚಾಯತ್‌ ಸದಸ್ಯರಾದರು, ತಾಲ್ಲೂಕು ಪಂಚಾಯತ್‌ ಅಧ್ಯಕ್ಷರಾದರು. ಜಿಲ್ಲಾ ಪರಿಷತ್‌ ಸದಸ್ಯರಾದರು, ಅಫೆಕ್ಸ್‌ ಬ್ಯಾಂಕ್‌ ನಿರ್ದೇಶಕರರಾದರು. ನಮ್ಮ ತಾಲ್ಲೂಕಿನ ಶಾಸಕರಾದರು. ನಮ್ಮ ಬಗ್ಗೆ ಅಗಾಧ ಪ್ರೀತಿ ತೋರುತ್ತಿದ್ದರು. ಅವರಿಗೆ ವಯಸ್ಸಾಗಿದ್ದರು. ಜೀವನೋತ್ಸವದಲ್ಲಿ ಇದ್ದರು. ಅವರ ಎದೆಯಲ್ಲಿ ಹೋರಾಟದ ಕಿಚ್ಚು ಆರಿರಲಿಲ್ಲ. ಹೋರಾಟ ಮಾಡಿ ತನ್ನೂರು ಹೆಬ್ರಿಯನ್ನು ತಾಲ್ಲೂಕು ಮಾಡಿಸಿಯೇ ಬಿಟ್ಟರು. ತಾಲ್ಲೂಕಿನ ವೈಭವ ನೋಡಲು ಮಾತ್ರ ಅವರಿಲ್ಲ.ಹೆಬ್ರಿ ಕಾರ್ಕಳಕ್ಕೆ ಹಲವು ಶಾಶ್ವತ ಕೊಡುಗೆಯನ್ನು ನೀಡಿ ಈಗ ನೆನಪಾಗಿದ್ದಾರೆ. ಕಣ್ಣುಗಳಲ್ಲಿ ಕನಸುಗಳು ಕಂದಿರಲಿಲ್ಲ. ನೆಮ್ಮದಿಯ ಬದುಕಿನಲ್ಲಿ ಬದುಕು ಕಾಲ ಬರುವುದು ಯಾವಾಗ ? ಜಾತಿ ಮತ ಪಂಥಗಳಲ್ಲಿ ಒಡೆದು ಛಿದ್ರವಾಗಿರುವ ಈ ಭಾರತೀಯ ಸಮಾಜ ಒಂದಾಗಿ ಒಗ್ಗಟ್ಟಾಗುವುದು ನೋಡಬೇಕು ಎನ್ನುತ್ತಲೇ ನಮ್ಮನ್ನೆಲ್ಲ ಬಿಟ್ಟು ಪ್ರಯಾಣಿಸಿದರು. ಹುತ್ತುರ್ಕೆಯ ಮಣ್ಣಿನಲ್ಲಿ ಬೆಳೆದು ದೊಡ್ಡವರಾಗಿ ಹೃದಯಘಾತವಾಗಿ ಅದೇ ಹುತ್ತುರ್ಕೆಯ ಮಣ್ಣಿನಲ್ಲಿ ಭೂಮಿಗೊರಗಿಬಿಟ್ಟರು ಗೋಪಾಲ ಭಂಡಾರಿಯವರು. ಭೂಮಿಪುತ್ರ ಭೂಮಿಗೆ ಸಂದು ಹೋದ. ನಮ್ಮ ಹೆಬ್ರಿಯ ಉರಿಯುವ ಪಂಜೊಂದು ಆರಿ ಹೋಗಿದೆ. ತಬ್ಬಲಿಗಳಾದೆವು ಎನ್ನುವ ಅದೊಂದು ಸಂಕಟ ನನ್ನ ಹೊಟ್ಟೆಯೊಳಗೆ ಈಗಲೂ ಕರುಳು ಹಿಸುಕುತ್ತಿದೆ. ಶ್ರೀಮಂತಿಕೆ ಶಿಕ್ಷಣ ಗೋಪಾಲ ಭಂಡಾರಿ ಅವರನ್ನು ಎತ್ತರಕ್ಕೆ ಏರಿಸಿಲ್ಲ. ಅವರ ಸೌಮ್ಯ ಸ್ವಭಾವ, ಜನಸೇವೆಯ ಗುಣ, ನಿಷ್ಠೆ ಜ್ಞಾನ ಅವರನ್ನು ಬೆಳೆಸಿದೆ. 

ಕನ್ನಡದ ಬಗೆಗೆ ಅಪಾರ ಪ್ರೀತಿಯಿಂದ ನಿರರ್ಗಳವಾಗಿ ಮಾತಾನಾಡುತ್ತಿದ್ದು. ಪದವೀಧರನಲ್ಲದಿದ್ದರೂ ಭಾಷೆಯ ಬಗೆಗೆ ಅಪಾರವಾದ ಹಿಡಿತ ಮತ್ತು ಜ್ಞಾನವಿತ್ತು. ತುಳು,ಕನ್ನಡ ಹಿಂದಿ, ಇಂಗ್ಲೀಷ್‌, ಕುಂದಾಪ್ರ ಕನ್ನಡ, ಕೊಂಕಣಿ ಸಹಿತ ಹಲವು ಭಾಷೆಯನ್ನು ಮಾತನಾಡುತ್ತಿದ್ದರು. ವಿಧಾನಸಭೆಯಲ್ಲಿ ಗೋಪಾಲ ಭಂಡಾರಿ ಮಾತಾನಾಡಲು ಎದ್ದು ನಿಂತರೆ ಎಲ್ಲರೂ ಅವರ ಮಾತುಗಳನ್ನು ಕೇಳುತ್ತಿದ್ದರು. ವಿಧಾನಸಭೆಯ ಗಟ್ಟಿದನಿಯಾದರು. ಪ್ರಥಮ ಭಾರಿ ಶಾಸಕರಾಗಿ ಮಾತನಾಡಲು ಎದ್ದು ನಿಂತು ಮಾತು ಆರಂಭಿಸಿದಾಗ ಮುಖ್ಯಮಂತ್ರಿ ಎಸ್ ಎಂ.ಕೃಷ್ಣ ಅವರು ಗೋಪಾಲ ಭಂಡಾರಿ ಮಾತಿಗೆ ಮರುಳಾಗಿ ಶಹಬ್ಬಾಸ್‌ ಎಂದಿದ್ದರು. ನಿನಗೆ ಭವಿಷ್ಯವಿದೆ ಎಂದಿದ್ದರು. ಅಂದು ಕಾರ್ಕಳದ ಸಾರ್ವಜನಿಕ ಸಭೆಗೆ ಬಂದಿದ್ದ ಎಸ್.ಎಂ.ಕೃಷ್ಣ ಗೋಪಾಲ ಭಂಡಾರಿ ಅವರನ್ನು ನನ್ನ ಮಡಿಲಿಗೆ ಹಾಕಿ ನಾನು ನೋಡ್ತೇನೆ ಎಂದು ಕಾರ್ಕಳದ ಮಹಾಜನತೆಗೆ ಮನವಿ ಮಾಡಿದ್ದರು. ಆದರೆ ಎರಡನೇ ಅವಧಿಯ ಚುನಾವಣೆಯಲ್ಲಿ ಸೋತರು. ಮೂರನೇ ಅವಧಿಯಲ್ಲಿ ಮತ್ತೇ ಶಾಸಕರಾದರು.
ಒಮ್ಮೆ ನಾವು ಒಟ್ಟಿಗೆ ಇರುವಾಗ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರ ಪೋನ್‌ ಭಂಡಾರ್ರಿಗೆ ಬಂದಿತ್ತು. ನೀವು ೬೦ ಸಾವಿರ ಓಟು ತಗೊಂಡು ಸೊತ್ತಿದ್ದೀರಿ. ನನಗೆ ಬಿದ್ದಿದ್ದೇ ೩೦ ಸಾವಿರ ಮತಗಳು ಆದರೆ ನಾನು ವಿನ್‌ ಆಗಿದ್ದೇನೆ. ಬೇಸರ ಮಾಡಬೇಡಿ ಎಂದು ಜಯಚಂದ್ರ ಧೈರ್ಯದ ಮಾತುಗಳು ಹೇಳುತ್ತಿದ್ದುದು ಅವರ ಗಟ್ಟಿ ಸ್ವರದ ಮಾತಿನಲ್ಲಿ ನನಗೆ ಹೊರಗೆ ಕೇಳುತ್ತಿತ್ತು. ಒಮ್ಮೆ ಚಿಕ್ಕಮಗಳೂರು ಮಾರ್ಗವಾಗಿ ಬೆಂಗಳೂರಿಗೆ ಹೋಗುವಾಗ, ಬಸ್‌ ಅಪಘಾತವಾಗಿ ಭಂಡಾರಿಯವರ ಹಣೆಗೆ ದೊಡ್ಡ ಏಟು ಆಗಿತ್ತು. ಅದನ್ನು ಅಷ್ಟೇನೂ ಗಮನಕ್ಕೂ ತಗೊಳ್ಳದ ಭಂಡಾರ್ರು ಹಣೆಯ ಗಾಯಕ್ಕೆ ಬ್ಯಾಂಡೇಜ್‌ ಹಾಕಿಕೊಂಡು ಉಡುಪಿಯಲ್ಲಿ ನಡೆಯುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಭೆಗೆ ಹೋದರು. ಹಣೆಯಲ್ಲಿ ದೊಡ್ಡ ಬ್ಯಾಂಡೇಜ್‌ ಗಮನಿಸಿದ ಸಿದ್ಧರಾಮಯ್ಯ " ಏ ಭಂಡಾರಿ, ಇಲ್ಲಿ ಬಾ, ಅದೇನಪ್ಪ, ಹಣೆಯಲ್ಲಿ ಅಷ್ಟುದೊಡ್ಡ ಬ್ಯಾಂಡೇಜ್‌ ಹಾಕ್ಕೋಂಡಿದ್ದಿ, ಇಲ್ಲಿಗ್ಯಾಕೆ ಬಂದೆ, ಮನೆಗೆ ಹೋಗು ರೆಸ್ಟ್‌ ಮಾಡು ಎಂದು ಸಿದ್ಧರಾಮಯ್ಯ ಗದರಿಸಿದ್ದರು. ಮುಖ್ಯಮಂತ್ರಿ ನಮ್ಮ ಜಿಲ್ಲೆಗೆ ಬರುವಾಗ ತಾನು ಹೋಗುವುದು ಕರ್ತವ್ಯ ಎಂದು ಹೋಗಿದ್ದರು. ಇದು ನಿಷ್ಠೆಗೆ ಸಾಕ್ಷಿ. ರಾಜಕೀಯ ಎದುರಾಳಿಯನ್ನು ಕೂಡ ಚುನಾವಣೆಯ ಹೊರತು ಧ್ವೇಷ ಮಾಡುತ್ತಿರಲಿಲ್ಲ. ರಾಜಕೀಯದಲ್ಲಿ ವೈಯಕ್ತಿಕವಾದ ಧ್ವೇಷ ಎಂದರೆ ಮಾರು ದೂರ ಹೋಗುತ್ತಿದ್ದರು. ಯಾರ ವೈಯಕ್ತಿಕವಾದ ವಿಷಯವನ್ನು ಎಂದೂ ಕೂಡ ಅವರು ಮಾತಾನಾಡಿದವರಲ್ಲ.ಅದು ಅವರ ದೊಡ್ಡ ಗುಣ. ಡಾ.ವಿ.ಎಸ್‌ ಆಚಾರ್ಯ ಅವರ ಬಗೆಗೆ ಗೋಪಾಲ ಭಂಡಾರಿ ಅಪಾರ ಗೌರವ ಹೊಂದಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಡಾ.ವಿ.ಎಸ್‌ ಆಚಾರ್ಯ ರಾಜ್ಯದ ಗೃಹಸಚಿವರಾಗಿದ್ದರು. ಗೋಪಾಲ ಭಂಡಾರಿ ಶಾಸಕರಾಗಿದ್ದರು. ಡಾ.ವಿ.ಎಸ್‌ ಆಚಾರ್ಯರು ಕಾರ್ಕಳಕ್ಕೆ ಬರುವಾಗ ಗೋಪಾಲ ಭಂಡಾರಿಯವರಿಗೆ ಕರೆ ಮಾಡಿ ಎಲ್ಲಿದ್ದೀರಿ ಎಂದು ಖಚಿತ ಪಡಿಸಿಕೊಂಡು ಬರುತ್ತಿದ್ದರು. ಗೋಪಾಲ ಭಂಡಾರಿ ವಿ.ಎಸ್. ಆಚಾರ್ಯ ಅವರನ್ನು ಕ್ಷೇತ್ರದ ಗಡಿಯಲ್ಲೇ ಎದುರುಗೊಂಡು ಒಂದೇ ಕಾರಿನಲ್ಲಿ ಬಂದದ್ದುಂಟು. ಹೆಚ್ಚಾಗಿ ಗೋಪಾಲ ಭಂಡಾರಿಯವರು ತನ್ನ ಭಾಷಣದಲ್ಲಿ ವಿ.ಎಸ್. ಆಚಾರ್ಯರನ್ನು ಪ್ರಸ್ತಾಪಿಸುತ್ತಿದ್ದರು. ಡಾ.ವಿ.ಎಸ್‌ ಆಚಾರ್ಯರಿಗೂ ಗೋಪಾಲ ಭಂಡಾರಿಯವರ ಮೇಲೆ ಪ್ರೀತಿ ಇತ್ತು.

ತನಗೆ ಜೀವನದಲ್ಲಿ ಬಂದ ಎಲ್ಲಾ ಕಷ್ಟನಷ್ಟಗಳನ್ನು, ದು:ಖವನ್ನು ತಾನೊಬ್ಬನೇ ಸಹಿಸಿಕೊಳ್ಳುತ್ತಿದ್ದರು. ಒಂದು ದಿನ ಕೂಡ ನನಗೆ ಸಮಸ್ಯೆ ಇದೆ, ನೋವು ಬೇಸರ ಇದೆ ಎಂದು ಯಾರಲ್ಲೂ ಹೇಳಿಕೊಂಡವರಲ್ಲ. ಕೊನೆಯ ದಿನದಲ್ಲಿ ಅವರನ್ನು ಕಾಡಿದ್ದು ಒಟ್ಟಿಗಿದ್ದವರು ಮಾಡಿದ ಕೆಲವು ಘಟನೆಗಳು. ಅದು ಮನಸ್ಸಿನೊಳಗೆ ಕೊಡುತ್ತಿದ್ದ ನೋವು, ಅದರಿಂದ ಅವರು ಹಲವು ಸಲ ಕಣ್ಣೀರು ಹಾಕಿದುಂಟು. ಕೊನೆಯ ಒಂದೂವರೇ ವರ್ಷ ಅವರ ಗಟ್ಟಿ ಮನಸ್ಸು ಕುಗ್ಗಿ ಹೋಗಿತ್ತು.

 ಎಲ್ಲಕ್ಕಿಂತ ಮಿಗಿಲಾಗಿ ಅವರೊಬ್ಬ ಒಳ್ಳೇಯ ಭಾಷಣಕಾರ.ಗಂಭೀರ ಭಾಷಣದಲ್ಲೂ ಹಾಸ್ಯದ ಲೇಪ ಹಚ್ಚಿಯೇ ಹೇಳುವುದು ಅವರಿಗೆ ಕರಗತವಾಗಿತ್ತು. ಅವರ ರಾಜಕೀಯ ಎದುರಾಳಿಯನ್ನು ಕೂಡ ಒಂದೇ ವೇದಿಕೆಯಲ್ಲಿದ್ದರೇ ಒಬ್ಬರಿಗೊಬ್ಬರು ಮಾತಾನಾಡುತ್ತಿದ್ದರು. ಇಂತಹ ಒಬ್ಬ ಮೌಲ್ಯಾಧಾರಿತ ರಾಜಕಾರಣಿಯನ್ನು ನಾಡು ಕಳೆದುಕೊಂಡಿರುವುದಂತು ಸತ್ಯ. ತುಂಬಾ ದು:ಖದ ಸಂಗತಿ. ಆ ನೋವು ಮಾಸಲು ಸಾಧ್ಯವೂ ಇಲ್ಲ. ಆ ಮೂಲಕ ಕರಾವಳಿಯ ಸಜ್ಜನ ರಾಜಕಾರಣದ ಕೊಂಡಿಯೊಂದು ಕಳಚಿ ಹೋಗಿರುವುದು ನೋವುಂಟು ಮಾಡಿದೆ. ಅವರ ಸರಳತೆ,ಒಳ್ಳೇಯತನ, ಸ್ವಚ್ಚ ಮನಸ್ಸು ಇಂದಿನ ರಾಜಕಾರಣಕ್ಕೆ ಆದರ್ಶ.  ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರ ಒಡನಾಟ ಚಿಂತನೆ ನಮ್ಮೊಳಗೆ ಸದಾ ಜೀವಂತ. ಗೋಪಾಲ ಭಂಡಾರಿ ಅವರು ಈಗ ನಮಗೆ ನೆನಪು ಮಾತ್ರ. ಆವತ್ತು ಹುತ್ತುರ್ಕೆಯ ಮಣ್ಣಿಯಲ್ಲಿ ಅಂತಿಮವಾಗಿ ನಮ್ಮ ಭಂಡಾರ್ರನ್ನು ಕೊನೆಯ ಭಾರಿಗೆ ನೋಡಲು ಜನಮುತ್ತಿಕೊಂಡಿದ್ದರು. ಕೆಲವರು ಬಿಕ್ಕಿಬಿಕ್ಕಿ ಅಳುತ್ತಿದ್ದರು. ಗೋಪಾಲ ಭಂಡಾರಿಯವರದ್ದು ಸಾರ್ಥಕ ಬದುಕು. ಅವರ ದೇಹ ಅಳಿದರೂ ಅವರು ಹಚ್ಚಿದ ಸೇವೆಯ ದೀಪ ಉರಿಯುತ್ತಲೇ ಇದೆ. ಅವರ ಸಾವು ಸಾವಲ್ಲ, ಅಲ್ಲಿ ಅಳಿದದ್ದಕ್ಕಿಂತ ಉಳಿದದ್ದೇ ಹೆಚ್ಚು !.

- ಸುಕುಮಾರ್‌ ಮುನಿಯಾಲ್‌ - ಪತ್ರಕರ್ತರು.

ಜಾಹೀರಾತು 

ಜಾಹೀರಾತು 
ಜಾಹೀರಾತು 

ಜಾಹೀರಾತು 
ಜಾಹೀರಾತು 
https://wa.me/919945283600
ಜಾಹೀರಾತು 


ಜಾಹೀರಾತು 

ಜಾಹೀರಾತು 


MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget