'ಬಿರುವೆರ್ ಕುಡ್ಲ ಬೆದ್ರ' ಘಟಕದಿಂದ ಹಡೀಲು ಬಿಟ್ಟ ಜಾಗದಲ್ಲಿ ಕೃಷಿ ಮಾಡುವ ಸಂಕಲ್ಪ: ಬಿರುವೆರ್ ಕುಡ್ಲ ಸಂಸ್ಥಾಪಕರ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಣೆ-Times of karkala

'ಬಿರುವೆರ್ ಕುಡ್ಲ ಬೆದ್ರ' ಘಟಕದಿಂದ ಹಡೀಲು ಬಿಟ್ಟ ಜಾಗದಲ್ಲಿ ಕೃಷಿ ಮಾಡುವ ಸಂಕಲ್ಪ: ಬಿರುವೆರ್ ಕುಡ್ಲ ಸಂಸ್ಥಾಪಕರ  ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಣೆ-Times of karkala 

ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ ಇನ್ನು ಕೆಲವರು  ಆಶ್ರಮದಲ್ಲೋ ಅಥವಾ ಶಾಲೆಯಲ್ಲೋ  ನೀಡಿ ಆಚರಣೆಯನ್ನು ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ತಂಡ ಹಡಿಲು ಬಿದ್ದ ಜಾಗವನ್ನು ಪಡೆದು ಕೃಷಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.ಹೌದು ಬಿರುವೆರ್ ಕುಡ್ಲ ಬೆದ್ರ ಘಟಕದ ಅಧ್ಯಕ್ಷರಾದ ರಾಜ್ ಪವಿ ಯವರು ಈ ವಿನೂತನ ಸಂಕಲ್ಪವನ್ನು ಮಾಡಿದವರು. ತನ್ನ ಜೊತೆ ಒಂದಷ್ಟು ಸಮಾನ ಮನಸ್ಕ ಯುವಕರನ್ನು ಸೇರಿಸಿಕೊಂಡು ೩ ಎಕ್ರೆಗೂ ಹೆಚ್ಚಿನ  ಹಡೀಲು ಜಗದಲ್ಲಿ ಕೃಷಿ ಕಾರ್ಯ ಮಾಡಲು ಸನ್ನದ್ಧರಾಗಿದ್ದಾರೆ.


   (ಬಿರುವೆರ್ ಕುಡ್ಲ ಸ್ಥಾಪಕರಾದ ಉದಯ್ ಪೂಜಾರಿ)ಬಿರುವೆರ್ ಕುಡ್ಲ ಸ್ಥಾಪಕರಾದ ಉದಯ್ ಪೂಜಾರಿಯವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಅವರ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಬೇಕೆಂಬ ಹಂಬಲದೊಂದಿಗೆ ಈ ಕಾರ್ಯದಲ್ಲಿ ತೊಡಗಿರುವ ತಂಡ ಹಡಿಲು ಇದ್ದ ಗದ್ದೆಯನ್ನು ಘಟಕದ ಮೂಲಕ ಸಾಗುವಳಿ ಮಾಡಿ ಅದರಿಂದ ಸಿಗುವ ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗೆ ಹಾಗೂ ಬೈ ಹುಲ್ಲನ್ನು ಗೋಶಾಲೆಗಳಿಗೆ ದಾನ ನೀಡುವ ಉದ್ದೇಶ ಹೊಂದಿದ್ದಾರೆ.

ಈ ಕಾರ್ಯಕ್ಕೆ ಘಟಕದ ಉಪಾಧ್ಯಕ್ಷರಾದ ಕೃಷಿಕ ಕೃಷ್ಣಪ್ಪ ಪೂಜಾರಿ ಎಡಪದವು ಇವರು ಚಾಲನೆ ನೀಡಿದರು. ದಾನಿಗಳ ಸಹಕಾರದಿಂಲೇ ಹಾಗು ಶ್ರಮದಾನದ ಮೂಲಕವೇ ಕೃಷಿ ಚಟುವಟಿಕೆಯನ್ನು ಮಾಡಲಿದ್ದಾರೆ   ಈ ಸಂಧರ್ಭದಲ್ಲಿ ಸಂಪತ್ ಪೂಜಾರಿ  ನೇತೃತ್ವದ   ಬಲಿಷ್ಠ ತಂಡ  ,ಯುವ ಬಿರುವೆರ್ ಮಾಂಟ್ರಾಡಿ ತಂಡದ ಸದಸ್ಯರು ಶ್ರಮದಾನಗೈದು  ಕೃಷಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಜಾಹೀರಾತು 
 https://wa.me/919945283600
ಜಾಹೀರಾತು 

ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget