ಕಾರ್ಕಳ:ಬೃಹತ್ ರಕ್ತದಾನ ಶಿಬಿರ-Times of karkala

ಕಾರ್ಕಳ:ಬೃಹತ್ ರಕ್ತದಾನ ಶಿಬಿರ-Times of karkala
Times Of karkala whatsapp Group link:
ಕಾರ್ಕಳ:ವಿಶ್ವ ರಕ್ತ ದಾನಿ ದಿನದ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ, ಸ್ವಚ್ಛ ಕಾರ್ಕಳ ಬ್ರಿಗೇಡ್, ಬಸ್ಸು  ಏಜೆಂಟರ ಬಳಗ ಇವರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ದಿನಾಂಕ 14-6-2020 ರವಿವಾರ  ಬಸ್ ಸ್ಟ್ಯಾಂಡ್ ಕಾರ್ಕಳ ಇಲ್ಲಿ ನಡೆಯಿತು .


ಕಾರ್ಯಕ್ರಮದ ಉದ್ಘಾಟನೆಯನ್ನು ರೋ. ಡಾಕ್ಟರ್ ಸಚ್ಚಿದಾನಂದ ಪ್ರಭು ಅವರು ನೆರವೇರಿಸಿ"ವಿಶ್ವ ರಕ್ತದಾನಿಗಳ ದಿನದಂದೇ ರಕ್ತದಾನ ಶಿಬಿರ ನಡೆಯುತ್ತಿರುವುದು ನಿಜವಾಗಿಯೂ ಶ್ಲಾಘನೀಯ" ಎಂದು  ತಿಳಿಸಿದರು.

ಮುಖ್ಯ ಅತಿಥಿ  ಡಾಕ್ಟರ್ ವೀಣಾ ಕುಮಾರಿ ಅವರು ರಕ್ತದಾನದ ಮಹತ್ವವನ್ನು  ತಿಳಿಸಿದರು.ಈ ಸಂದರ್ಭ ಸುಮಾರು 80ಯೂನಿಟ್  ರಕ್ತವನ್ನು ದಾನ ಮಾಡಲಾಯಿತು. ರೋಟರಿ ಸಂಸ್ಥೆ ಕಾರ್ಕಳದ ನಿಯೋಜಿತ ಅಧ್ಯಕ್ಷರಾದ ರೊ. ರೇಖಾ ಉಪಾಧ್ಯಾಯ ಅವರು ಸ್ವಾಗತಿಸಿದರು.ರೊಟೇರಿಯನ್ ಇಕ್ಬಾಲ್ ಅಹ್ಮದ್  ಪ್ರಸ್ತಾವನೆ ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದರು.

ರೋಟರಿ ನಿಯೋಜಿತ ಕಾರ್ಯದರ್ಶಿ ರೊ. ಶಶಿಕಲಾ ಹೆಗ್ಗಡೆಯವರು ಧನ್ಯವಾದವನ್ನು ನೀಡಿದರು. ಉಡುಪಿ ಅಜ್ಜರಕಾಡು ರಕ್ತನಿಧಿ ವಿಭಾಗದ ಮುಖ್ಯಸ್ಥರಾದ ಡಾ ವೀಣಾ ಕುಮಾರಿ ಅವರ ಮನವಿಯ ಮೇರೆಗೆ ಕೊವಿಡ್- 19  ಇದರ ಸಂದರ್ಭದಲ್ಲಿ ಉಂಟಾದ ರಕ್ತದ ಕೊರತೆಯನ್ನು ನೀಗಿಸಲು  ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.

ವೇದಿಕೆಯಲ್ಲಿ ಬಸ್ಸು  ಏಜೆಂಟರ ಬಳಗದ ಮಾಜಿ ಅಧ್ಯಕ್ಷರಾದ ಸುಧಾಕರ್  ದೇವಾಡಿಗ , ಸ್ವಚ್ಛ ಭಾರತದ ಪ್ರತಿನಿಧಿಯಾಗಿ ಶ್ರೀನಿವಾಸ್ ಸುದಲ, ಆ್ಯನ್ಸ್ ಕ್ಲಬ್ನ ನಿಯೋಜಿತ ಅಧ್ಯಕ್ಷ  ರೊ.ರಮಿತಾ ಶೈಲೇಂದ್ರ ರಾವ್.  ಮುಂತಾದವರು ಉಪಸ್ಥಿತರಿದ್ದರು.
ಜಾಹೀರಾತು 

ಜಾಹೀರಾತು 


ಜಾಹೀರಾತು 

https://wa.me/919945283600


ಜಾಹೀರಾತು 

ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget