"ಕಾರ್ಕಳದಲ್ಲಿ ಬಿಜೆಪಿ ಪ್ರಚಾರ ಕೇಂದ್ರಗಳಾದ ಕ್ವಾರಂಟೈನ್ ಕೇಂದ್ರಗಳು,ಗಂಟಲು ದ್ರವ ಪರೀಕ್ಷೆ ಮಾಡದೇ ಮನೆಗೆ ಕಳುಹಿಸಿದ ಪರಿಣಾಮ ಹಳ್ಳಿಗಳಲ್ಲೂ ಆತಂಕದ ಛಾಯೆ-ದೀಪಕ್ ಕೋಟ್ಯಾನ್
"ಕಾರ್ಕಳದಲ್ಲಿ ಬಿಜೆಪಿ ಪ್ರಚಾರ ಕೇಂದ್ರಗಳಾದ ಕ್ವಾರಂಟೈನ್ ಕೇಂದ್ರಗಳು,ಗಂಟಲು ದ್ರವ ಪರೀಕ್ಷೆ ಮಾಡದೇ ಮನೆಗೆ ಕಳುಹಿಸಿದ ಪರಿಣಾಮ ಹಳ್ಳಿಗಳಲ್ಲೂ ಆತಂಕಟದ ಛಾಯೆ"-ದೀಪಕ್ ಕೋಟ್ಯಾನ್
ಕಾರ್ಕಳದ ಕ್ವಾರಂಟೈನ್ ಕೇಂದ್ರ ಬಿಜೆಪಿಯ ಪ್ರಚಾರ ಕೇಂದ್ರವಾಗಿದೆ. ಕ್ವಾರಂಟೈನ್ ಸೆಂಟರ್ ನಲ್ಲಿ ಇರುವವರ ಗಂಟಲು ದ್ರವ ಪರೀಕ್ಷೆ ಮಾಡದೇ ಮನೆಗೆ ಕಳುಹಿಸಿದ ಪರಿಣಾಮ ಹಳ್ಳಿಗಳಲ್ಲೂ ಆತಂಕದ ಛಾಯೆ ಮೂಡಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಮುಂಬೈನ ಕರಾವಳಿ ಗರನ್ನು ಕಾರ್ಕಳಕ್ಕೆ ಆಹ್ವಾನಿಸಿ ಉತ್ತಮವಾಗಿ ನಡೆದುಕೊಳ್ಳುತ್ತೇವೆಂದು ಭರವಸೆ ನೀಡಿ ಪುಕ್ಕಟೆ ಪ್ರಚಾರ ಪಡೆದ ಕಾರ್ಕಳ ಶಾಸಕರ ಸಹಿತ ಬಿಜೆಪಿ ಪುಡಾರಿಗಳ ನಿಜ ಬಣ್ಣ ಬಯಲಾಗಿದೆ.
ಜಾಹೀರಾತು

ಇಲ್ಲಿನ ಬಿಜೆಪಿಗರು ಪ್ರಚಾರದ ಗೀಳಿನಿಂದ ಶಾಸಕರಾದಿಯಾಗಿ ಕಾರ್ಕಳ ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ತಾಲೂಕುಗಳ ಇತರ ಮುಂಬೈ ತುಳುವರನ್ನು ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ 7-10 ದಿನ ಕೂಡಿ ಹಾಕಿ ಊರ ದಾನಿಗಳು ನೀಡಿದ ಪರಿಕರಗಳ ಮೂಲಕ ಉತ್ತಮ ಊಟೋಪಚಾರ ನೀಡಿ ವೈಯಕ್ತಿಕ ಪ್ರಚಾರ ಪಡೆದು ಪ್ರತೀ ದಿನ ಭಾಷಣ ಬಿಗಿದುದು ಮಾತ್ರವಲ್ಲದೆ ಬೀಳ್ಕೊಡುಗೆ ಸಮಾರಂಭವನ್ನೂ ಏರ್ಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ಗಿಟ್ಟಿಸಿಕೊಂಡದ್ದು ನಾಚಿಕೆಕೇಡಿನ ವಿಚಾರ. ಗಂಟಲುದ್ರವ ಪರೀಕ್ಷೆ ಮಾಡದೇ ದೂಡಿದರು.
ಜಾಹೀರಾತು

ಕ್ವಾರಂಟೈನ್ ಕೇಂದ್ರಗಳಲ್ಲಿ ಖಡ್ಡಾಯವಾಗಿ ಗಂಟಲು ದ್ರವ ಪರೀಕ್ಷೆ ಮಾಡಿ ಕಳುಹಿಸಬೇಕಾಗಿದ್ದರೂ ಮುಂಡ್ಕೂರು,ಮುಲ್ಲಡ್ಕ ಕೇಂದ್ರಗಳ ನೂರಾರು ಮಂದಿಯನ್ನು ಯಾವುದೇ ಪರೀಕ್ಷೆಗಳಿಲ್ಲದೇ ಕಳುಹಿಸಿಕೊಡಲಾಯಿತು.ದ್ರವ ಪರೀಕ್ಷಾ ಕೇಂದ್ರಗಳಲ್ಲಿನ ಒತ್ತಡ,ಪರೀಕ್ಷಾ ಅವಧಿ ಕೇವಲ 48ಗಂಟೆಗಳ ಒಳಗೆ ಮುಗಿಯಬೇಕೆನ್ನುವ ಪರಿಮಿತಿ ಕೇಂದ್ರದಿಂದ ಜನರನ್ನು ಹೊರದಬ್ಬುವಂತೆ ಮಾಡಿದೆ.
ಜಾಹೀರಾತು

ಈತನ್ಮಧ್ಯೆ ಹೆಬ್ರಿ,ಮಾಳ,ಇನ್ನ ದಲ್ಲಿ ಕ್ವಾರಂಟೈನ್ ಕೇಂದ್ರಗಳಿಂದ ಮನೆಗೆ ಕಳುಹಿಸಲ್ಪಟ್ಟ ಮಂದಿಗೆ ಕೊರೊನಾ ಇರುವುದು ಆತಂಕ ತಂದಿದೆ.ಹೊರ ಜಿಲ್ಲೆ, ತಾಲೂಕುಗಳ ಜನರನ್ನು ಪ್ರತಿಷ್ಠೆಯ ಹೆಸರಲ್ಲಿ ಕೂಡಿ ಹಾಕಿ ಆವಾಂತರ ಮಾಡಲಾಗಿದೆ. ಇದಕ್ಕೆ ಕಾರಣ ರಾಜ್ಯ ಸರಕಾರದ ಅವಸರದ ನಿಲುವು ಹಾಗೂ ಕಾರ್ಕಳ ಶಾಸಕರು ,ಬಿಜೆಪಿಗರ ಪ್ರಚಾರದ ಗೀಳು.
ಈ ಕಾರಣಕ್ಕಾಗಿ ಕಾರ್ಕಳ ಬಿಜೆಪಿಗರ ನಿಲುವಿಗೆ ಧಿಕ್ಕಾರ.ರಾಜ್ಯ ಸರಕಾರದ ಅಸಮರ್ಪಕ ಕೊರೊನಾ ನಿರ್ವಹಣೆ ಹಾಗೂ ಕಾರ್ಕಳ ಶಾಸಕರು,ಬಿಜೆಪಿಗರ ಪುಕ್ಕಟೆ ಪ್ರಚಾರಕ್ಕಾಗಿ ಇಂತಹ ಗಡಿಬಿಡಿಯ ಅವ್ಯವಸ್ಥೆಯ ಬಗ್ಗೆ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಇನ್ನಾ ದೀಪಕ್ ಕೋಟ್ಯಾನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಾಹೀರಾತು
ಜಾಹೀರಾತು
ಜಾಹೀರಾತು
Post a comment