"ಕ್ವಾರಂಟೈನ್ ಕೇಂದ್ರದಲ್ಲಿ ಮೋಜು ಮಸ್ತಿ ಮಾಡುವಾಗ ದೇಶ ಸಂದಿಗ್ದ ಪರಿಸ್ಥಿತಿ ಇರಲಿಲ್ಲವೇ?"- ಯೋಗೀಶ್ ಇನ್ನಾ

ಕ್ವಾರಂಟೈನ್    ಕೇಂದ್ರದಲ್ಲಿ ಮೋಜು ಮಸ್ತಿ ಮಾಡುವಾಗ ಸಂದಿಗ್ದ ಪರಿಸ್ಥಿತಿ ಇರಲಿಲ್ಲವೇ?- ಯೋಗೀಶ್ ಇನ್ನಾ

Times Of karkala whatsapp Group link:

ಕಾರ್ಕಳ:ತಪ್ಪನ್ನು ಖಂಡಿಸುವ ಬದಲು ಸಮರ್ಥನೆಗೆ ಹೊರಟ ತಾಲೂಕು ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಅವರೇ ನಿಮ್ಮ ಪಕ್ಷದವರ ತಪ್ಪನ್ನು ಖಂಡಿಸುವ ಧೈರ್ಯ ತಮಗಿಲ್ಲವೇ? ಎಂದು  ಯುವ ಕಾಂಗ್ರೇಸ್ ಸಾಮಾಜಿಕ ಜಾಲತಾಣ ಜಿಲ್ಲಾ ಅಧ್ಯಕ್ಷ ಯೋಗೀಶ್ ಇನ್ನಾ ಪ್ರಶ್ನಿಸಿದ್ದಾರೆ. 


ಕಳೆದ ಮೇ 22 ರಂದು ಮುರತ್ತಂಗಡಿಯ ಪ್ರಕೃತಿ ಕ್ವಾರಂಟೈನ್ ಕೇಂದ್ರದಲ್ಲಿ ಮಾಜಿ ಯುವಮೋರ್ಚಾ ಅಧ್ಯಕ್ಷ ಕರುಣಾಕರ ಕೋಟ್ಯಾನ್ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ಹುಟ್ಟುಹಬ್ಬ ನಡೆಸಿದ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮದಲ್ಲಿ ಸುದ್ದಿಯಾಗಿತ್ತು. ಇದರ ಬಗ್ಗೆ ತುಟಿಪಿಟಕ್ಕೆನ್ನದೆ ಮಾಜಿ ಅಧ್ಯಕ್ಷರ ಈ ಕೃತ್ಯವನ್ನು ತಾವು ಸಮರ್ಥಿಸಿದ್ದು ತಮಗಿರುವ ಜನಪರ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. 


ಜಾಹೀರಾತು 

ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೆ ಎಂಬ ನಿಮ್ಮ ಮಾತನ್ನು ಒಪ್ಪುತ್ತೇವೆ. ಆದರೆ ಕೊರೋನಾ ಪಾಸಿಟಿವ್ ಬಂದ ಆ ಕ್ವಾರಂಟೈನ್ ಕೇಂದ್ರದಲ್ಲಿ ಅಲ್ಲಿರುವವರು ಆತಂಕದಲ್ಲಿರುವಾಗ ನಿಮ್ಮ ಪಕ್ಷದ ನಾಯಕರು ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದು ಯಾವ ಮುಖ ಹೊತ್ತು ಸಮರ್ಥನೆ ಮಾಡುತ್ತೀರಿ..? ಅಂತಹ ಕೃತ್ಯವನ್ನು ವಿರೋಧಿಸುವುದು ಯಾವ ರೀತಿಯ ರಾಜಕೀಯವಾಗುತ್ತದೆ ತಿಳಿಸಿ.. ನಿಮ್ಮವರು ಸಂಭ್ರಮ ಮೋಜು-ಮಸ್ತಿ ಮಾಡುವಾಗ ಇಲ್ಲದ ಸಂದಿಗ್ಧ ಪರಿಸ್ಥಿತಿ ಆ ತಪ್ಪನ್ನು ಪ್ರಶ್ನಿಸುವಾಗ ಸಂದಿಗ್ಧ ಪರಿಸ್ಥಿತಿ ಹೇಗೆ ನಿರ್ಮಾಣವಾಗುತ್ತದೆ ಎಂದು ಉತ್ತರಿಸಿ..


ಜಾಹೀರಾತು 


ಮಾಜಿ ಯುವಮೋರ್ಚಾ ಅಧ್ಯಕ್ಷರು ಶಾಸಕರ ಆಪ್ತರು, ಮತ್ತು ಇಂದಿಗೂ ಯುವಮೋರ್ಚಾ ಕರುಣಾಕರ ಹಿಡಿತದಲ್ಲಿ ಇದೆ ಎಂಬ ಕಾರಣಕ್ಕೆ ಅವರ ವಿರುದ್ಧ ಹೇಳಿಕೆ ಕೊಡಲು ಮತ್ತು ಅವರ ತಪ್ಪನ್ನು ವಿರೋಧಿಸಲು ನೀವು ಹೆದರುತ್ತಿದ್ದರಾ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.

ಜಾಹೀರಾತು 
 https://wa.me/919945283600

ನಿಮ್ಮ ಪಕ್ಷದ ಮಾಜಿ ನಾಯಕರುಗಳ ಈ ಮೋಜು ಮಸ್ತಿಯ ಬಗ್ಗೆ ಒಂದಕ್ಷರವೂ ಮಾತನಾಡದ ನೀವು ಅದರ ಬಗ್ಗೆ ಮೌನ ಮೂರ್ತಿಯಾಗಿರುವುದು ಯಾಕೆ..? ಲೆಟರ್ ಹೆಡ್ ಗೆ ಸೀಮಿತವಾಗುವ ಮುನ್ನ ವಾಸ್ತವ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಿ..

ಜಾಹೀರಾತು ಜನರ ಆತಂಕದ ಪರಿಸ್ಥಿತಿಯಲ್ಲಿಯೂ ಕ್ವಾರಂಟೈನ್ ಕೇಂದ್ರದಲ್ಲಿ ನಿಮ್ಮವರ ಈ ಸಂಭ್ರಮ ಮೋಜು ಮಸ್ತಿ ಯನ್ನು ಜನಸಾಮಾನ್ಯರ ಜೊತೆಗೆ ನಾವು ಕೂಡ ಖಂಡಿಸುತ್ತೇವೆ. ಇದಕ್ಕೆ ರಾಜಕೀಯ ಮುಖವಾಡವನ್ನು ನೀವು ಹಾಕುವುದಾದರೆ ನಿಮ್ಮಷ್ಟು ಮೂರ್ಖರು ಮತ್ಯಾರು ಇಲ್ಲ. 


ಜಾಹೀರಾತು 


ಇದನ್ನು ನೀವು ಸಮರ್ಥಿಸಬಹುದೇ ಹೊರತು ಜನಸಾಮಾನ್ಯರು ಒಪ್ಪಲು ಸಾಧ್ಯವಿಲ್ಲ. 
ಇನ್ನಾದರೂ ನಿಮ್ಮ ಪಕ್ಷದ ನಾಯಕರ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಬೆಳೆಸಿಕೊಳ್ಳಿ ತಮ್ಮ ಮುಂದಿನ ರಾಜಕೀಯ ಜೀವನಕ್ಕೆ ಇದು ಒಳ್ಳೆಯ ನಡೆಯಾಗಬಹುದು ಇಲ್ಲದಿದ್ದರೆ ಕೇವಲ ಹೇಳಿಕೆ ನೀಡಲು ಸೀಮಿತರಾಗುತ್ತಾರೆ ಎಂದು ಹೇಳಿದರು. 

ಜಾಹೀರಾತು 
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9535242057. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪವನ  ಶರ್ಮ ಗುರೂಜಿ 9535242057. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ-9535242057

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget