ಕಾರ್ಕಳ:ರಸ್ತೆ ಅಪಘಾತ,ಬೈಕ್ ಸವಾರ ಸಾವು-Times of karkala

ಕಾರ್ಕಳ:ರಸ್ತೆ ಅಪಘಾತ,ಬೈಕ್ ಸವಾರ ಸಾವು-Times of karkala
Times Of karkala whatsapp Group link:

ಕಾರ್ಕಳ:ಪಳ್ಳಿ ಗ್ರಾಮದ ಸರ್ಕಾರಿ ಹೈಸ್ಕೂಲ್ ಬಳಿಯಲ್ಲಿ ಸಂಭವಿಸಿದ  ರಸ್ತೆ ಅಪಘಾತದಲ್ಲಿ ಶಿರ್ವ ಮಟ್ಟಾರಿನ ಸಂದೀಪ್(೨೦) ಮೃತಪಟ್ಟಿದ್ದಾರೆ. ಜೂನ್ ೧೫ರ ಸಂಜೆ ೫:೪೫ರ ವೇಳೆ ಸಂದೀಪ್ ಬೈಕ್‌ನಲ್ಲಿ ಪಳ್ಳಿ ಪೇಟೆಯಿಂದ ಕುಂಟಾಡಿ ಕಡೆಗೆ ಹೋಗುತ್ತಿದ್ದಾಗ ಅದೇ ದಿಕ್ಕಿನಲ್ಲಿ ಬಂದ ಆಟೋ ರಿಕ್ಷಾವನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ಒಮ್ಮೆಲೇ
ಬಲಕಡೆಗೆ ತಿರುಗಿಸಿ ಬೈಕ್‌ಗೆ ಢಿಕ್ಕಿಯಾಗಿರುವುದು ಘಟನೆಗೆ ಕಾರಣವಾಗಿದೆ.

ಪರಿಣಾಮವಾಗಿ ಬೈಕ್ ಸವಾರ ಸಂದೀಪ್ ರಸ್ತೆಗೆ ಬಿದ್ದು ತಲೆ ಭಾಗಕ್ಕೆ ತೀವ್ರತರದಲ್ಲಿ ಗಾಯ ಉಂಟಾಗಿತ್ತು. ಗಾಯಾಳುವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು
ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.


ಜಾಹೀರಾತು 


ಜಾಹೀರಾತು 


ಜಾಹೀರಾತು 

https://wa.me/919945283600


ಜಾಹೀರಾತು 


ಜಾಹೀರಾತು 


ಜಾಹೀರಾತು 



ಜಾಹೀರಾತು
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget