ಯಾರಿಗೆ ಒಲಿಯಲಿದೆ ಕಾರ್ಕಳ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪಟ್ಟ?

ಯಾರಿಗೆ ಒಲಿಯಲಿದೆ ಕಾರ್ಕಳ ಬಿಜೆಪಿ  ಯುವ ಮೋರ್ಚಾದ ಅಧ್ಯಕ್ಷ ಪಟ್ಟ?ಕಾರ್ಕಳ: ಕಾರ್ಕಳ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದ ವಿಖ್ಯಾತ್ ಶೆಟ್ಟಿ ಉಡುಪಿ  ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಬಳಿಕ ಇದೀಗ ಕಾರ್ಕಳ ಯುವ ಮೋರ್ಚಾದ ಅಧ್ಯಕ್ಷ ಸ್ಥಾನ ಖಾಲಿಯಾಗಿದ್ದು ಮುಂದಿನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.


    "ಸುಮಿತ್ ನಲ್ಲೂರು" ಸಧ್ಯ ಕಾರ್ಕಳ ಯುವ ಮೋರ್ಚಾದಲ್ಲಿ ಕೇಳಿ ಬರುತ್ತಿರುವ ಹೆಸರು. ಇವರು  ವಿದ್ಯಾರ್ಥಿ ದೆಸೆಯಲ್ಲಿಯೇ  ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಬಂದವರು. ಎಳವೆಯಿಂದಲೇ  ಹಿಂದೂ ಸಂಘಟನೆಯಲ್ಲಿ  ತೊಡಗಿಕೊಂಡಿದ್ದ ಇವರು ಬಿಜೆಪಿಯ ಸಕ್ರಿಯ ಕಾರ್ಯಕರ್ತ. ತನ್ನ ನಾಯಕತ್ವದ ನಿಪುಣತೆಯಿಂದಲೇ ಸತತ  ಎರಡು ಬಾರಿ  ಬಿಜೆಪಿ ಯುವ ಮೋರ್ಚಾ ಮಿಯಾರು ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ  ಹಾಗೂ ಒಂದು ಬಾರಿ ಅಧ್ಯಕ್ಷರಾಗಿ  ಕಾರ್ಯ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.

ನಲ್ಲೂರು ಗ್ರಾಮ ಪಂಚಾಯತ್ ನ ಸದಸ್ಯರೂ ಆಗಿರುವ  ಸುಮಿತ್  ತಮ್ಮ ಆಡಳಿತ ಅವಧಿಯಲ್ಲಿ  ನಲ್ಲೂರಿನಲ್ಲಿ ಹಲವು ಅಭಿವೃದ್ಧಿ ಕಾರ್ಯದಲ್ಲಿ, ಜನರ ಸಮಸ್ಯೆಗಳಿಗೆ ದನಿಯಾಗಿ ಸೇವೆ ಸಲ್ಲಿಸಿದ್ದಾರೆ.


ರಜತ್ ರಾಮ್ ಮೋಹನ್:ಡಿಪ್ಲೊಮಾ ಪದವಿಧರರಾದ ಇವರು  ಪ್ರಸ್ತುತ ಬಜಗೋಳಿ ಶಕ್ತಿ ಕೇಂದ್ರದ ಯುವ ಮೋರ್ಚಾ ಅಧ್ಯಕ್ಷ ನಾಗಿ ಮುಡಾರು ಗ್ರಾಮ ಪಂಚಾಯತ್ ಸದಸ್ಯನಾಗಿ ಜನಪರಕಾರ್ಯಗಳ ಮುಖೇನ ಆಭಾಗದಲ್ಲಿ  ಅಪಾರ ಜನಮನ್ನಣೆಗಳಿಸಿರುತ್ತಾರೆ. 


ಯೊಗೀಶ್ ಸಾಲ್ಯಾನ್ ಕುಕ್ಕುಂದೂರು
ಕಾರ್ಕಳ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಕುಕ್ಕುಂದೂರು ಗ್ರಾಮದ ಯುವ ಮೋರ್ಚಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಇವರು ವಿದ್ಯಾರ್ಥಿ ಜೀವನದಿಂದಲೇ ಎಬಿವಿಪಿಯ ಸಕ್ರಿಯ ಕಾರ್ಯಕರ್ತ. ಹಲವಾರು ಸಮಾಜಮುಖಿ ಸಂಘಟನೆಗಳ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯರೂ ಆಗಿದ್ದಾರೆ.

 ಸದ್ಯ ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಇವರ ಹೆಸರು  ಕೇಳಿಬರುತ್ತಿದ್ದು ಕಾರ್ಕಳ ಬಿಜೆಪಿ  ಯುವ ಮೋರ್ಚಾದ ಆಯ್ಕೆ ಪ್ರಕ್ರಿಯೆ ಸಾಕಷ್ಟು ಕುತೂಹಲ  ಸೃಷ್ಠಿ  ಮಾಡಿದೆ.

ಜಾಹೀರಾತು 
ಜಾಹೀರಾತು ಜಾಹೀರಾತು 
https://wa.me/919945283600


ಜಾಹೀರಾತು 


ಜಾಹೀರಾತು 

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget