ಕಾರ್ಕಳ ಬಿಜೆಪಿ ಮುಖಂಡನ ಮನೆಯವರಿಗೆ ರಾತ್ರೋರಾತ್ರಿ ತಂಡದಿಂದ ಹಲ್ಲೆ:ಪ್ರಕರಣ ದಾಖಲು-Times of karkala

ಕಾರ್ಕಳ ಬಿಜೆಪಿ ಮುಖಂಡನ ಮನೆಯವರಿಗೆ ರಾತ್ರೋರಾತ್ರಿ ತಂಡದಿಂದ ಹಲ್ಲೆ:ಪ್ರಕರಣ ದಾಖಲು-Times of karkala
Times Of karkala whatsapp Group link:
ಕಾರ್ಕಳ:ಕಾರ್ಕಳ ಬಿಜೆಪಿ ನಗರ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಜಯ್ ಸಪಳಿಗ ರವರ ಮನೆಮೇಲೇ   ತಂಡವೊಂದು ಮಧ್ಯರಾತ್ರಿ 10 .00 ಗಂಟೆಗೆ ದಾಳಿ ಮಾಡಿ ಮನೆಯವರ ಮೇಲೆ ಹಲ್ಲೆ ಮಾಡಿದ ಘಟನೆ 13/06/2020 ರಂದು ನಡೆದಿದ್ದು ಈ ಕುರಿತು ಜಗದೀಶ್ ಸಪಳಿಗ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು  ದಾಖಲಿಸಿದ್ದಾರೆ.ಕಾರ್ಕಳ ತಾಲೂಕು ದುರ್ಗಾ ಗ್ರಾಮದ ತೆಳ್ಳಾರು ರಸ್ತೆಯಲ್ಲಿರುವ ಜಗದೀಶ್ ಸಪಳಿಗ  ಮನೆಗೆ ಹಾಗೂ ಅಂಗಳಕ್ಕೆ ಸುಮಾರು 7-8 ಜನ ಆರೋಪಿತರುಗಳು ಅಕ್ರಮ ಕೂಟ ಸೇರಿಕೊಂಡು ಸಮಾನ ಉದ್ದೇಶದಿಂದ MH-04-HF-104 ನೇ ನಂಬ್ರದ ಕಾರು ಹಾಗೂ ರಿಕ್ಷಾದಲ್ಲಿ ಮಾರಕಾಸ್ತ್ರಗಳೊಂದಿಗೆ ಅಕ್ರಮ ಪ್ರವೇಶ ಮಾಡಿದ್ದು, ಆರೋಪಿತರ ಪೈಕಿ ರಾಜೇಶ್ ಶೆಟ್ಟಿ ಎಂಬಾತನು ಮರದ ಸೊಂಟೆಯಿಂದ ಹಾಗೂ ಕೈಯಿಂದ ಜಗದೀಶ್  ಬಲಕೈ ಶೋಲ್ಡರ್ ಮತ್ತು ಎಡಕಾಲಿಗೆ ಹೊಡೆದು  ಜೀವ ಬೆದರಿಕೆ ಹಾಕಿದ್ದು , ಅಲ್ಲದೇ ಆತನೊಡನೆ ಬಂದ ಸುರೇಶ್, ದಿನೇಶ್ ಪೂಜಾರಿ ಹಾಗೂ ಯೋಗೀಶ್ ಶೆಟ್ಟಿರವರು ಕೂಡ ಕಾಲಿನಿಂದ ತುಳಿದು  ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದು ಆ ಸಮಯ ತಪ್ಪಿಸಲು ಬಂದ  ತಂಗಿಯರಾದ ಸ್ವಾತಿ ಮತ್ತು ಸತ್ಯಾವತಿ ಮತ್ತು ತಾಯಿ ಶಾಂತ ಸಫಲಿಗ ರವರಿಗೂ ಆರೋಪಿಗಳು ದೂಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿರುವುದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ.


ಜಾಹೀರಾತು 

ಜಾಹೀರಾತು 


ಜಾಹೀರಾತು 

https://wa.me/919945283600


ಜಾಹೀರಾತು 


ಜಾಹೀರಾತು 


ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget