ಕಾರ್ಕಳ ರೋಟರಿಯ ಈ ಕಾರ್ಯಕ್ಕೆ ದೇಶ ವಿದೇಶದಿಂದ ಬೆಂಬಲ-Times of karkala

ಕಾರ್ಕಳ ರೋಟರಿಯ ಈ ಕಾರ್ಯಕ್ಕೆ ದೇಶ ವಿದೇಶದಿಂದ ಬೆಂಬಲ-Times of karkala

ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಆನ್ಸ್ ಕಾರ್ಕಳ ಇದರ ವತಿಯಿಂದ ಲಾಕ್‌ಡೌನ್ ಸಂದರ್ಭ ಮಹಿಳೆಯರಿಗಾಗಿ ವಿಶಿಷ್ಠ, ವಿಭಿನ್ನವಾದ ಕಾರ್ಯವೊಂದು ನಡೆದಿದ್ದು ಅದೀಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ರೋಟರಿ "10 ದಿವಸ 20 ವಿಷಯ" ಶೀರ್ಷಿಕೆಯಡಿ ಮಹಿಳೆಯರಿಗಾಗಿ ಆನ್ಲೈನ್ ಮೂಲಕವೇ 20 ಕಿಂತ ಹೆಚ್ಚು ವಿಷಯದ ಕುರಿತು ತರಬೇತಿ ನೀಡಲಾಗಿದ್ದು, ದೇಶ ವಿದೇಶ ದಿಂದ  ಮಹಿಳೆಯರು ಈ ಒಂದು ತರಬೇತಿಯ ಪ್ರಯೋಜನ ಪಡೆದುಕೊಂಡಿರುತ್ತಾರೆ.



ಯೋಗ, ಪ್ರಾಣಾಯಾಮ, ಮುದ್ರೆ, ಅಡುಗೆ ಅರಮನೆ, ಆರೋಗ್ಯವೇ ಭಾಗ್ಯ, ಬಾಡಿ ಫಿಟ್‌ನೆಸ್, ಡಾನ್ಸ್, ಬ್ಯೂಟಿ ಟಿಪ್ಸ್, ತರಕಾರಿ ವಿನ್ಯಾಸ, ಸಾರಿ ವಿನ್ಯಾಸ, ಕೇಶ ಅಲಂಕಾರ, ರಂಗೋಲಿ, ಸಂಸ್ಕೃತ ಸಂಭಾಷಣಾ, ಭಜನೆ, ಶ್ಲೋಕ, ಕ್ರಾಪ್ಟ್, ಚಿತ್ರಕಲೆ, ಕೈ ತೋಟ, ಬಟ್ಟೆ ಚೀಲ ತಯಾರಿ, ಮೆಹಂದಿ, ಆಯುರ್ವೇದ, ಶ್ಲೋಕ, ಸಾಕು ಪ್ರಾಣಿ ಆರೈಕೆ ಈ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಆನ್ ಲೈನ್ ಮೂಲಕವೇ ಮಾಹಿತಿ ಕಾರ್ಯಗಾರ ನಡೆಸಲಾಗಿದ್ದು, ರೋಟರಿಯ ಈ ಕಾರ್ಯದ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳಿಂದ ವಿಡಿಯೋ ಕ್ಲಿಪ್ ಸಂಗ್ರಹಿಸಿ, ವ್ಯಾಟ್ಸಪ್ ಮೂಲಕ ನೋಂದಣಿಯಾದ ಮಹಿಳೆಯರಿಗೆ ಈ ವಿಡಿಯೋ ಕಳುಹಿಸುವ ನಿಟ್ಟಿನಲ್ಲಿ ಜೂ. 19ರಂದು ಕಾರ್ಕಳ ಶಿವತಿಕೆರೆ ವರ್ಧಮಾನ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಯಿತು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷೆ ರೇಖಾ ಸೌಜನ್ಯ ಉಪಾಧ್ಯಾಯ, ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ರೋಟರಿ ಆನ್ಸ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್ ವಿಡಿಯೋ ಕ್ಲಿಪ್ ಸಮಾರೋಪ ಸಮಾರಂಭವನ್ನು ನಡೆಸಿದರು ಇವರೊಂದಿಗೆ Rtn ಸುವರ್ಣ ನಾಯಕ್ ಮತ್ತು Ann ವೃಂದಾ ಶೆಟ್ಟಿಯವರು ಹಾಜರಿದ್ದರು. ಇಂತ ಹಲವು ಯೋಜನೆ ಯನ್ನೂ ಇಟ್ಟುಕೊಂಡು 10 ದಿವಸ ರೋಟರಿ ಚಿಣ್ಣರ ಚಿಲಿಪಿಲಿ ಇನ್ನೊಂದು ಕಾರ್ಯಕ್ರಮವನ್ನು ಪ್ರಾರಂಭಿಸಲು ಹೆಮ್ಮೆಯಿಂದ ಈ ತಂಡವು ಸಿದ್ಧವಾಗಿ ನಿಂತಿದೆ.

Times Of karkala whatsapp Group link:


ಜಾಹೀರಾತು 
ಜಾಹೀರಾತು 
ಜಾಹೀರಾತು 
Add caption

ಜಾಹೀರಾತು 
https://wa.me/919945283600
ಜಾಹೀರಾತು 

ಜಾಹೀರಾತು 
ಜಾಹೀರಾತು 


Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget