ಕೋಚ್ ಇಲ್ಲದೆ 19 ಬಾರಿ ಗಿನ್ನಿಸ್ ದಾಖಲೆ ಮಾಡಿದ ಮಂಗಳೂರಿನ ರಕ್ಷಿತ್ ಶೆಟ್ಟಿಗೆ ಬೇಕಿದೆ ಬೆಂಬಲ-Times of karkala

ಕೋಚ್ ಇಲ್ಲದೆ 19  ಬಾರಿ ಗಿನ್ನಿಸ್ ದಾಖಲೆ ಮಾಡಿದ ಮಂಗಳೂರಿನ  ರಕ್ಷಿತ್ ಶೆಟ್ಟಿಗೆ ಬೇಕಿದೆ ಬೆಂಬಲ 
Times Of karkala whatsapp Group link:


ಕ್ರೀಡಾಲೋಕದಲ್ಲಿ ದಿನನಿತ್ಯ ಅದೆಷ್ಟೋ ಪ್ರತಿಭೆಗಳು ಮುನ್ನಲೆಗೆ ಬರುತ್ತವೆ. ಆ ಪ್ರತಿಭೆಗಳಿಗೆ ನೀರೂಣಿಸುವ ಅರ್ಥಾತ್ ಕೈ ಹಿಡಿದು ಬೆಳೆಸುವ ಗುರುಗಳು, ಪ್ರೋತ್ಸಾಹಕರು ಬೇಕು. ಆದರೆ
ಕ್ರೀಡಾಲೋಕದಲ್ಲಿ ಅದೆಷ್ಟೋ ಪ್ರತಿಭೆಗಳು ಸೂಕ್ತ ಪ್ರೋತ್ಸಾಹ ಸಿಗದೇ ಎಳೆಯದರಲ್ಲಿಯೇ ಕಮರಿ ಹೋಗಿವೆ.  ಮತ್ತೆ ಕೆಲವು ಅಂಥ ಸನ್ನಿವೇಶದಲ್ಲೇ ಪರಿಸ್ಥಿತಿ ಎದುರಿಸಿ ಹೆಮ್ಮರವಾಗಿ ಬೆಳೆದು ನಿಂತಿವೆ.  ಅಂತಹವರ ಸಾಲಿನ ಬರುವ ಹೆಸರೇ ಮಂಗಳೂರಿನ ರಕ್ಷಿತ್ ಶೆಟ್ಟಿ.

ಪ್ರಸ್ತುತ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಅರೆಕಾಲಿಕ ಕ್ರೀಡಾ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ಇವರು ಮಾಡಿರುವ ಸಾಧನೆ ನೋಡಿದರೆ ನಿಜಕ್ಕೂ ನೀವು ಆಶ್ಚರ್ಯಪಡುತ್ತೀರಿ. ಮ್ಯಾರಥೋನ್ ಓಟಗಾರರಾದ ಇವರು  ಪ್ರತಿ ಬಾರಿ ಕೂಡಾ ವಿಭಿನ್ನ ವಸ್ತ್ರ ವಿನ್ಯಾಸದೊಂದಿಗೆ ಓಡಿ ಒಂದಲ್ಲ ಎರಡಲ್ಲ ಬರೋಬ್ಬರಿ 19 ವಿಶ್ವದಾಖಲೆ ಬರೆದಿದ್ದಾರೆ.

19 ದಾಖಲೆ ಬರೆದಿದ್ದಾರೆ ನಿಜ. ಆದರೆ ಇವರ ಈ ಸಾಧನೆ ಇದುವರೆಗೂ ನಮ್ಮ ಕೇಂದ್ರ ಅಥವಾ ರಾಜ್ಯ ಸರ್ಕಾರದ ಕಣ್ಣಿಗೆ ಕಾಣಿಸಿಲ್ಲ. ಅಂದಮೇಲೆ ಸರ್ಕಾರದ ನೆರವು ಪ್ರೋತ್ಸಾಹ ಹೇಗೆ ತಾನೇ ಸಿಕ್ಕಿತು?  ಅದೆಷ್ಟೋ ಬಾರಿ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಅದು ಪ್ರಯೋಜನವಾಗಿಲ್ಲ. ಪಾಪ ನಮ್ಮ ಉಭಯ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ಗಾಢ ನಿದ್ದೆಯಲ್ಲಿ ಮುಳುಗಿದೆ. ಒಂದು ಸಣ್ಣ ಸರ್ಕಾರಿ ಉದ್ಯೋಗ ಕೂಡಾ ನೀಡಿಲ್ಲ.

ಹೀಗಾಗಿ ತಮ್ಮ ಜೀವನ ನಡೆಸಲು ಬೆಂಗಳೂರು ನಗರದ ಒಂದು ಖಾಸಗಿ ಶಾಲೆಯಲ್ಲಿ ಕ್ರೀಡಾ ತರಬೇತುದಾರರಾಗಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಅದೂ ಕೂಡಾ ಅರೆಕಾಲಿಕರಾಗಿ..

ಇನ್ನೂ ಹೀಗಿರುವಾಗ ಓಟಕ್ಕೆ ವೃತ್ತಿಪರ ತರಬೇತಿ ಪಡೆಯೋದು ಹೇಗೆ ಹೇಳಿ... 
ಹೀಗಾಗಿ ಬೆಂಗಳೂರು ನಗರದ ವಿಲ್ಸನ್ ಗಾರ್ಡನ್ ಉದ್ಯಾನವನ  ಮತ್ತು ರಸ್ತೆಗಳಲ್ಲಿ ಓಡಿ ಅಭ್ಯಾಸ ಮಾಡುತ್ತಾರೆ.  ಬೆಂಗಳೂರು ನಗರದ ವಾಹನ ದಟ್ಟಣೆ ಬಗ್ಗೆ ನಿಮಗೆ ಹೊಸದಾಗಿ ಏನೂ ನಿಮಗೆ ಹೇಳಬೇಕಿಲ್ಲ.  ತಮ್ಮ ಅಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ಎರಡು ದಿನಕ್ಕೊಮ್ಮೆ ಮುಂಜಾನೆ 6 ಗಂಟೆಗೆ ಅಭ್ಯಾಸ ಮಾಡುತ್ತಾರೆ.  Event ಗಳಿರುವ ಸಮಯದಲ್ಲಿ 2 ವಾರಕ್ಕೂ ಹೆಚ್ಚು ಕಾಲ 2 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾರೆ. 
ಇಷ್ಟು ಮಾತ್ರವಲ್ಲದೆ ಯಾವದೇ ಸ್ಥಳಕ್ಕೆ ಹೋಗಬೇಕಾದ ಸಮಯದಲ್ಲಿ ಕೂಡಾ ವಾಹನ ಬಳಸದೆ ನಡೆದುಕೊಂಡು ಅಥವಾ ಓದಿಕೊಂಡು ಹೋಗುತ್ತಾರೆ.  ಇದು ತಮ್ಮ ಅಭ್ಯಾಸಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ರಕ್ಷಿತ್ ಶೆಟ್ಟಿ 

ಇವರ ಕ್ರೀಡಾ ಬದುಕಿನ ಆರಂಭದ ದಿನಗಳು ಸುಲಭಮಯವಾಗಿದ್ದವಾ ಎಂದರೆ ಅದಕ್ಕೂ ಸಿಗುವ ಉತ್ತರ ಇಲ್ಲ ಎಂಬುದೇ. 
ಬಡತನದ ಮನೆಯಲ್ಲಿ ಹುಟ್ಟಿದ ಬಾಲಕ  ರಕ್ಷಿತ್ ಅವರಿಗೆ ಓಟಗಾರನಾಗಬೇಕು ಎಂಬ ಆಸೆ ಉದಯವಾಯಿತು.  ಆದರೆ ಬಡತನ ಹಾಸಿ ಹೊದ್ದ ಕುಟುಂಬಕ್ಕೆ ತಜ್ಞ ತರಬೇತುದಾರರ ಬಳಿ ಕಳಿಸಿ  ತರಬೇತಿ ನೀಡುವ ಶಕ್ತಿ ಇರಲಿಲ್ಲ.  ಹಾಗೆಂದು ರಕ್ಷಿತ್ ಕಂಡ ಕನಸಿಗೆ ಸಮಾಧಿ ಕಟ್ಟಲಿಲ್ಲ.  ಬದಲಾಗಿ ಮಹಾಭಾರತದ ಏಕಲವ್ಯನ ರೀತಿಯಲ್ಲಿ ಬೆಳೆದು ನಿಲ್ಲಲು ಮುಂದಾದರು. ತಾವೇ ಓಡಲು  ಆರಂಭ ಮಾಡಿದರು. ಪ್ರಸಿದ್ಧ ಮ್ಯಾರಥೋನ್ ಓಟಗಾರರನ್ನ ಗಮನಿಸಿ, ದೇಶ ವಿದೇಶದ ಮ್ಯಾರಥೋನ್ ಗಳನ್ನ ನೋಡಿ ಸ್ಫೂರ್ತಿ ಪಡೆದರು.  ಆರಂಭದ ದಿನಗಳಲ್ಲಿ ತಮ್ಮ ಮನೆಯಿಂದ ಬಸ್ ನಿಲ್ದಾಣದ ತನಕ ಒಂದುವರೆ ಕಿಲೋಮೀಟರ್ ದೂರ ಓಡಲು ಶುರು ಮಾಡಿದರು.  ಬಳಿಕ ಉಡುಪಿಯ ಸಮುದ್ರದ ದಂಡೆಯ ಮೇಲೆ ದಿನನಿತ್ಯ ಒಂದು ತಾಸು  ಓಡಿ ಅಭ್ಯಾಸ ಮಾಡಿದರು. 

ಇದರೊಂದಿಗೆ ತಮ್ಮ ಪದವಿ ಮುಗಿಸಿ ಮುಂಬೈಗೆ ಕೆಲಸಕ್ಕೆ ಹೋದರು.  ಬಹುತೇಕ ಜನ ತಮ್ಮ ಉದ್ಯೋಗದ ಒತ್ತಡದ ನಡುವೆ ತಮ್ಮ ಕನಸುಗಳಿಗೆ ಎಳ್ಳು ನೀರು ಬಿಡುತ್ತಾರೆ.  ಆದರೆ ರಕ್ಷಿತ್ ಆ ರೀತಿ ಮಾಡದೆ ತಮ್ಮ ಸಮಯದಲ್ಲಿ ಒಂದಿಷ್ಟು ಸಮಯ ಅಭ್ಯಾಸ ಮಾಡಲು ಮೀಸಲು ಇಟ್ಟು ಸಮುದ್ರದ ದಂಡೆ ಮೇಲೆ ಅಭ್ಯಾಸ ಮಾಡಿದರು. 

 ಹಿಂದೆ ಗುರು ಇಲ್ಲದೆ ಕೇವಲ ಮುಂದೆ ಗುರಿ ಇಟ್ಟುಕೊಂಡು ಅಭ್ಯಾಸ ಮಾಡಿ ಒಂದು ಹಂತದ ಓಟಗಾರನಾಗಿ ಬೆಳೆದು ನಿಂತರು. ಅದೇ ಸಮಯದಲ್ಲಿ ಅವರ ಸಾಮರ್ಥ್ಯ ಪ್ರದರ್ಶನಕ್ಕೆ ಒಂದು ವೇದಿಕೆ ಸಿದ್ದವಾಗಿತ್ತು. ಅದುವೇ ಸ್ಟ್ಯಾಂಡರ್ಡ್ ಪಾಯಿಂಟ್ ಮ್ಯಾರಾಥೋನ್ -2008. ಮುಂಬೈ ನಗರದಲ್ಲಿ ನಡೆದ ಈ ಮ್ಯಾರಥೋನ್ ನಲ್ಲಿ ಪಾಲ್ಗೊಂಡ ಇವರು ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ದಾಖಲೆಗಳ ಮೇಲೆ ದಾಖಲೆ ಬರೆದರು.

ಇವರು ಮಾಡಿರುವ ದಾಖಲೆಗಳ ಪಟ್ಟಿ ಓದಿ 

ಟಿಸಿಎಸ್ ವರ್ಲ್ಡ್ 10k ಬೆಂಗಳೂರು ಮ್ಯಾರಥೋನ್ 2014ಏಪ್ರಿಲ್ ನಲ್ಲಿ  ಪ್ರಾಣಿ ವಸ್ತ್ರ ವಿನ್ಯಾಸ 
ಬಳಿಕ ಅದೇ ವರ್ಷ ಸೆಪ್ಟೆಂಬರ್ ನಲ್ಲಿ  ನಡೆದ ಮೈಸೂರ ಮ್ಯಾರಥೋನ್ 10ಕೆಎಂ ಓಟದಲ್ಲಿ ತರಕಾರಿ ವಸ್ತ್ರ ವಿನ್ಯಾಸದೊಂದಿಗೆ ಓಡಿ ಪ್ರಶಸ್ತಿ, 
ಬೆಂಗಳೂರಿನ ಅರ್ಧ  ಮ್ಯಾರಥೋನ್ ನಲ್ಲಿ ಲವ್ ಹಾರ್ಟ್ ವಸ್ತ್ರ ವಿನ್ಯಾಸ 
ಅದೇ ವರ್ಷ ಡಿಸೆಂಬರ್ ನಲ್ಲಿ 21 ಕೆಎಂ ಬೆಂಗಳೂರು ಮಿಡ್ನೈಟ್ ಅರ್ಧ ಮ್ಯಾರಥೋನ್ ನಲ್ಲಿ ಸಂಗೀತ ಪರಿಕರಗಳ ವಸ್ತ್ರ ವಿನ್ಯಾಸ, 
ಅದಾದ ಬಳಿಕ ಬೆಂಗಳೂರು ನಗರದಲ್ಲಿಯೇ ನಡೆದ 21 ಕೆಎಂ ಅರ್ಧ ಮ್ಯಾರಥೋನ್  ನಲ್ಲಿ ಪ್ಲೇಯಿಂಗ್ ಕಾರ್ಡ್ ವಸ್ತ್ರ ವಿನ್ಯಾಸ, 
 ಮೈಸೂರು ಮ್ಯಾರಥೋನ್ ನಲ್ಲಿ ಮೇಷರಿಂಗ್ ಟೇಪ್  ವಸ್ತ್ರ ವಿನ್ಯಾಸ (2015ರಲ್ಲಿ )
2016ರ ಏಪ್ರಿಲ್ ನಲ್ಲಿ 21 ಕೆಎಂ ನಿರ್ಭಯ ಮಿಡ್ನೈಟ್ ಅರ್ಧ ಮ್ಯಾರಥೋನ್ ನಲ್ಲಿ ವೊಫಿ ಕುಶನ್ ವಸ್ತ್ರ ವಿನ್ಯಾಸ 
ಅದೇ ವರ್ಷ ಜೂಲೈ ನಲ್ಲಿ ಬೆಂಗಳೂರು ಮ್ಯಾರಥೋನ್ ನಲ್ಲಿ ಫಾಸ್ಟ್ ಫುಡ್ ಐಟಮ್ ವಸ್ತ್ರ ವಿನ್ಯಾಸ 
ಅದೇ ವರ್ಷ ಸೆಪ್ಟೆಂಬರ್ ನಲ್ಲಿ ಮೈಸೂರು ಕಾವೇರಿ ಟೈಲ ಮ್ಯಾರಥೋನ್  ನಲ್ಲಿ ಮತ್ತು ಅದೇ ವರ್ಷ ಡಿಸೆಂಬರ್ ನಲ್ಲಿ ಬೆಂಗಳೂರು ಮ್ಯಾರಥೋನ್  ನಲ್ಲಿ ಸಲ್ವಾರ್ ಕಮಿಜ್ 
ಅದಾದ ಬಳಿಕ ಅದೇ ಡಿಸೆಂಬರ್ ನಲ್ಲಿ ಬೆಂಗಳೂರು ಮ್ಯಾರಥೋನ್  ನಲ್ಲಿ ಬೀಚ್ ಸ್ವೀಪರ್ ವಸ್ತ್ರ ವಿನ್ಯಾಸ 
ಅದೇ ವರ್ಷ ಡಿಸೆಂಬರ್ ನಲ್ಲಿ ಬೆಂಗಳೂರು 21ಕೆಎಂ ಅರ್ಧ ಮಿಡ್ನೈಟ್ ಮ್ಯಾರಥೋನ್ ಹಾಗೂ 2017 ಫೆಬ್ರವರಿಯಲ್ಲಿ ಮಂಗಳೂರು ನಿಟ್ಟೆ ಮ್ಯಾರಥೋನ್ ನಲ್ಲಿ ಬಾಕ್ಸರ್ ವಸ್ತ್ರ ವಿನ್ಯಾಸ 
2017ರ ಸೆಪ್ಟೆಂಬರ್ ನ ಮೈಸೂರು ಅರ್ಧ ಮ್ಯಾರಥೋನ್ ನಲ್ಲಿ ಶಾಲಾ ಸಮವಸ್ತ್ರ,
2017 ಅಕ್ಟೋಬರ್ ನಲ್ಲಿ ನಡೆದ ಬೆಂಗಳೂರು ಮ್ಯಾರಥೋನ್  ನಲ್ಲಿ ಶೂ ವಸ್ತ್ರ ವಿನ್ಯಾಸ 
ಅದೇ ವರ್ಷ ನವೆಂಬರ್ ನಲ್ಲಿ ಮೈಸೂರು ಕಾವೇರಿ ಟೈಲ ಮ್ಯಾರಥೋನ್  ನಲ್ಲಿ  ಕಪಿ ವಸ್ತ್ರ ವಿನ್ಯಾಸ 
ಮತ್ತು ಅದೇ ವರ್ಷ ಡಿಸೆಂಬರ್ ತಿಂಗಳಿನಲ್ಲಿ apr ಅರ್ಧ ಮ್ಯಾರಥೋನ್ ನಲ್ಲಿ ವ್ರಕ್ಷ ವಸ್ತ್ರ ವಿನ್ಯಾಸ 
2018 ಸೆಪ್ಟೆಂಬರ್ 21 ಕೆಎಂ ಅರ್ಧ ಮ್ಯಾರಥೋನ್ ನಲ್ಲಿ ಟೆಲಿಫೋನ್ ವಸ್ತ್ರ ವಿನ್ಯಾಸ ಧರಿಸಿ ದಾಖಲೆ 
2019ರ ಅಕ್ಟೋಬರ್ ನಲ್ಲಿ ಬೆಂಗಳೂರು  ಅರ್ಧ ಮ್ಯಾರಥೋನ್ ನಲ್ಲಿ ಬ್ಯಾರಿಸ್ಟರ್ ವಸ್ತ್ರ ವಿನ್ಯಾಸ ಧರಿಸಿ ಪಾಲ್ಗೊಂಡು ಹೊಸ ದಾಖಲೆ ಬರೆದ ಇವರು ವಿಜೇತರಾಗಿದ್ದಾರೆ

ಹೀಗೆ ಸಾಧನೆ ಮಾಡಿರುವ ರಕ್ಷಿತ್ ಅವರಿಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಪ್ರೋತ್ಸಾಹ ಸಿಕ್ಕಿಲ್ಲ. ಈ ದಿಶೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಗಮನ ಹರಿಸಿ ಒಂದು ವೇಳೆ ಪ್ರೋತ್ಸಾಹ ಸಿಕ್ಕಲ್ಲಿ ಅವರ ಇನ್ನಷ್ಟು ಸಾಧನೆಗೆ ಶಕ್ತಿ ತುಂಬಿದ ಹಾಗೆ ಆಗುತ್ತದೆ ಅನ್ನುವುದು ಮಾತ್ರ ಸುಳ್ಳಲ್ಲ. 

ಜಾಹೀರಾತು 
ಜಾಹೀರಾತು 
ಜಾಹೀರಾತು 


ಜಾಹೀರಾತು 
https://wa.me/919945283600
ಜಾಹೀರಾತು 


ಜಾಹೀರಾತು 

ಜಾಹೀರಾತು ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget