ಮುದ್ರಾಡಿ ಗ್ರಾ. ಪಂ 5 ವರ್ಷಗಳ ಆಡಳಿತಾವಧಿಯಲ್ಲಿ ರೂ 12 ಕೋಟಿ ಅನುದಾನ ಸದ್ಬಳಕೆ-Times of karkala

ಮುದ್ರಾಡಿ ಗ್ರಾಮ ಪಂಚಾಯತವು ತನ್ನ ೫ ವರ್ಷಗಳ ಆಡಳಿತಾವಧಿಯಲ್ಲಿ ರೂ ೧೨ ಕೋಟಿ
ಅನುದಾನ ಸದ್ಬಳಕೆ ಮಾಡಿದೆ ಎಂದು ಮುದ್ರಾಡಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ ತಿಳಿಸಿದ್ದಾರೆ.ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಕಳಂಕರಹಿತ, ಭ್ರಷ್ಟಾಚಾರ ಮುಕ್ತ ಸ್ವಚ್ಚ ಆಡಳಿತವನ್ನುತಮ್ಮ ಆಡಳಿತದ ಅವಧಿಯಲ್ಲಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಮುದ್ರಾಡಿ ಹಾಗೂ ಕಬ್ಬಿನಾಲೆ ಗ್ರಾಮವ್ಯಾಪ್ತಿಯಲ್ಲಿ ರಸ್ತೆ, ನೀರು ಹಾಗೂ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.


 ರಾಜ್ಯ ಹಾಗೂ ಕೇಂದ್ರ ಸರಕಾರಗಳ ನೇರ ಅನುದಾನ, ಪಂಚಾಯತ್ ಸ್ವಂತ ಸಂಪನ್ಮೂಲ
೧೩ನೇ ಮತ್ತು ೧೪ನೇ ಹಣಕಾಸು ಯೋಜನೆ, ಉದ್ಯೋಗ ಖಾತರಿ ಯೋಜನೆ, ಎಸ್‌ಬಿಎಮ್
ಅನುದಾನ, ಸಂಸದರ ಅನುದಾನ, ಶಾಸಕರ ಅನುದಾನ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅನುದಾನ, ಸ್ಥಳೀಯ ಮತ್ತು ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ಮುದ್ರಡಿಯನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.


 ೨೦೧೫ ರಿಂದ ೨೦೨೦ರವರೆಗೆ ಸ್ವಂತ ಸಂಪನ್ಮೂಲ ಸಂಗ್ರಹಣೆಗೆ ಒತ್ತು ನೀಡಿ , ಶಾಸನ ಬದ್ದ
ಅನುದಾನ, ಪಂಚಾಯತ್ ತೆರಿಗೆ, ಇತರ ಶುಲ್ಕ ಸಂಗ್ರಹಣೆ, ನೀರು ಸರಬರಾಜು ಶುಲ್ಕ ಸೇರಿ
ಒಂದು ಕೋಟಿ ನಲವತ್ತು ಲಕ್ಷಕ್ಕೂ ಅಧಿಕ ಅನುದಾನವನ್ನು ಕಾಮಗಾರಿಗಳು, ಮೂಲಭೂತ
ಸೌಲಭ್ಯ, ಪ.ಜಾತಿ ಮತ್ತು ಪ.ಪಂಗಡಗಳ ಅಭಿವೃದ್ದಿಗೆ , ದಿವ್ಯಾಂಗ ಚೇತನರ ಸಮಗ್ರ ಅಭಿವೃದ್ದಿಗೆ, ಗ್ರಾಮ ಪಂಚಾಯತ್ ರಸ್ತೆಗಳ, ಮೋರಿಗಳ ಅಭಿವೃದ್ದಿಗೆ ಮತ್ತು ಆಡಳಿತ ವೆಚ್ಚಕ್ಕಾಗಿ ಮೀಸಲಿರಿಸಿ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ದಕ್ಷ ಆಡಳಿತವನ್ನು ನೀಡಲಾಗಿದೆ. 

ಉದ್ಯೋಗ ಖಾತರಿಯಲ್ಲಿ ಸತತ ಸಾಧನೆ
ಮಹಾತ್ಮಗಾಂಧಿ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ
ತಮ್ಮ ಗ್ರಾಮ ಪಂಚಾಯತವು ಸತತ ಸಾಧನೆಗೈದಿರುವುದಾಗಿ ಅವರು ತಿಳಿಸಿದ್ದಾರೆ. ೫ ವರ್ಷಗಳಲಿಮುದ್ರಾಡಿ ಗ್ರಾಮ ಪಂಚಾಯತ್‌ನಲ್ಲಿ ಅರುವತ್ತೊಂದು ಲಕ್ಷಕ್ಕೂ ಅಧಿಕ ಅನುದಾನ ಬಳಸಿ ನೀರಾವರಿ ಬಾವಿ, ತೋಟ ರಚನೆ , ಹಟ್ಟಿ ರಚನೆ ಹಾಗೂ ವಸತಿ ಯೋಜನೆಯ ಫಲಾನುಭವಿಗಳಿಗೆ ಪೂರಕ ಅನುದಾನ, ಸಾರ್ವಜನಿಕ ರಸ್ತೆ ನಿರ್ಮಾಣ ಹೀಗೆ ಹಲವಾರು ಕಾಮಗಾರಿಗಳನ್ನು ಮಾಡಲಾಗಿದೆ.


 ವಸತಿ ಯೋಜನೆ ಅನುದಾನ
೨೦೧೫ - ೧೬ನೇ ಸಾಲಿನಿಂದ ೨೦೨೦-೨೧ನೇ ಸಾಲಿನ ಜೂನ್ ತಿಂಗಳವರೆಗೆ ೧೨೮ಕ್ಕೂ
ಅಧಿಕ ಫಲಾನುಭವಿಗಳಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ. ಸ್ವಚ್ಚ ಭಾರತ್ ಮಿಷನ್ ಅನುದಾನದಿಂದ ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ ಮತ್ತು ಶಾಲಾ ಮಕ್ಕಳ ಶೌಚಾಲಯಗಳ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದ್ದು ಮುದ್ರಾಡಿಯ ಅಭಿವೃದ್ದಿಗೆ ಶ್ರಮಿಸಲಾಗಿದೆ. 

ಕಂದಾಯ ಇಲಾಖೆಯಿಂದ  ಮುದ್ರಾಡಿ ಗ್ರಾ.ಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ, ಮನಸ್ವಿನಿ,ವೃದ್ದಾಪ್ಯ ವೇತನ , ದಿವ್ಯಾಂಗ ಚೇತನ ವೇತನ, ವಿಧವಾ ವೇತನ, ಅಂತ್ಯ ಸಂಸ್ಕಾರ ಸಹಾಯಧನ,ರಾಷ್ಟ್ರೀಯ  ಕುಟುಂಬ ಪರಿಹರ ಯೋಜನೆ, ಪ್ರಾಕೃತಿಕ ವಿಕೋಪದಿಂದ ಆದ ಹಾನಿಗೆ ಪರಿಹಾರ,ಬಿಪಿಎಲ್ ಪಡಿತರ ಚೀಟಿ ಶೇ. ೮೫ರಷ್ಟು ಹೀಗೆ ಹಲವಾರು ಸರಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗಿದೆ. ಕೃಷಿ ಮತ್ತು ತೋಟಗಾರಿಕೆಯ ವಿವಿಧ ಸವಲತ್ತುಗಳನ್ನು ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗಿದೆ.

 ಮುದ್ರಾಡಿ ಗ್ರಾ. ಪಂ ವ್ಯಾಪ್ತಿಯ ದಾನಿಗಳಾದ ಮಂಜುನಾಥ ಪೂಜಾರಿ, ಮನೋಜ್ ಪೂಜಾರಿ
ಸೂರತ್, ದಿವಾಕರ.ಎನ್. ಶೆಟ್ಟಿ, ಚಂದ್ರಶೇಖರ ಹೆಗ್ಡೆ ಡಿಪಿಎಮ್, ಭೋಜ ಕುಲಾಲ್ ಬೇಳಂಜೆ ಕೃಷ್ಣ ಪ್ರಸಾದ್ ಭಟ್ ಚಕ್ರ ಕ್ಯಾಶ್ಯೂಸ್‌ರವರು ಬಟ್ಟೆ ಚೀಲ ವಿತರಿಸಿ ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಮಾಜಿ ಜಿ.ಪಂ ಸದಸ್ಯ ಮಂಜುನಾಥ ಪೂಜಾರಿ, ಗ್ರಾ.ಪಂ ಸದಸ್ಯ ಚಂದ್ರಶೇಖರ ಬಾಯರಿ, ಸಂತೋಷ್ ಕುಮಾರ್ ಶೆಟ್ಟಿ, ಜಯಲಕ್ಷ್ಮಿ ಉಪಸ್ಥಿತರಿದ್ದರು.
ಜಾಹೀರಾತು 

ಜಾಹೀರಾತು 
ಜಾಹೀರಾತು 

ಜಾಹೀರಾತು 
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9535242057. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪವನ  ಶರ್ಮ ಗುರೂಜಿ 9535242057. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ-9535242057
ಜಾಹೀರಾತು 
https://wa.me/919945283600
ಜಾಹೀರಾತು 


ಜಾಹೀರಾತು 

ಜಾಹೀರಾತು 


ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget