ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಸಾರ್ವಜನಿಕ ಅಸ್ಪ ತ್ರೆಗೆ ಆಂಬುಲೆನ್ಸ್ ಕೊಡುಗೆ-Times of karkala


ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಸಾರ್ವಜನಿಕ ಅಸ್ಪ ತ್ರೆಗೆ ಆಂಬುಲೆನ್ಸ್ ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ಗ್ಲೋಬಲ್ ಗ್ರ್ಯಾಂಟ್ ಯೋಜನೆಯ ಅಡಿಯಲ್ಲಿ ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸುಸಜ್ಜಿತವಾದ ಆಂಬ್ಯುಲೆನ್ಸ್ನ್ನು ಕೊಡುಗೆಯಾಗಿ ನೀಡಲಾಯಿತು .


ದ ರೋಟರಿ  ಫೌಂಡೇಶನ್ ರೋಟರಿ ಕ್ಲಬ್ ಕ್ರೌನ್ ಪಾಯಿಂಟ್ ಅಮೆರಿಕ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ6540  .ಹಾಗೂ ರೋಟರಿ ಕ್ಲಬ್ ಕಾರ್ಕಳ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3182.ಜಂಟಿಯಾಗಿ2019-20ಗ್ಲೋಬಲ್ ಗ್ರಾಂಟ್ ಯೋಜನೆಯಡಿಯಲ್ಲಿ  ಆ್ಯಂಬುಲೆನ್ಸಿನ ಕೊಡುಗೆಯನ್ನು ನೀಡಲಾಗಿರುತ್ತದೆ .

ಜಾಹೀರಾತು 
 https://wa.me/919945283600

ಮಾಜಿ ಜಿಲ್ಲಾ ಗವರ್ನರ್ ರೊಟೇರಿಯನ್ ಡಾ ಭರತೇಶ್ ಆದಿರಾಜ್ ಅವರು ಪ್ರಾಸ್ತಾವಿಕವಾಗಿ"ಜಗತ್ತಿನಾದ್ಯಂತ ರೋಟರಿ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿರತವಾಗಿದೆ ಈ ನಿಟ್ಟಿನಲ್ಲಿ ನಾವಿಂದು ನೀಡುತ್ತಿರುವ ಈ ಸೇವೆಯು   ಕಾರ್ಕಳದ ಜನತೆಗೆ ಉಪಯೋಗವಾಗಲಿ "ಎಂದು ಮಾತನಾಡಿದರು .ಈ ಸೇವೆಯನ್ನು ಕಾರ್ಯಗತಗೊಳಿಸಲು ಶ್ರಮಿಸಿದಂತಹ ಮಾಜಿ ಗವರ್ನರ್ ರೊಟೇರಿಯನ್ ಭರತೇಶ್ ಆದಿರಾಜ್ ,ಹಾಗೂ ನಿಕಟಪೂರ್ವ ಅಧ್ಯಕ್ಷ ಶೈಲೇಂದ್ರ ರಾವ್ ಅವರು ತಾಲ್ಲೂಕು ವೈದ್ಯಾಧಿಕಾರಿ  ಕೃಷ್ಣಾನಂದ ಶೆಟ್ಟಿ ಹಾಗೂ  ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಪಿಕೆ ಮಲ್ಯ ಅವರಿಗೆ ಹಸ್ತಾಂತರಿಸಿದರು .


ಈ  ಸಂದರ್ಭದಲ್ಲಿ ಕಾರ್ಕಳ ರೋಟರಿ ಅಧ್ಯಕ್ಷರಾದ ಜಗದೀಶ್, ಕಾರ್ಯದರ್ಶಿ ವಸಂತ್, ನಿಯೋಜಿತ ಅಧ್ಯಕ್ಷೆ ರೊ. ರೇಖಾ ಉಪಾಧ್ಯಾಯ, ರೋಟರಿ ಸದಸ್ಯರಾದ ತುಕಾರಾಮ ನಾಯಕ್, ಜನಾರ್ದನ ಇ ಹಾಗೂ  ಸಮುದಾಯ ಸೇವಾ ನಿರ್ದೇಶಕರಾದ  ಇಕ್ಬಾಲ್ ಅಹ್ಮದ್ ,ಡಾ. ಕೀರ್ತಿನಾಥ ಬಲ್ಲಾಳ್, ಬಾಲಕೃಷ್ಣ ದೇವಾಡಿಗ ,ರಮಿತಾ ಶೈಲೇಂದ್ರ ,ಸೌಜನ್ಯ ಉಪಾಧ್ಯಾಯ ,ಅಮರನಾಥ್ ಪ್ರಸಾದ್ ಮುಂತಾದವರು  ಉಪಸ್ಥಿತರಿದ್ದರು.

ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget