ಕರಾವಳಿ:ಅರಬ್ಬೀ ಸಮುದ್ರ ಪ್ರಕ್ಷುಬ್ದ:ಮನೆ ಕಡಲು ಪಾಲು-Times of karkala
Times Of karkala whatsapp Group link:
ಕರಾವಳಿಯಲ್ಲಿ ಮುಂಗಾರು ಚುರುಕು ಗೊಂಡಿದ್ದು, ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿದೆ.
ಮುಂಗಾರು ಆರಂಭದಲ್ಲೇ ಮಂಗಳೂರಿನಲ್ಲಿ ಮನೆಯೊಂದು ಕಡಲ ಪಾಲಾಗಿದೆ. ಮಂಗಳೂರು ನಗರದ ಹೊರವಲಯದ ಸೋಮೇಶ್ವರದಲ್ಲಿ ಘಟನೆ ನಡೆದಿದ್ದು, ಮೋಹನ್ ಎಂಬವರಿಗೆ ಸೇರಿದ ಮನೆ ಸಮುದ್ರಪಾಲಾಗಿದೆ.
ಕಳೆದ ವರ್ಷವೇ ಮೋಹನ್ ಅವರ ಮನೆ ಸಮುದ್ರದ ಅಲೆಗಳ ಹೊಡೆತಕ್ಕೆ ಬಿರುಕು ಬಿಟ್ಟಿತ್ತು. ಆದರೆ ಈ ಬಾರಿ ಮಳೆಗಾಲದ ಆರಂಭದಲ್ಲಿ ಕುಸಿದು ಸಮುದ್ರ ಪಾಲಾಗಿದೆ. ಸೋಮೇಶ್ವರ ಭಾಗದಲ್ಲಿ ಕಡಲು ದಿನದಿಂದ ದಿನಕ್ಕೆ ಪ್ರಕ್ಷುಬ್ಧಗೊಳ್ಳುತ್ತಿದ್ದು, ಬಹುತೇಕ ಭೂ ಭಾಗವನ್ನು ಸಮುದ್ರ ಆವರಿಸಿದೆ. ಸೋಮೇಶ್ವರ ದೇವಸ್ಥಾನದ ಮೆಟ್ಟಿಲು,ಸ್ಮಶಾನ, ಕೆರೆಗಳೆಲ್ಲಾ ನೀರಿನಲ್ಲಿ ಮುಳುಗುವ ಭೀತಿ ಎದುರಾಗಿದೆ.
ಜಾಹೀರಾತು

ಜಾಹೀರಾತು

ಜಾಹೀರಾತು



Post a comment