ಯೋಧರ ಬಲಿದಾನ ವ್ಯರ್ಥವಾಗಬಾರದು ವಿನಯ್ ಕುಮಾರ್ ಸೊರಕೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಮತ್ತು ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಡಿದ ಯೋಧರಿಗೆ ಭಾವಪೂರ್ಣ ನಮನ-Times of karkala

ಯೋಧರ ಬಲಿದಾನ ವ್ಯರ್ಥವಾಗಬಾರದು ವಿನಯ್ ಕುಮಾರ್ ಸೊರಕೆ
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಮತ್ತು ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಡಿದ ಯೋಧರಿಗೆ ಭಾವಪೂರ್ಣ ನಮನ-Times of karkala 

Times Of karkala whatsapp Group link:

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಮತ್ತು ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿಕಟಪಾಡಿ ಮಹಿಳಾ ಮಂಡಳಿಯ ಸಭಾಭವನದಲ್ಲಿ ಇಂದು  ಚೀನಾ -ಭಾರತ ಗಡಿ ಭಾಗದಲ್ಲಿ ನಡೆದ ಹೋರಾಟ ದಲ್ಲಿ ಹುತಾತ್ಮರಾದ ನಮ್ಮ ದೇಶದ ವೀರ ಯೋಧರಿಗೆ ದೀಪವನ್ನು ಪ್ರಜ್ವಲಿಸುವ ಮೂಲಕ ಭಾವಪೂರ್ಣ ನಮನ ಗಳನ್ನು ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.

 ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ಯವರು ನುಡಿ ನಮನವನ್ನುಸಲ್ಲಿಸುತ್ತಾ,ಇಂದು ಒಂದೆಡೆ ಕೊರೋನ ಮಹಾಮಾರಿ,ಇನ್ನೊಂದೆಡೆ ಚೀನಾ, ನೇಪಾಳ ದೇಶಗಳಿಂದ ಸೈನಿಕರು ನಮ್ಮ ದೇಶದೊಳಗೆ ನುಗ್ಗುವ ಸಾಹಸ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ನಡೆದ ಹೋರಾಟದಲ್ಲಿ ನಮ್ಮ ದೇಶದ ಅನೇಕ ಯೋಧರು ವೀರ ಮರಣವನ್ನಪ್ಪಿದ್ದಾರೆ.ಅವರ ಈ ಬಲಿದಾನ ವ್ಯರ್ಥ ವಾಗಬಾರದು.ನಮ್ಮ ಕೇಂದ್ರ ಸರ್ಕಾರವು ಇದಕ್ಕೆ ಪ್ರತಿಕಾರದ ರೂಪದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪ್ರಭಾ ಶೆಟ್ಟಿ ನಿರೂಪಿಸಿ ವಂದಿಸಿದರು.ಈ ಸಂದರ್ಭದಲ್ಲಿ  ಪುರಸಭಾ ಸದಸ್ಯರಾದ ಶ್ರೀಮತಿ ಶಾಂತಲತಾ.ಎಸ್.ಶೆಟ್ಟಿ, ಅಶ್ವಿನಿ ನವೀನ್ ಬಂಗೇರಾ, ಜ್ಯೋತಿ ಮೆನನ್,ರಾಗಿಣಿ,ಸುಗುಣ ಪೂಜಾರಿ,ಆಶಾ ಆಂಚನ್,ನತಾಲಿಯಾ ಮಾರ್ಟಿಸ್, ಅಶೋಕ್ ರಾವ್,ನಯೀಂ,ಪ್ರಭಾಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.


ಜಾಹೀರಾತು 
ಜಾಹೀರಾತು 
ಜಾಹೀರಾತು 


ಜಾಹೀರಾತು 
https://wa.me/919945283600
ಜಾಹೀರಾತು 


ಜಾಹೀರಾತು 

ಜಾಹೀರಾತು 


ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget