ಉಡುಪಿ ಜಿಲ್ಲೆಯಲ್ಲಿ ಕೋರೋನಾ ಹೆಸರಿನಲ್ಲಿ ಹಗರಣ ನಡೆಯುತ್ತಿದೆಯೇ?-Times of karkala

ಉಡುಪಿ ಜಿಲ್ಲೆಯಲ್ಲಿ ಕೋರೋನಾ ಹೆಸರಿನಲ್ಲಿ ಹಗರಣ ನಡೆಯುತ್ತಿದೆಯೇ?-Times of karkala 
Times Of karkala whatsapp Group link:
ಎಂಬ ಸಂದೇಹ ಜನರಲ್ಲಿ ಮೂಡುತ್ತಿರಲು ಕಾರಣಗಳು..
1. ಉಡುಪಿ ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳಿಗೂ ಮಹಾರಾಷ್ಟ್ರದಿಂದ ಜನರು ಬಂದಿದ್ದಾರೆ. ದಕ್ಷಿಣ ಕನ್ನಡಕ್ಕೆ ಉಡುಪಿ ಜಿಲ್ಲೆಗಿಂತ ದುಪ್ಪಟ್ಟು ಜನ ಮಹಾರಾಷ್ಟ್ರದಿಂದ ಬಂದಿದ್ದಾರೆ. ಆದರೆ ಬೇರೆ ಜಿಲ್ಲೆಗಳಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲಿ ಬರದ ಸೋಂಕು, ಉಡುಪಿ ಜಿಲ್ಲೆಯಲ್ಲಿ ಮಾತ್ರ ಹೇಗೆ ಇಷ್ಟು ಹೆಚ್ಚಿನ ಸಂಖ್ಯೆ ಕಂಡು ಬರಲು ಸಾಧ್ಯ...??
ಜಾಹೀರಾತು 

2. ಕ್ವಾರೈಂಟೆನ್ ಅಲ್ಲಿ ಇದ್ದ ಮಹಾರಾಷ್ಟ್ರದ ಬಂಧುಗಳನ್ನು 14 ದಿನದ ಅವಧಿಯನ್ನು 7 ದಿನಕ್ಕೆ ಇಳಿಸಿ ಮತ್ತು ರಿಪೋರ್ಟ್ ಬರುವ ಮೊದಲೇ ಮನೆಗೆ ಕಳುಹಿಸಿರುವ ಹಿಂದೆ ಏನಾದರೂ ದುರುದ್ದೇಶವಿರಬಹುದೇ??
ಜಾಹೀರಾತು 


3. ಇನ್ನು ಕ್ವಾರೈಂಟೆನ್ ಇಂದ ಮನೆಗೆ ಬಂದ ವ್ಯಕ್ತಿಗಳಿಗೆ ಪಾಸಿಟಿವ್ ರಿಪೋರ್ಟ್ ಬಂದನಂತರ, ಆಶಾ ಕಾರ್ಯಕರ್ತರು, ಅಲ್ಲಿನ ಪಂಚಾಯತ್ ಸಿಬ್ಬಂದಿಗಳು ರಿಪೋರ್ಟ್ ತೆಗೆದುಕೊಂಡು ಬರದೆ, ಅಂಬುಲೆನ್ಸ್ ಕಳುಹಿಸಿ ನಿಮಗೆ ಪಾಸಿಟಿವ್ ಇದೆ ಬನ್ನಿ ಅಂತ ಹೇಳಿದರೆ ಆ ವ್ಯಕ್ತಿ ಬರಲು ಸಾಧ್ಯವೇ.. ಒಂದು ವೇಳೆ ಅವರು ಆಸ್ಪತ್ರೆಗೆ ಬಂದರೆ ನಿಮ್ಮನ್ನು ಯಾರು ಬರಲು ಹೇಳಿದ್ದು..? ನಿಮ್ಮ ಹೆಸರು ರಿಪೋರ್ಟ್ ನಲ್ಲಿ ಇಲ್ಲ ಎಂಬ ಬೇಜವಾಬ್ದಾರಿಯ ಮಾತುಗಳು ಅಲ್ಲಿನ ಸಿಬ್ಬಂದಿಗಳಿಂದ ಬರುತ್ತಿದೆ.. (ಇಂತಹ 4- 5 ಘಟನೆಗಳು ನನ್ನ ಗಮನಕ್ಕೆ ಬಂದಿದೆ). ಇನ್ನು ಕೆಲವು ಕಡೆ ರಿಪೋರ್ಟ್ ಕೇಳಿದ ನಂತರ ನಾಳೆ ತೆಗೆದುಕೊಂಡು ಬರುತ್ತೇನೆ ಅಂತ ಹೋದವರು ವಾಪಸ್ ಬರಲೇ ಇಲ್ಲ.... ಇದಕ್ಕೆಲ್ಲಾ ಹೊಣೆ ಯಾರು..??
ಜಾಹೀರಾತು 
 https://wa.me/919945283600

4. ಪಾಸಿಟಿವ್ ಬಂದಿದೆ ಎಂದು ಕರೆದುಕೊಂಡು ಹೋದ ವ್ಯಕ್ತಿಯ ರಿಪೋರ್ಟ್ 2- 3 ದಿನದ ನಂತರ ನೆಗೆಟಿವ್ ಬರುವುದು ಹೇಗೆ... ಮತ್ತು ನೆಗೆಟಿವ್ ಬಂದ ವ್ಯಕ್ತಿಯ 2- 3 ದಿನದ ನಂತರ ಪಾಸಿಟಿವ್ ರಿಪೋರ್ಟ್ ಬರಲು ಹೇಗೆ ಸಾಧ್ಯ ? ಹಾಗಾದರೆ ಮೊದಲ ಪರೀಕ್ಷೆ ಮಾಡಿದ ರೀತಿ ಸರಿಯಿಲ್ಲವೇ..? ಸರಿ ಇಲ್ಲ ಅಂತ ಆದರೆ ಅದನ್ನು ಸರಿಪಡಿಸುವವರು ಯಾರು..??

ಜಾಹೀರಾತು 


ಇಂತಹ ಹಲವು ಘಟನೆ ಉಡುಪಿ ಜಿಲ್ಲೆಯಲ್ಲಿ ಕಾಣಸಿಗುತ್ತಿದೆ. ಗ್ರೀನ್ ಜೋನ್ ಅಲ್ಲಿ ಇದ್ದ ಉಡುಪಿ ಜಿಲ್ಲೆಯನ್ನು ಸೋಂಕಿನ ಕೂಪಕ್ಕೆ ತಳ್ಳಿದವರು ಯಾರು....? ಇದರ ಹಿಂದೆ ಜನಪ್ರತಿನಿಧಿಗಳ, ಆರೋಗ್ಯ ಕೇಂದ್ರಗಳ, ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.. ಈ ಎಲ್ಲಾ ಘಟನೆಗಳನ್ನು ಪರಿಶೀಲಿಸಿದಾಗ ಮಹಾರಾಷ್ಟ್ರ ಸೋಂಕಿತರ ಹೆಸರಿನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಪ್ರಶ್ನೆ ಮೂಡುತ್ತಿದೆ.


ಈ ಎಲ್ಲಾ ಕಾರಣಗಳಿಗೆ ಉಡುಪಿಯ ಮಾನ್ಯ ಜಿಲ್ಲಾಧಿಕಾರಿಯವರು ಮತ್ತು ಉಡುಪಿಯ ಜನಪ್ರತಿನಿಧಿಗಳು ಜನತೆಗೆ ಸ್ಪಷ್ಟೀಕರಣ ನೀಡುವ ಅಗತ್ಯತೆ ಇದೆ... ಇಲ್ಲವಾದರೆ ಉಡುಪಿ ಜಿಲ್ಲೆಯಲ್ಲಿ ಕೋರೋನಾ ಸೋಂಕಿನ ವಿಚಾರದಲ್ಲಿ ಹಗರಣ (scam) ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ-
                                                                                    -Suki Shetty i

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget