ಸಂದಿಗ್ದ ಪರಿಸ್ಥಿತಿಯಲ್ಲಿಯೂ ಕಾಂಗ್ರೆಸ್ ನಿಂದ ನೀಚ ರಾಜಕೀಯ ಸರಿಯೇ? ಕಾರ್ಕಳ ಬಿಜೆಪಿ ಯುವಮೊರ್ಚಾ ಅದ್ಯಕ್ಷ ವಿಖ್ಯಾತ್ ಶೆಟ್ಟಿ-Times of karkala

ಸಂದಿಗ್ದ ಪರಿಸ್ಥಿತಿಯಲ್ಲಿಯೂ ಕಾಂಗ್ರೆಸ್ ನಿಂದ ನೀಚ  ರಾಜಕೀಯ ಸರಿಯೇ? ಕಾರ್ಕಳ ಬಿಜೆಪಿ ಯುವಮೊರ್ಚಾ ಅದ್ಯಕ್ಷ ವಿಖ್ಯಾತ್ ಶೆಟ್ಟಿ-Times of karkala

Times Of karkala whatsapp Group link:

ಕಾರ್ಕಳ,ಜೂ.05: ಕೋರೋನಾ  ಮಹಾಮಾರಿಯ ಸಂಧರ್ಭದಲ್ಲಿಯೂ ಕಾಂಗ್ರೆಸ್ ನೀಚ ರಾಜಕೀಯ ಸರಿಯೇ ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಪ್ರಶ್ನಿಸಿದ್ದಾರೆ.


ರಾಜ್ಯ ಸರಕಾರವು ಇತರ ರಾಜ್ಯ ಹಾಗೂ  ದೇಶದಿಂದ ಬಂದಂತಹ ಬಂದುಗಳನ್ನು ಕ್ವಾರಂಟೈನ್ ಮಾಡಬೇಕೆಂದು ಆದೆಶಿಸಿದ ಮರುಕ್ಷಣವೆ ಕಾರ್ಯ ಪ್ರವೃತ್ತರಾದ  ಕಾರ್ಕಳದ ಶಾಸಕರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಬರುವ ನಮ್ಮೂರ ಬಂದುಗಳ ಕ್ವಾರಂಟೈನ್ ವ್ಯವಸ್ಥೆಯ ಬಗ್ಗೆ ಚರ್ಚಿಸಿ, ಅದಕ್ಕೆ ಬೇಕಾದ ಅದಿಕಾರಗಳನ್ನು ನೇಮಿಸಿ ಅವರಿಗೆ  ಜವಾಬ್ದಾರಿ ಇತ್ತು, ಅವರೊಂದಿಗೆ ಬಿಜೆಪಿ ಹಾಗು ಪರಿವಾರ ಸಂಘಟನೆಗಳ ಸ್ವಯಂ ಸೇವಕರ ತಂಡವನ್ನ ರಚಿಸಿದರು, ಕಾರ್ಕಳಕ್ಕೆ  ಬರುವಂತಹ ನಾಗರಿಕರಿಗೆ ಉತ್ತಮ ಗುಣಮಟ್ಟದ ವಸತಿ ಹಾಗು ಆಹಾರ ವ್ಯವಸ್ಥೆ ಮಾಡಲು ದಾನಿಗಳನ್ನ ಸಂಪರ್ಕಿಸಿ ಮನವೊಲಿಸಿಕೊಂಡರು.

ಜಾಹೀರಾತು 

ಹಾಗಾಗಿ ಕಾರ್ಕಳ ತಾಲೂಕಿನಾದ್ಯಂತ 35 ಕ್ಕೂ ಹೆಚ್ಚು ಕ್ವಾರಂಟೈನ್ ಕೇಂದ್ರಗಳು ಹತ್ತಿರ ಹತ್ತಿರ 2500  ಮಂದಿಗಳಿಗೆ ಕ್ವಾರಂಟೈನ್ ನಲ್ಲಿ ಇರಿಸಿ ಉಪಚರಿಸಿ ಯಶಸ್ವಿಯಾಗಿ ಇಡಿ ರಾಜ್ಯಕ್ಕೆ ಮಾದರಿಯಾಗಿ  ರಾಜ್ಯವೆ ಹೊಗಳಿ ಕೊಂಡಾಡುವ ರೀತಿಯಲ್ಲಿ ನಾಗರಿಕರ ಸೇವೆ ಮಾಡಿ ಬೀಳ್ಕೊಡಲಾಯಿತು.

ಎಲ್ಲೂ ಒಂದು ಕಡೆ ಒಂದು ಸಣ್ಣ ತೊಂದರೆ ಆಗದಂತೆ ಸ್ವತಃ ನಮ್ಮ ಶಾಸಕರಾದ ಮಾನ್ಯ ಸುನಿಲ್ ಕುಮಾರ್  ನೊಡಿಕೊಂಡು ಪ್ರತಿದಿನ ವಿವಿದ ಕ್ವಾರಂಟೈನ್ ಕೇಂದ್ರ ಕ್ಕೆ ಬೇಟಿ ನೀಡಿ ಪರಿಶಿಲಿಸುತಿದ್ದರು, ನಮ್ಮ ಮನೆಯ ಮಂದಿಗಳ ಆರೊಗ್ಯದ ಕಾಳಜಿ ಯಾವ ರೀತಿ ನೊಡಲಾಗುತ್ತೊ,ಅದೇ ರೀತಿ ನಮ್ಮ ಶಾಸಕರು ನೊಡಿಕೊಂಡರು, ಅದಕ್ಕೆ  ಪುರಾವೆ ಎಂಬಂತೆ ಕ್ವಾರಂಟೈನ್ ಅಲ್ಲಿದ್ದವರಿಗೆ ರೊಗ ನಿರೋಧ ಶಕ್ತಿ ಹೆಚ್ಚಿಸಲು ಕಷಾಯ ಹಾಗು ನೆಲ್ಲಿಕಾಯಿ ವ್ಯವಸ್ಥೆ ಮಾಡಿ ಹಂಚುತಿದ್ದರು.


ಈ ಒಂದು ಯಶಸ್ವಿ ಕಾರ್ಯದಲ್ಲಿ ಶಾಸಕರು ಅಧಿಕಾರಿಗಳುನ್ನು ಹಾಗು ಬಿಜೆಪಿ ಸಂಘಪರಿವಾರದ ಕಾರ್ಯಕರ್ತರನ್ನ ಒಟ್ಟಾಗಿ ಸೇರಿಸಿ ಕಾರ್ಕಳದ ಕ್ವಾರಂಟೈನ್ ವ್ಯವಸ್ಥೆಯಲ್ಲಿ ಯಾವುದೇ ದೋಷಬರದ ಹಾಗೆ ನೊಡಿಕೊಂಡರು ಎನ್ನಲು ಯಾವುದೇ ಅಳುಕಿಲ್ಲ, ಯಾಕೆಂದರೆ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದ ಜನರನ್ನ ಪರಿಸರ ಕಾಳಜಿಯೊಂದಿಗೆ ಸಸಿ ನೀಡಿ ಬೀಳ್ಕೊಡುವ ಸಂದರ್ಭದಲ್ಲಿ ಅವರ ಮನದಾಳದ ಮಾತುಗಳೊಟ್ಟಿಗೆ  ಸುರಿಯುತಿದ್ದ ಆನಂದ ಭಾಷ್ಟವೆ ಇದಕ್ಕೆ ಉತ್ತರವಾಗಿತ್ತು ,

ಜಾಹೀರಾತು 
 https://wa.me/919945283600

ಕಾರ್ಕಳದಲ್ಲಿ ಇಷ್ಟೆಲ್ಲಾ  ನಡೆದರೂ ತಲೆಕೆಡಿಕೊಳ್ಳದೆ ಕಂಬಳಿ ಹೊದ್ದು ಮಲಗಿದ್ದ ಕೆಲವೊಂದು ಕಾಂಗ್ರೆಸ್ನ ಪುಡಾರಿಗಳು ತನ್ನ ಸುತ್ತ ಮುತ್ತ ಇರುವ ಕ್ವಾರಂಟೈನ್ ಕೇಂದ್ರಕ್ಕೆ ಬೇಟಿ ಕೊಡಲು ಭಯದಿಂದ  ಇಚ್ಚಿಸದ  ಜನರು  ಶಾಸಕರು ಕ್ವಾರಂಟೈನ್ ಕೇಂದ್ರದಲ್ಲಿ ಪ್ರಚಾರವನ್ನ ಮಾಡಿದರು ಎಂದು ದೂರುತ್ತಾ ಇದ್ದಾರೆ , ನಮ್ಮ ಶಾಸಕರಿಗೆ ಪ್ರಚಾರದ ಅಗತ್ಯ ಇಲ್ಲ ಅವರು ಕಾರ್ಕಳದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೆ  ಅವರಿಗೆ ಪ್ರಚಾರವನ್ನ ದಿನನಿತ್ಯ ನೀಡುತ್ತದೆ ಎಂದು ಈ ಕಾಂಗ್ರೆಸಿಗರಿಗೆ ಹೇಳಲು ಇಚ್ಚಿಸುತ್ತೆನೆ,

ಜಾಹೀರಾತು 


ನಿಮ್ಮ ರಾಜಕೀಯ ಕೆಸರೆರೆಚಾಟ ಕೇವಲ ಚುನಾವಣೆಗಳು ಹತ್ತಿರ ಇರುವಾಗ ಚೆಂದ ಕಾಣುತ್ತದೆ. ದೇಶ ಸಂಕಟದಲ್ಲಿ ಇರುವಾಗ ರಾಜಕೀಯ ಮಾಡಿದರೆ ನಿಮ್ಮ ದೇಶದ ಬಗೆಗಿನ ಬದ್ದತೆಯನ್ನ ಅನಾವರಣ ಗೊಳಿಸುತ್ತದೆ.  ಅದ್ದರಿಂದ ಹೊಲಸು ರಾಜಕೀಯ ಬಿಟ್ಟು ದೇಶದ ನಾಗರಿಕನ ಕರ್ತವ್ಯನ್ನು  ಮೆರೆಯಿರಿ ಎಂದು ಹೇಳಿದರು.

ಜಾಹೀರಾತು 

ಜಾಹೀರಾತು
 ಜಾಹೀರಾತು
 ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget