ಬೆಳ್ಮಣ್:ಗ್ರಾಮದಲ್ಲಿ 40 ಕ್ಕೂ ಅಧಿಕ ಕರೋನಾ ಪಾಸಿಟಿವ್ ಪ್ರಕರಣ ದಾಖಲು
ದಿನೇ ದಿನೇ ಕರೋನ ಸೋಂಕು ಹೆಚ್ಚಾಗುತ್ತಿರುವ ಬೆಳ್ಮಣ್ ಗ್ರಾಮದಲ್ಲಿ ಬುಧವಾರ ಒಂದೇ ದಿನದಲ್ಲಿ ಸುಮಾರು 21 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ಕೆಲ ದಿನಗಳ ಹಿಂದೆ ಹೋಟೆಲ್ ಉದ್ಯಮಿಯೋರ್ವರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರ ಸಂಪರ್ಕದಲ್ಲಿವರನ್ನು ಹಾಗೂ ಅವರ ವಾಸದ ಮನೆಯ ಸಮೀಪದ ಮನೆಯವರನ್ನು ಒಟ್ಟು 22 ಮಂದಿಯನ್ನು ಕೋವಿಡ್ -19 ಪರೀಕ್ಷೆ ಮಾಡಲಾಗಿದ್ದು ಅವರಲ್ಲಿ 21 ಮಂದಿಯಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದೆ.
ಕಳೆದ ಒಂದು ವಾರದಲ್ಲಿ 20 ಕ್ಕೂ ಅಧಿಕ ಮಂದಿಯಲ್ಲಿ ಕರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಇದೀಗ ಬುಧವಾರ ಮತ್ತೆ ಬೆಳ್ಮಣ್ ಪೇಟೆಯ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಬೇಕರಿ ಮಾಲಿಕರಿಗೆ ಮತ್ತು ಕೆಲವೊಂದು ಅಂಗಡಿ ಮಾಲಿಕರ ಸಹಿತ ಬಾಡಿಗೆ ಮನೆಯಲ್ಲಿದ್ದವರು ಸೇರಿ ಒಟ್ಟು 21 ಮಂದಿಯಲ್ಲಿ ಕೋವಿಡ್ - 19 ಸೋಂಕು ಪತ್ತೆಯಾಗಿದೆ.
ಬೆಳ್ಮಣ್ ಗ್ರಾಮದಲ್ಲಿ ಇದೀಗ 40 ಕ್ಕೂ ಅಧಿಕ ಕರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಇಡೀ ಗ್ರಾಮದ ಜನ ಚಿಂತೆಗೀಡಾಗಿದ್ದಾರೆ.



Post a comment