ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಗಾಗಿ ಶೇ.50 ಬೆಡ್ ಮೀಸಲು ಕಡ್ಡಾಯ:ಜಿಲ್ಲಾಧಿಕಾರಿ ಜಿ.ಜಗದೀಶ್-Times of karkala


 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala

 


ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಗಾಗಿ ಶೇ.50 ಬೆಡ್ ಮೀಸಲು ಕಡ್ಡಾಯ:ಜಿಲ್ಲಾಧಿಕಾರಿ ಜಿ.ಜಗದೀಶ್-Times of karkalaಉಡುಪಿ ಜುಲೈ 28: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿತರ ಚಿಕಿತ್ಸೆಗಾಗಿ ಈಗಾಗಲೇ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾಯಿಸಿಕೊಂಡಿರುವ  ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಯಲ್ಲಿ 50 ಶೇಕಡಾ ಬೆಡ್ ಗಳನ್ನು ಕಡ್ಡಾಯವಾಗಿ ಮೀಸಲಿಡುವಂತೆ ಸೂಚಿಸಿ, ಬೆಡ್ ಗಳನ್ನು ಮೀಸಲಿಡದ ಆಸ್ಪತ್ರೆಗಳ ನೊಂದಣಿಯನ್ನು ಕೆಪಿಎಂಇ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

    ಅವರು ಮಂಗಳವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಸ್ತುತ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೊಂದಾಯಿಸಿಕೊ0ಡಿರುವ 20 ಆಸ್ಪತ್ರೆಗಳು ಮಾತ್ರವಲ್ಲದೇ ಇತರೆ ಖಾಸಗಿ ಆಸ್ಪತ್ರೆಗಳೂ ಸಹ ಎಬಿಆರ್‌ಕೆ ಯೋಜನೆಯಡಿ ನೊಂದಾಯಿಸಿಕೊಳ್ಳುವ0ತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ನೊಂದಾಯಿಸಿರುವ ಆಸ್ಪತ್ರೆಗಳಲ್ಲಿ ನಾಳೆಯಿಂದಲೇ ಬೆಡ್ ಗಳ ವ್ಯವಸ್ಥೆ ಸಿದ್ದಪಡಿಸಿಟ್ಟುಕೊಂಡಿದ್ದು, ಜಿಲ್ಲಾಡಳಿತ ಕಳುಹಿಸುವ ಕೋವಿಡ್-19 ರೋಗಿಗಳನ್ನು ತಕ್ಷಣದಲ್ಲೇ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರು.ಯಾವುದೇ  ಸಂದರ್ಭದಲ್ಲೂ ರೋಗಿಗೆ ಬೆಡ್ ಇಲ್ಲ ಎಂದು ನಿರಾಕರಿಸುವಂತಿಲ್ಲ , ನಿರಾಕರಿಸಿದ್ದಲ್ಲಿ ನೊಂದಣಿ ರದ್ದುಪಡಿಸುವುದರೊಂದಿಗೆ ಎಪಿಡಮಿಕ್  ಕಾಯ್ದೆಯಡಿ ಸಹ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

    ಕೋವಿಡ್ ಚಿಕಿತ್ಸೆಗೆ ನೊಂದಾಯಿಸಿರುವ ಆಸ್ಪತ್ರೆಗಳು , ಕೋವಿಡ್-19 ಚಿಕಿತ್ಸೆ ಮಾತ್ರವಲ್ಲದೇ ಮಹಿಳೆ ಮತ್ತು ಮಕ್ಕಳ ಚಿಕಿತ್ಸೆಗೆ ಸಹ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ತಿಳಿಸಿದರು.

    ಜಿಲ್ಲೆಯಲ್ಲಿ ಕೋವಿಡ್-19 ನಿಂದ ಹೆಚ್ಚಿನ ಮರಣ ಸಂಭವಿಸುವುದನ್ನು ತಡೆಯಲು ಜಿಲ್ಲಾಡಳಿತ ಅವಿರತ ಪ್ರಯತ್ನ ಮಾಡುತ್ತಿದ್ದು, ಜಿಲ್ಲೆಯ ಮರಣ ಪ್ರಮಾಣ ರಾಜ್ಯದಲ್ಲೇ ಅತ್ಯಂತ ಕನಿಷ್ಠವಾಗಿದೆ, ಹೋಂ ಕ್ವಾರಂಟೈನ್ ಉಲ್ಲಂಘನೆ ತಡೆಯುವಲ್ಲಿ ಸಹ ರಾಜ್ಯದಲ್ಲಿ  ಪ್ರಥಮ ಸ್ಥಾನದಲ್ಲಿದ್ದು, ಕ್ವಾರಂಟೈನ್ ಉಲ್ಲಂಘಿಸಿದ 69 ಜನರ ವಿರುದ್ದ ಈಗಾಗಲೇ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

  ಇತ್ತೀಚೆಗೆ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಯಲ್ಲಿರುವವರಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿದ್ದು, ಸೂಕ್ಕೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
     ಎಲ್ಲಾ ಆಸ್ಪತೆಗಳು ತಮ್ಮಲ್ಲಿರುವ ಬೆಡ್ ಗಳು ಮತ್ತು ಲಭ್ಯ ಸೌಲಭ್ಯಗಳ ಕುರಿತ  ಸಂಖ್ಯೆಯನ್ನು ಬೆಡ್ ಮೆನೆಜ್‌ಮಂಟ್ ನಲ್ಲಿ ದಾಖಲಿಸುವಂತೆ ಈಗಾಗಲೇ ಸೂಚಿಸಿದ್ದು, ದಾಖಲಿಸದವರ ವಿರುದ್ದ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

      ಜಿಲ್ಲೆಯಲ್ಲಿ ಕೋವಿಡ್ -19 ನ ಪ್ರಕರಣಗಳಲ್ಲಿ ರೋಗ ಲಕ್ಷಣ ಗಳಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕಳೆದ ವಾರದಿಂದ ಪ್ರತಿದಿನ ಸರಾಸರಿ 700 ಜನರ ಪರೀಕ್ಷೆ ನಡೆಸುತ್ತಿದ್ದು, ಪಾಸಿಟಿವ್ ಪ್ರಮಾಣ ಅಧಿಕವಾಗುತ್ತಿದೆ, ಸೋಂಕಿತರ ಪ್ರಾಥಮಿಕ ಸಂಪರ್ಕ , ಐಎಲ್‌ಐ ಮತ್ತು ಸಾರಿ ಯಲ್ಲಿ ಹೆಚ್ಚು ಪಾಸಿಟಿವ್ ಕಂಡು ಬರುತ್ತಿದೆ ಎಂದು ಜಿಲ್ಲಾ ಕೋವಿಡ್ 19 ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ತಿಳಿಸಿದರು. 

    ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್ ಮಾತನಾಡಿ, ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ, ಬಳಸಲಾಗಿರುವ ಸಂಖ್ಯೆ , ಖಾಲಿ ಇರುವ ಸಂಖ್ಯೆ , ಮೀಸಲಿಟ್ಟಿರುವ  ಸಂಖ್ಯೆ ಹಾಗೂ ವೆಂಟಿಲೇಟರ್, ಐಸಿಯು ಗಳ ಸಂಖ್ಯೆಯನ್ನು ನೀಡುವಂತೆ ತಿಳಿಸಿದರು.
      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ಸುದೀರ್  ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ವಿವಿದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
https://wa.me/919945283600
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget