"ದಕ್ಷಿಣ ಕನ್ನಡದಲ್ಲಿ ಮಧ್ಯಾಹ್ನದ ಬಳಿಕ ಲಾಕ್ಡೌನ್ ಎಂಬ ಸುಳ್ಳು ಸುದ್ದಿ"-ಡಿಸಿ ಸ್ಪಷ್ಟನೆ-Times of karkala
ಸಾಮಾಜಿಕ ಜಾಲತಾಣದಲ್ಲಿ ಜುಲೈ 6ರ ಸೋಮವಾರ ಬೆಳಗ್ಗಿನಿಂದ ಇಂತಹ ಸಂದೇಶವೊಂದು ಹರಿದಾಡುತ್ತಿದೆ. ಇದರಿಂದಾಗಿ ಜಿಲ್ಲೆಯ ಜನತೆ ಗೊಂದಲಕ್ಕಿಡಾಗಿದ್ದರು. ಕಚೇರಿಗಳು, ಮಾಧ್ಯಮಗಳನ್ನು ಸಂಪರ್ಕಿಸಿ ವಿಚಾರದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಈ ವಿಚಾರ ಜಿಲ್ಲಾಧಿಕಾರಿಗಳಿಗೂ ಮುಟ್ಟಿದ್ದು, ಇದೀಗ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ದ.ಕ. ಜಿಲ್ಲೆಯಲ್ಲಿ ನಿತ್ಯ ರಾತ್ರಿ 8ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಅಲ್ಲದೆ, ರವಿವಾರ ಇಡೀ ದಿನ ಲಾಕ್ಡೌನ್ ಜಾರಿಯಲ್ಲಿದೆ. ಉಳಿದ ಸಮಯದಲ್ಲಿ ಎಂದಿನಂತೆ ಲಾಕ್ಡೌನ್ ಸಡಿಲಿಕೆ ಇರಲಿದೆ. ಸದ್ಯ ಲಾಕ್ಡೌನ್ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುವುದಾಗಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸ್ಪಷ್ಟನೆ ನೀಡಿದ್ದಾರೆ.
Times Of karkala whatsapp Group link:
ಜಾಹೀರಾತು
Post a comment