ಗದ್ದೆಯಲ್ಲಿ ಭತ್ತದ ನಾಟಿ ಕೃಷಿ ಚಟುವಟಿಕೆ ನಡೆಸಿ ಕೃಷಿ ಪರಂಪರೆ ಉಳಿಸಿ ಬೆಳೆಸುತ್ತಿರುವ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್
ಉಡುಪಿ ನೆಹರು ಯುವ ಕೇಂದ್ರ ಮತ್ತು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಕೃಷಿ ಚಟುವಟಿಕೆ ನಡೆಯಿತು
ಗ್ರಾಮಗಳ ಅಭಿವೃದ್ಧಿಯಾಗಬೇಕಾದರೆ ಕೇವಲ ಸರಕಾರದಿಂದ ಸಾಧ್ಯವಿಲ್ಲ, ಅಲ್ಲಿಯ ಯುವಕ ಮಂಡಲಗಳ ಪಾತ್ರವೂ ಪ್ರಮುಖವಾಗಿದೆ. ವಿಶೇಷವಾಗಿ ಯುವಜನರ ಬೆಳವಣಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನ ಸಾಮಾಜಿಕ ಚಿಂತನೆಗಳೊಂದಿಗೆ ಹಲವಾರು ಅರ್ಥಪೂರ್ಣ ಚಟುವಟಿಕೆಗಳನ್ನು ನಡೆಸುತ್ತಿದೆ.
ಕೃಷಿಯಿಂದ ವಿಮುಖರಾಗುತ್ತಿರುವ ಯುವ ಜನತೆಗೆ ಹಾಗೂ ಸಾಗುವಳಿ ಮಾಡಲು ಯೋಗ್ಯವಿದ್ದ ಗದ್ದೆಗಳನ್ನು ಹಡಿಲು ಇಟ್ಟು ವ್ಯರ್ಥ ಮಾಡುವವರಿಗೆ ನಮ್ಮ ಈ ಕಾರ್ಯವು ಪ್ರೇರಣೆ ನೀಡಲಿ ಅನ್ನುವ ಸದುದ್ದೇಶ ಇವರದ್ದು.




Post a comment