ಜಿಲ್ಲಾ ಬಿಜೆಪಿ ಯುವಮೋರ್ಚಾ:ವಿಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಕುಮಾರಿ ಅಭಿಜ್ಞಾ ರಾವ್ ಗೆ ಸನ್ಮಾನ
ಜಿಲ್ಲಾ ಬಿಜೆಪಿ ಯುವಮೋರ್ಚಾ:ವಿಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಕುಮಾರಿ ಅಭಿಜ್ಞಾ ರಾವ್ ಗೆ ಸನ್ಮಾನ
ಜಿಲ್ಲಾ ಬಿಜೆಪಿ ಯುವಮೋರ್ಚಾ:ವಿಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಕುಮಾರಿ ಅಭಿಜ್ಞಾ ರಾವ್ ಗೆ ಸನ್ಮಾನ
ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ ವಿಖ್ಯಾತ್ ಶೆಟ್ಟಿ ಯವರ ನೇತೃತ್ವದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 596 ಅಂಕಗಳನ್ನು ಪಡೆದು ರಾಜ್ಯದಲ್ಲಿಯೇ ಪ್ರಥಮ ಸ್ಥಾನಿಯಾಗಿರುವ ಉಡುಪಿ ಜಿಲ್ಲೆಯ ಹೆಮ್ಮೆಯ ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾ ರಾವ್ ರವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾಧ್ಯಕ್ಷರಾದ ವಿಖ್ಯಾತ್ ಶೆಟ್ಟಿಯವರು, ತಮ್ಮ ಈ ಸಾಧನೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಹಾಗೂ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಲಿ ಎಂದು ಅಭಿಜ್ಞಾ ರಾವ್ ರವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಕ್ಷಿತ್ ಶೆಟ್ಟಿ ಹೆರ್ಗ, ಶ್ರೀ ಶರತ್ ಶೆಟ್ಟಿ ಉಪ್ಪುಂದ, ಉಪಾಧ್ಯಕ್ಷರಾದ ಶ್ರೀ ಸುಮಿತ್ ಮಡಿವಾಳ ಕಾರ್ಕಳ, ಶ್ರೀ ಸಚಿನ್ ಬೊಳ್ಜೆ, ಕೋಶಾಧಿಕಾರಿ ಮಟ್ಟು ಯತೀಶ್ ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಶ್ರೀ ಅಭಿರಾಜ್ ಸುವರ್ಣ, ಸ್ಥಳೀಯ ನಗರ ಸಭಾ ಸದಸ್ಯರಾದ ಶ್ರೀಮತಿ ರಜನಿ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.

Post a comment