ಬೆಳ್ಮಣ್:ಕೃಷಿ ಮಾಡಿ ಫಸಲನ್ನು ಅಶಕ್ತರಿಗೆ ಹಂಚುವ ವಿಶೇಷ ಕಾರ್ಯಕ್ಕಿಳಿದ ಭಜರಂಗದಳ ಕಾರ್ಯಕರ್ತರು-Times of karkala

ಬೆಳ್ಮಣ್:ಕೃಷಿ ಮಾಡಿ ಫಸಲನ್ನು  ಅಶಕ್ತರಿಗೆ ಹಂಚುವ ವಿಶೇಷ ಕಾರ್ಯಕ್ಕಿಳಿದ ಭಜರಂಗದಳ ಕಾರ್ಯಕರ್ತರು-Times of karkalaಬೆಳ್ಮಣ್: ಸೇವೆ ಮಾಡುವ ಮನಸಿದ್ದವರು ದಾರಿಯಿಲ್ಲವೆಂದು ಕೂರುವುದಿಲ್ಲ ಸ್ವತಃ ದಾರಿಯನ್ನು ಕಂಡುಕೊಳ್ಳುತ್ತಾರೆ.  ಅದಕ್ಕೊಂದು ಉತ್ತಮ ಉದಾಹರಣೆ ಬೆಳ್ಮಣ್ ನ ಕಾಂಜರಕಟ್ಟೆಯ ಬಜರಂಗದಳ ಕಾರ್ಯಕರ್ತರು. ಗದ್ದೆಯನ್ನು ದತ್ತು ತೆಗೆದುಕೊಂಡು ಭತ್ತ ಬೆಳೆದು ಅದನ್ನು ಬಡ ಅಶಕ್ತಕುಟುಂಬಗಳಿಗೆ ಹಂಚುವ ವಿನೂತನ ಕಾರ್ಯವಿದು. ಹೌದು ಕಾಂಜರಕಟ್ಟೆಯಲ್ಲಿ ಬಜರಂಗದಳದ  ನೂತನ ಮಾತೃಶಕ್ತಿ ಘಟಕ  ಉದ್ಘಾಟನೆಯಾದ ಎರಡೇ ದಿನದಲ್ಲಿ ಕಾರ್ಯಕರ್ತರು ಒಗ್ಗೂಡಿ ಈ ಕಾರ್ಯಕ್ಕೆ ಕೈ ಹಾಕಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಸುಮಾರು 5  ಎಕ್ರೆ ಗದ್ದೆಯನ್ನು  ದತ್ತು ಪಡೆದುಕೊಂಡ ಕಾರ್ಯಕರ್ತರು ಈ ಭೂಮಿಯಲ್ಲಿ ಕೃಷಿ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಅಲ್ಲದೆ ಇಲ್ಲಿ ಬಂದ  ಬೆಳೆಯನ್ನು ಅಶಕ್ತ ಕುಟುಂಬಗಳಿಗೆ ಹಾಗೂ ಬೈಹುಲ್ಲನ್ನು ಗೋಶಾಲೆಗೆ  ನೀಡುವ ಯೋಜನೆಯನ್ನು ಹಾಕಿದ್ದಾರೆ.

ಕೃಷಿಯಿಂದ ಯುವಜನತೆ ಹಿಮ್ಮುಖವಾತ್ತಿರುವ   ಇಂದಿನ ಕಾಲಘಟ್ಟದಲ್ಲಿ ಯುವಕರ ತಂಡವೊಂದು ಕೃಷಿ ಕಾರ್ಯಕ್ಕೆ ಇಳಿದಿದ್ದು ಎಲ್ಲರಿಗೂ ಮಾದರಿಯಾಗಿದೆ. 

Times Of karkala whatsapp Group link:
ಜಾಹೀರಾತು
 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala

ಜಾಹೀರಾತು 
https://wa.me/919945283600

ಜಾಹೀರಾತು 
ಜಾಹೀರಾತು 

ಜಾಹೀರಾತು 

ಜಾಹೀರಾತು 


Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget