ಗೋಪಾಲ ಭಂಡಾರಿ ಪುಣ್ಯಸ್ಮರಣೆ:ನೂರಕ್ಕೂ ಹೆಚ್ಚು ಜನರಿಂದ ರಕ್ತದಾನ-Times of karkala
ಕಾರ್ಕಳ: ಕಾರ್ಕಳ ಮಾಜಿ ಶಾಸಕ ದಿವಂಗತ ಗೋಪಾಲ್ ಭಂಡಾರಿಯವರ ಪುಣ್ಯಸ್ಮರಣೆಯ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಕಾರ್ಕಳದ ಮಹಾವೀರ ಸಭಾಭವನದಲ್ಲಿ ನಡೆಯಿತು.
ಈ ಸಂಧರ್ಭ ಮಾಜಿ ಸಚಿವ ರಮಾನಾಥ ರೈ ಯು.ಆರ್. ಸಭಾಪತಿ,ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಎಂಎಸ್ ಮಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉದ್ಯಮಿ ಡಿ.ಆರ್ ರಾಜು,ಗೋಪಾಲ್ ಭಂಡಾರಿ ಅವರ ಸಹೋದರ ಹಾಗೂ ಪುತ್ರಿ, ಕಾಂಗ್ರೆಸ್ ಪಧಾದಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ನೂರಕ್ಕೂ ಹೆಚ್ಚು ಜನರು ರಕ್ತದಾನಗೈದರು. ಬಿಪಿನ್ ಚಂದ್ರಪಾಲ್ ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಮಡಿವಾಳ ಸ್ವಾಗತಿಸಿ ಧನ್ಯವಾದಗೈದರು.
Post a comment