ಕಾರ್ಕಳ:ನಾಟಿ ಸೊಬಗು-Times of karkala

ಕಾರ್ಕಳ ತಾಲೂಕಿನಾದ್ಯಂತ ನಾಟಿಯ ಸೊಬಗು ಜೋರಾಗಿದೆ. ತಾಲೂಕಿನ ಮುಡಾರು, ನಲ್ಲೂರು, ಬಜಗೋಳಿ, ನಿಟ್ಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಉತ್ಸಹಾದಿಂದ ಸಾಗುತ್ತಿವೆ. ಮುಡಾರು ಗ್ರಾಮದದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಹಿಳೆಯರು ಶೋಭಾನೆ ಪದ ಹಾಡುತ್ತ, ನಾಟಿ ಮಾಡುವ ದೃಶ್ಯ ಗಮನ ಸೆಳೆಯಿತು. (Video Link: https://www.facebook.com/watch/?v=721718375286941 )

ಪುರುಷರು ಗದ್ದೆಯ ಬದಿ ಕಡಿಯುವುದು, ಹೂಡಿದ ಗದ್ದೆಗೆ ನೇಗಿಲನ್ನು ಎತ್ತುಗಳಿಗೆ ಕಟ್ಟಿ ಮರ ಹೊಡೆಯುವುದು ಮುಂತಾದ ಗದ್ದೆ ಕೆಲಸಗಳಲ್ಲಿ ನಿರತರಾಗಿದ್ದರು.
ಬಜಗೋಳಿ ಸಮೀಪದ ಕಲ್ಲೊಟ್ಟೆ ಪ್ರಕಾಶ್ ರವರು ಹಲವಾರು ವರ್ಷಗಳಿಂದ ಹಡೀಲು ಬಿದ್ದಿದ್ದ ಗದ್ದೆಯನ್ನು ಟ್ರಾಕ್ಟಾರ್ ಮೂಲಕ ಹಸನುಗೊಳಿಸಿ ನಾಟಿ ಕಾರ್ಯ ನಡೆಸಿದರು. ಕೃಷಿಕರು ಇತ್ತೀಚಿಗೆ ಯಾಂತ್ರೀಕೃತ ಕೃಷಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದು ಇದು ಕಾರ್ಮಿಕರ ಕೊರತೆಯನ್ನು ನೀಗಿಸುತ್ತಿದೆ.
Post a comment