ಕಾರ್ಕಳ : ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಬಿಜೆಪಿಯ ಬೆಂಬಲಿತ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಸೋಮವಾರ ಚುನಾವಣೆ ಪ್ರಕ್ರಿಯೆ ನಡೆದಿದ್ದು ಬಿಜೆಪಿ ಬೆಂಬಲಿತ 9 ಹಾಗೂ ಕಾಂಗ್ರೆಸ್ ಬೆಂಬಲಿತ 4 ಸದಸ್ಯರು ಒಳಗೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮೋಹನದಾಸ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರತ್ನಾಕರ ಅಮೀನ್ ನಾಮಪತ್ರ ಸಲ್ಲಿಸಿದ್ದು, ಅಂತಿಮ ಹಂತವಾಗಿ ಅವರಿಬ್ಬರು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಮೋಹನ್ದಾಸ್ ಶೆಟ್ಟಿ ಅವರು ಬ್ಯಾಂಕ್ವೊಂದರ ನಿವೃತ್ತ ಅಧಿಕಾರಿಯಾಗಿದ್ದಾರೆ, ರತ್ನಾಕರ ಅಮೀನ್ ಅವರು ನಿಕಟಪೂರ್ವದಲ್ಲಿಯೂ ಉಪಾಧ್ಯಕ್ಷರಾಗಿದ್ದರು.
ಜು.೧೦ ರಂದು ಅಧಿಕಾರ ಹಸ್ತಾಂತರ ನಡೆಯಲಿದೆ. ಚುನಾವಣಾಕಾರಿಯಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ಚುನಾವಣಾ ಪ್ರಕ್ರಿಯೆ ನಡೆಸಿದ್ದಾರೆ.
ನಿಕಟಪೂರ್ವ ಎಪಿಎಂಸಿ ಅಧ್ಯಕ್ಷ ಜಯವರ್ಮ ಕಾರ್ಯದರ್ಶಿ ಜಿ.ಟಿ.ಕಾಕನೂರು, ಸಹಾಯಕ ಕಾರ್ಯದರ್ಶಿ ಶಿವಾನಂದ, ಎಪಿಎಂಸಿ ನಿರ್ದೇಶಕರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದ್ದಾರೆ.
Times Of karkala whatsapp Group link:
ಜಾಹೀರಾತು
Post a comment