►►ರಾಜ್ಯ ಕಾಂಗ್ರೆಸ್ ನಲ್ಲಿ ಡಿಕೆಶಿ ಪರ್ವ,ಕಾರ್ಕಳ ಕಾಂಗ್ರೆಸ್ ನಲ್ಲಿ ಸೂತಕದ ಛಾಯೆ. ►►ಪಂಚಾಯತ್ ಅಧ್ಯಕ್ಷನ ಸಮೇತ ಬಿಜೆಪಿಗೆ ಸೇರ್ಪಡೆ ►►ತಂದೆ ಮಗನ ಪ್ರತಿಷ್ಠೆಯ ಆಟಕ್ಕೆ ಕಾರ್ಕಳ ಕಾಂಗ್ರೆಸ್ ದಾಳ!

►►ರಾಜ್ಯ ಕಾಂಗ್ರೆಸ್ ನಲ್ಲಿ ಡಿಕೆಶಿ ಪರ್ವ,ಕಾರ್ಕಳ ಕಾಂಗ್ರೆಸ್ ನಲ್ಲಿ ಸೂತಕದ ಛಾಯೆ.
►►ಪಂಚಾಯತ್ ಅಧ್ಯಕ್ಷನ ಸಮೇತ ಬಿಜೆಪಿಗೆ ಸೇರ್ಪಡೆ 
►►ತಂದೆ ಮಗನ ಪ್ರತಿಷ್ಠೆಯ ಆಟಕ್ಕೆ ಕಾರ್ಕಳ ಕಾಂಗ್ರೆಸ್ ದಾಳ

Times Of karkala whatsapp Group link:

ಕಾರ್ಕಳ:ಕಾರ್ಕಳ ವಿಧಾನ ಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಕ್ಷೇತ್ರ. ಕರ್ನಾಟಕಕ್ಕೆ ಒಬ್ಬ ಮುಖ್ಯಮಂತ್ರಿಯನ್ನು ಕೊಟ್ಟಿದ್ದ ಕ್ಷೇತ್ರ ಇಂದು ಸೂಕ್ತ ಉತ್ತರಾಧಿಕಾರಿ ಇಲ್ಲದೆ ಸೊರಗುತ್ತಿದೆ. ಇದಕ್ಕೆಲ್ಲ ಕಾರಣ ಯಾರು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದೇ ಮುಖ್ಯಮಂತ್ರಿ ಎಂಬುದು ಸಾಬೀತಾಗುತ್ತದೆ.ಹೌದು,ಸೌಮ್ಯಸ್ವಭಾವದ ನಾಯಕ  ದಿ.ಹೆಚ್. ಗೋಪಾಲ  ಭಂಡಾರಿ ಯವರನ್ನು ಪಕ್ಷ ಬೇಧ ಮರೆತು ಜನ ಗೆಲ್ಲಿಸುತ್ತಿದ ಕಾಲವಿತ್ತು.  ಆದರೆ ಶಾಸಕ ಸುನೀಲ್ ಕುಮಾರ್ ಸಂಘಟನೆಗೆ, ನಾಯಕತ್ವಕ್ಕೆ  ಭಡಾರಿಯವರೂ ಸೋಲಬೇಕಾಯಿತು, ಕಳೆದ ವಿಧಾನಸಭಾ ಚುನಾವಣೆಯಲ್ಲಂತೂ ಭಂಡಾರಿಯವರು ಹೀನಾಯವಾಗಿ ಸೋಲಬೇಕಾಯಿತು. ಈ ಸೋಲಿಗೆ ಕಾರಣ ಭಂಡಾರಿಯವರಲ್ಲ ಸುನೀಲ್ ಕುಮಾರ್ ನಾಯಕತ್ವ ಸಂಘಟನೆಯೂ ಅಲ್ಲ, ಆ ಒಬ್ಬ ವ್ಯಕ್ತಿ. ಆ ವ್ಯಕ್ತಿ ಬೇರಾರೂ ಅಲ್ಲ ಮಾಜಿ ,ಮುಖ್ಯಮಂತ್ರಿ ವೀರಪ್ಪ  ಮೊಯಿಲಿ.ವೀರಪ್ಪ ಮೊಯ್ಲಿ ಯಾರಿಗೆ ಗೊತ್ತಿಲ್ಲ ಹೇಳಿ ಆದರೆ ಕಾರ್ಕಳದ ಜನತೆ ಮಾತ್ರ ಇಂದಿಗೂ  ಮೊಯ್ಲೆರ್ ಮುಖ್ಯಮಂತ್ರಿ ಆಂಡಲಾ ಕಾರ್ಲಾಗ್ ದಾದಾ ಮಲ್ದೆರ್( ಮೊಯಿಲಿಯವರು ಮುಖ್ಯಮಂತ್ರಿ ಆದರೂ ಕಾರ್ಕಳಕ್ಕೇನು ಮಾಡಿದ್ದಾರೆ  ಎಂದು ಕೇಳುವವರೇ ಹೆಚ್ಚು). ಅಷ್ಟರ ಮಟ್ಟಿಗೆ ಕಾರ್ಕಳದಲ್ಲಿ ಜನವಿರೋಧವನ್ನು ಕಟ್ಟಿಕೊಂಡಿದ್ದರು. ಆದರೆ ತನ್ನ ಶಿಷ್ಯ ಭಂಡಾರಿಯವರು ಗೆಲ್ಲಲು ತನ್ನ ಘನತೆ ಪ್ರತಿಷ್ಠೆಯೇ ಕಾರಣ ಎಂಬ ಭ್ರಮೆಯಲ್ಲಿದ್ದರು. ಆದರೆ ಇದೆ  ಭ್ರಮೆ  ಇಂದು ಕಾಂಗ್ರೆಸ್ ಗೆ  ಮುಳುವಾಗಿದೆ.

ಭಂಡಾರಿಯವರ  ವ್ಯಕ್ತಿತ್ವಕ್ಕೆ  ಪಕ್ಷಬೇಧ ಮರೆತು ಜನಬೆಂಬಲವಿತ್ತು ಅಲ್ಲದೆ ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ನ ನಾಯಕರ  ಸಂಘಟನೆಯೂ ಒಳ್ಳೆಯದಿತ್ತು ಈ ಕಾರಣದಿಂದಾಗಿ ಕಾರ್ಕಳದ  ಗೆಲ್ಲುವ ಕುದುರೆ  ಸುನೀಲ್ ಕುಮಾರ್ ವಿರುದ್ಧ ಮತಗಳು ಬಿದ್ದಿದ್ದವು ಅಲ್ಲದೆ ಕಾಂಗ್ರೆಸ್ ನ ತೆಕ್ಕೆಗೆ ಪುರಸಭೆ ಪಂಚಾಯತ್ ಗಳು ಬಿದ್ದಿದ್ದವು.

ಆದರೆ ಇದೀಗ  ಕಾಲ ಬದಲಾಗಿದೆ. ಎಲ್ಲೋ ದೂರದಲ್ಲಿ ನಡೆಯುತ್ತಿದ್ದ ಆಪರೇಷನ್ ಗಳು ಕಾರ್ಕಳದಲ್ಲಿ ನಡೆದಿದೆ.ಇದು ಕಾರ್ಕಳ ಕಾಂಗ್ರೆಸ್ ಗೆ  ತಲೆತಗ್ಗಿಸುವಂತಹ ಪರಿಸ್ಥಿತಿ,ಅವಲೋಕಿಸುವ ಸಮಯ. ಕಳೆದ ಚುನಾವಣೆಯಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಯವರಿಗೆ ಟಿಕೆಟ್ ನೀಡಬೇಕು ಎಂದು ನಡೆದಿದ್ದ  ಗದ್ದಲ ಮತ್ತು ಮೊಯಿಲಿ ಪುತ್ರ ಹರ್ಷಮೊಯಿಲಿ ಯನ್ನು ಕಾರ್ಕಳಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿದೆ ಎಂಬ ಗೊಂದಲದಿಂದಾಗಿ ಕಾಂಗ್ರೆಸ್ ಮಕಾಡೆ ಮಲಗಿತ್ತು. 

ಹಿರ್ಗಾನ ಪಂಚಾಯತ್ ನ ಅಧ್ಯಕ್ಷ ಸೇರಿದಂತೆ ಕಾಂಗ್ರೆಸ್ ನ ಒಟ್ಟು 9  ಮಂದಿ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾರ್ಕಳದ ಹೃದಯ ಭಾಗದಲ್ಲಿರುವ  ಅತ್ಯಂತ ಕ್ರಿಯಾಶೀಲ ಹಾಗೂ ಜನಪರ ಕೆಲಸಗಳಲ್ಲಿ ತುಂಬಾ ಹೆಸರು ವಾಸಿಯಾದಂತಹ  ಹೀರ್ಗಾನ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಅಧ್ಯಕ್ಷ ಹಾಗೂ ಇತರ ಸದಸ್ಯರು ಏಕ ಕಾಲದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು ಕಾಂಗ್ರೆಸ್ನ ಆಂತರಿಕ ಒಳ ಜಗಳ ಹಾಗೂ ಹಿರಿಯ ನಾಯಕರಾದಂಹ ವೀರಪ್ಪ ಮೊಯಿಲಿಯ ಪ್ರತಿಷ್ಠೆ ಹಾಗೂ ಘನತೆಗೆ ಕವಡೆ ಕಾಸಿನ ಕೀಮತ್ತಿಲ್ಲವೆಂದು ಈ ಮೂಲಕ ಹಾಗೂ ಈ ಹಿಂದೆಯೂ ಕೂಡ ಹಲವು ಬಾರಿ ಸಾಬೀತಾಗಿದೆ. 

ಇನ್ನು ಅಳಿದುಳಿದ ಬೆರಳೆಣಿಕೆಯ ಕಾರ್ಯಕರ್ತರು ಹಾಗೂ ನಾಯಕರುಗಳು ಈ ಮುಂದಿನ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಲು ಪೂರ್ವ ತಯಾರಿ ನಡೆಸುತ್ತಿದ್ದಾರೆ. ಒಂದು ವೇಳೆ ಹೀಗೆ ಮುಂದುವರಿದರೆ ವೀರಪ್ಪ ಮೊಯಿಲಿ ಮತ್ತು ಅವರ ಮಗ ಇಬ್ಬರೇ ಕಾಂಗ್ರೆಸ್ನಲ್ಲಿ ಉಳಿದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಲ್ಲಿದ್ದು ಕಾರ್ಕಳ ಕಾಂಗ್ರೆಸ್ ನ ಮಾನ ಹರಾಜು ಮಾಡಲು ತುದಿ ಕಾಲಲ್ಲಿ ನಿಂತಿರುವ ಹಾಗಿದೆ. 

ಈ ವಿಷಯನ್ನು ಅರಿತು ಹತಾಶರಾಗಿ, ಈ ಹಿಂದೆ ಬಿಜೆಪಿ ಸೇರ್ಪಡೆಯಾದಂತಹ ಕಾಂಗ್ರೆಸ್ ಮುಖಂಡರೊರ್ವರನ್ನು ವಾಪಸು ಕರೆ ತಂದು ಕಾಂಗ್ರೆಸ್ನಲ್ಲಿ ಕಾರ್ಕಳ ವಿಧಾನಸಭೆ ಕ್ಷೇತ್ರಕ್ಕೆ ನಿಲ್ಲಿಸುವುದಾಗಿ ಚಿಂತನೆ ಮಾಡಿದ್ದಾರೆ. ತನ್ನ ಸ್ವ ಕ್ಷೇತ್ರ ಚಿಕ್ಕ ಬಳ್ಳಾಪುರದಲ್ಲಿ ಹೀನಾಯ ಸೋಲನ್ನು ಅನುಭವಿಸಿ, ರಾಜ್ಯ ಮಟ್ಟದಲ್ಲಿ ತನ್ನ ಮರ್ಯಾದೆ ಹಾಗೂ ಘನತೆಯನ್ನು ಕಳೆದುಕೊಂಡಿದ್ದಾರೆ. ತನ್ನ ಮೂಲ ಕ್ಷೇತ್ರ ಕಾರ್ಕಳದಲ್ಲಿ ಈ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರಿಂದಲೆ ತನ್ನ ಸ್ವಾರ್ಥ ಹಾಗೂ ನೀಚ ರಾಜಕೀಯಕ್ಕೆ ತುಂಬು ಸಭೆಯಲ್ಲಿ ಕಾರ್ಯಕರ್ತರಿಂದ ಅವಾಚ್ಯ ಶಬ್ದಗಳಿಂದ ನಿಂದನೆಗೊಳಗಾಗಿ ಕಾರು ಏರಿ ಓಡಿ ಹೋದ ಸನ್ನಿವೇಶ ನಡೆದಿತ್ತು. ಇಷ್ಟೆಲ್ಲಾ ಆದ ಮೇಲೂ ತನ್ನ ಸ್ವಂತ  ಸ್ವಾರ್ಥಕ್ಕಾಗಿ ಕಾರ್ಕಳ ಕ್ಷೇತ್ರವನ್ನೆ ಬಲಿ ಪಡೆದು, ಸಾಕಾಗದ ವೀರಪ್ಪ ಮೊಯಿಲಿಯಿಂದ ಪಕ್ಷದ ಏಳಿಗೆಗಾಗಿ ಏನನ್ನೂ ನಿರೀಕ್ಷಿಸುದು ಅಸಾಧ್ಯದ ಮಾತು.

ಒಟ್ಟಿನಲ್ಲಿ ಕಾರ್ಕಳದಲ್ಲಿ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿದ ನಿಷ್ಠಾವಂತ ನಾಯಕರುಗಳು ಒಂದೆಡೆ ಸೇರಿ ಕಾರ್ಕಳಕ್ಕೆ ಯಾರು ಸೂಕ್ತ ಎಂಬುದನ್ನು ಅರಿತು ಗಟ್ಟಿ ನಿರ್ಧಾರಕ್ಕೆ ಬಾರದಿದ್ದರೆ ಮುಂದೊಂದು ದಿನ  ತಂದೆ ಮಗನ ಪ್ರತಿಷ್ಠೆಯ  ಆಟಕ್ಕೆ ಕಾರ್ಕಳ ಕಾಂಗ್ರೆಸ್ ದಾಳವಾಗಬಹುದು.
ಜಾಹೀರಾತು 
ಜಾಹೀರಾತು 

ಜಾಹೀರಾತು 

ಜಾಹೀರಾತು 

https://wa.me/919945283600
ಜಾಹೀರಾತು 
ಜಾಹೀರಾತು 
ಜಾಹೀರಾತು 
ಜಾಹೀರಾತು Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget