ಕಾರ್ಕಳ:ಹಳ್ಳಿ ಹಳ್ಳಿಗೂ ತಲುಪಿತಾ ಕೊರೋನಾ? ಹೊಣೆ ಯಾರು?-Times of karkala
ಕಾರ್ಕಳ:ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿದು,ಹಳ್ಳಿ ಹಳ್ಳಿಗೂ ತಲುಪಿದೆಯಾ ಎಂಬ ಅನುಮಾನ ಮೂಡುತ್ತಿದೆ.ಗ್ರಾಮೀಣ ಪ್ರದೇಶದಲ್ಲಿಯೂ ಅಂಗಡಿ ಮನೆಗಳ ಸೀಲ್ ಡೌನ್ ಆಗುತ್ತಿದ್ದು ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡುತ್ತಿದೆ.ಸೋಮವಾರ ಪುರಸಭಾ ವ್ಯಾಪ್ತಿಯ 6 ಮನೆಗಳನ್ನು ಸೀಲ್ ಡೌನ್ ಆಗಿತ್ತು.ಅಲ್ಲದೆ ಕಾರ್ಕಳದ ಹಳೆ ಬಸ್ಟ್ಯಾಂಡ್ ನ್ನು ಸೀಲ್ ಡೌನ್ ಮಾಡಲಾಗಿತ್ತು.
ಮುನಿಯಾಲಿನಲ್ಲಿ ಚಕ್ಕಲ್ ಪಾದೆ ಯಾ ಮಾವಿನಕಟ್ಟೆ ನಿವಾಸಿಗೆ ಕೊರೋನಾ ದೃಢಪಟ್ಟಿದ್ದು ಆ ವ್ಯಕ್ತಿ ಅಡಿಕೆ ವ್ಯಾಪಾರದಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದು, ವಾಣಿಜ್ಯ ಸಂಕೀರ್ಣವನ್ನೇ ಸೀಲ್ ಡೌನ್ ಮಾಡಲಾಗಿದೆ.
ಕಾರ್ಕಳದಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಪಾಲಿಸದೇ ವ್ಯಾಪಾರ ವ್ಯವಹಾಗಳಲ್ಲಿ ತೊಡಗಿರುವುದು ಅತೀ ಹೆಚ್ಚು ಕಂಡು ಬರುತ್ತಿದ್ದು ಡೈನ್ ಡೈನ್ ಕೊರೋನಾ ಪ್ರಕರಣ ಹೆಚ್ಚಳವಾಗಲು ಜನರ ನಿರ್ಲಕ್ಷ್ಯವೇ ಕಾರಣ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.



Post a comment