ಕಾರ್ಕಳ:ಆಗಷ್ಟೇ ಡಿಗ್ರಿ ಮುಗಿಸಿದ್ದ ಹುಡುಗ:ಅತೀ ಕಿರಿಯ ವಯಸ್ಸಿನ ಗ್ರಾ.ಪಂ. ಸದಸ್ಯ ಪುಟ್ಟ ಹಳ್ಳಿಯ 'ದಾರಿ'ಯನ್ನೇ ಬದಲಿಸಿದ-Times of karkala

ಕಾರ್ಕಳ:ಆಗಷ್ಟೇ ಡಿಗ್ರಿ ಮುಗಿಸಿದ್ದ ಹುಡುಗ:ಅತೀ ಕಿರಿಯ ವಯಸ್ಸಿನ ಗ್ರಾ.ಪಂ.  ಸದಸ್ಯ ಪುಟ್ಟ ಹಳ್ಳಿಯ 'ದಾರಿ'ಯನ್ನೇ ಬದಲಿಸಿದ


 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkalaಕಾರ್ಕಳ:ಆಗಷ್ಟೇ ಡಿಗ್ರಿ ಮುಗಿಸಿದ್ದ ಹುಡುಗ:ಅತೀ ಕಿರಿಯ ವಯಸ್ಸಿನ ಗ್ರಾ.ಪಂ.  ಸದಸ್ಯ ಪುಟ್ಟ ಹಳ್ಳಿಯ 'ದಾರಿ'ಯನ್ನೇ ಬದಲಿಸಿದ

ಸಾಧನೆಗಾಗಿ ಕೆಲವರು ರಾಜಕೀಯ ಸಾಮಾಜಿಕ ಕ್ಷೇತ್ರಗಳನ್ನು ಆಯ್ಕೆ ಮಾಡುವುದು ಸಹಜ . ಪ್ರತಿಯೊಬ್ಬ ಸಾಧಕನ ಹಿಂದೆ
ಯಶಸ್ವಿ ಕಥೆಗಳು ರೋಚಕತೆಗಳು ತುಂಬಿರುತ್ತವೆ. ಕಾರ್ಕಳ ತಾಲೂಕಿನ ಪ್ರಮುಖ ವಾರ್ಡ್ ಎಂದರೆ ಬಲು ವಿಭಿನ್ನ ವಾಗಿ ಕಾಣಸಿಗುವ ವಾರ್ಡ್ ಮರ್ಣೆ ಗ್ರಾಮಪಂಚಾಯತ್ ವ್ಯಾಪ್ತಿಯ ಎಣ್ಣೆಹೊಳೆ ಎಂಟನೇ ವಾರ್ಡ್…
ಅಲ್ಲಿಯ ಸಾಧಕನ ಸಾಧನೆ ಹೇಳೋದೆ ಚೆಂದ .

ಎಣ್ಣೆಹೊಳೆ ಅದೊಂದು ಪುಟ್ಟ ಹಳ್ಳಿ .. ಮರ್ಣೆ ಗ್ರಾಮ ವ್ಯಾಪ್ತಿಯ ಎಣ್ಣೆಹೊಳೆಯಲ್ಲೊಬ್ಬ ಚುನಾಯಿತ ಗೊಂಡ ಗ್ರಾಮ ಪಂಚಾಯತ್ ಸದಸ್ಯನ‌ ಕತೆ ಕೇಳಿ.
ಆಗ ಆತನ ವಯಸ್ಸು ಕೇವಲ 21 ವರ್ಷವಷ್ಟೆ .ಉಡುಪಿ ಜಿಲ್ಲೆಯ ಅತಿ ಕಿರಿಯ ವಯಸ್ಸಿನ ಗ್ರಾಮ ಪಂಚಾಯತ್ ಸದಸ್ಯ ಎಂದು ಗುರುತಿಸಲ್ಪಟ್ಟ ಹುಡುಗ ಗೌತಮ್ ನಾಯಕ್ ಎಣ್ಣೆಹೊಳೆ..

ಆಗಷ್ಟೇ ಭುವನೆಂದ್ರ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದ ಹುಡುಗ ತನಗೆ ಗ್ರಾಮದಲ್ಲಿ ಕಡೆಗಣಿಸಲ್ಪಟ್ಟಿದ್ದ ರಸ್ತೆಗಳನ್ನು ತಾನು ಅಭಿವೃದ್ಧಿ ಗೊಳಿಸಬೇಕೆಂಬ ತುಡಿತವಿತ್ತು. ತಾನು ರಾಜಕೀಯ ವಾಗಿ ಸಫಲವಾಗಿ ರಸ್ತೆ ಸೇತುವೆ ನಿರ್ಮಾಣ ಮಾಡಲೇಬೇಕೆಂದು ಪಣತೊಟ್ಟ ಹುಡುಗ.

ಕಳೆದ ಹಲವು ವರ್ಷಗಳ ಹಿಂದಿನಿಂದಲೂ ಪುಂಚಮಾರ್ ರಸ್ತೆಯಲ್ಲಿ ಸಾಗುವ ವಿದ್ಯಾರ್ಥಿಗಳು ತೋಡುದಾಟಿ ಸಾಗಬೇಕಿತ್ತು. ಮಳೆಯ ಪ್ರಮಾಣ ತೀವ್ರ ಸ್ವರೂಪದ ಲ್ಲಿದ್ದರೆ ಅಲ್ಲಿಯ ಸಂಪರ್ಕ ವೇ ಇಲ್ಲ ಎಂಬಂತಿತ್ತು. ಜನರು ಅಹವಾಲು ಕೊಟ್ಟರು ಯಾರು ಸ್ಪಂದಿಸುವ ಗೋಜಿಗೆ ಹೋಗಲಿಲ್ಲ .ಅದಕ್ಕಾಗಿ ಉದ್ಯಮಿಯೊಬ್ಬರು ಜನರ ಸಹಾಯಕ್ಕೆ ನಿಂತರು. ಪಂಚಾಯತ್ ಚುನಾವಣೆಯಲ್ಲಿ ಆತನನ್ನು ಗೆಲ್ಲಿಸಬೇಕೆಂದಾಗ ಕೂಗುಜನರಿಂದ ಕೇಳಿ ಬಂದಾಗ ಗೌತಮ್ ಗೆದ್ದು ಬಂದರೆ ತನ್ನ ಸ್ವಂತ ಖರ್ಚಿನಿಂದ ನಿರ್ಮಿಸಿ ಕೊಡುವುದಾಗಿ ಬೆಂಗಳೂರು ಉದ್ಯಮಿ ಶ್ರೀ ರಾಕೇಶ್ ಶೆಟ್ಟಿ ಚುನಾವಣೆ ಮುನ್ನ ಭರವಸೆ ನೀಡಿದರು..ಗೌತಮ್ ಚುನಾವಣೆ ಗೆದ್ದ


ದಿನವೇ ಕಾಮಗಾರಿ ಪ್ರಾರಂಭ ಆಗಿ ಕೆಲವೇ ದಿನದಲ್ಲಿ ಉದ್ಘಾಟನೆ ಗೊಂಡು ಲೋಕಾರ್ಪಣೆ ಗೊಳಿಸಲ್ಪಟ್ಟಿತು . ಅದರ ನೇತೃತ್ವ ವಹಿಸಿದ ಗೌತಮ್ ಗೆ ಮೊದಲ ಹೆಜ್ಜೆ ಗೆ ಜನರಿಂದ ಅಭೂತಪೂರ್ವ ಯಶಸ್ಸು ಗಳಿಸಿತು.
ರಸ್ತೆಗಳು ಊರಿನ ನರವ್ಯೂಹದ ವಿದ್ದಂತೆ ಎಂದು ತಿಳಿದ ಗೌತಮ್ ತನ್ನ ಗೆಲ್ಲಿಸಿದ ವಾರ್ಡನ್ನು ಬದಲಾವಣೆಯ ಚಲನೆಯನ್ನು ರೂಪಿಸಬೇಕೆಂದು ಹಠವಿಟ್ಟು ಕುಳಿತಾಗ ಗಾಂಧಿನಗರ-ರಾಧಾ ನಾಯಕ್ ಸಂಪರ್ಕ ರಸ್ತೆಗೆ ಅನುದಾನ
ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ರವರ ಪ್ರಸ್ತಾವನೆಯಂತೆ KPWD ಯೋಜನೆಯಡಿ -20ಲಕ್ಷ ರೂ ಕಾಂಕ್ರಿಟೀಕರಣ ಮಾಡಲಾಯಿತು.
ನಡುವಿನಲ್ಲಿ ಕಿತ್ತುಹೋಗಿದ್ದ ಟಾರು ರಸ್ತೆಯನ್ನುಟಾಸ್ಕ್ ಫೋರ್ಸ್ ಯೋಜನೆಯಡಿ 5ಲಕ್ಷ ರೂ ಹಣದಲ್ಲಿ ಡಾಮರೀಕರಣ ಮಾಡಲಾಯಿತು. ಆದರೆ ಎಲ್ಲಾ ವಿವಿಧ ಅನುದಾನಗಳ ಮಾಹಿತಿ ಪಡೆದ ಗೌತಂ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಹರೀಶ್ ನಾಯಕ್ ರವರಿಂದ 3.20ಲಕ್ಷ ರೂ ಹಾಗೂ ಗ್ರಾಮ ಪಂಚಾಯತ್ ವತಿಯಿಂದ 2.60ಸಾವಿರ ರೂ ಮೊತ್ತದ ರಸ್ತೆಯನ್ನು ಉತ್ತಮ ದರ್ಜೆಯ ಕಾಂಕ್ರೀಟ್ ರಸ್ತೆಯನ್ನಾಗಿ ರಸ್ತೆ ಪೂರ್ಣ ಮಾಡಲಾಯಿತು.

ಎಣ್ಣೆಹೊಳೆ ಪೊಟ್ಟುಕೆರೆ-ಪಡೆಲ್ಮರ್ ರಸ್ತೆ ತುಂಬಾ ಹದಗೆಟ್ಟಿತ್ತು ಈ ರಸ್ತೆಗೆ ಸರ್ಕಾರದ ಲಮ್ ಸಮ್ ವಿಶೇಷ ಯೋಜನೆಯಡಿಯಲ್ಲಿ ಶಾಸಕರಿಂದ ಈ ರಸ್ತೆ ಕಾಂಕ್ರಿಟೀಕರಣಕ್ಕೆ -25ಲಕ್ಷ ರೂ ಅನುದಾನ ಬಿಡುಗಡೆಗೊಳಿಸಿದರು.. ತಾಲೂಕು ಪಂಚಾಯತ್ ಸದಸ್ಯರ ಅನುದಾನ ದಲ್ಲಿ 1ಲಕ್ಷ ರೂ ಡಾಮರೀಕರಣ ಮೂಲಕ ರಸ್ತೆ ಕಾಮಗಾರಿ ಪೂರ್ಣ ಗೊಳಿಸದರು.. ಈ ರಸ್ತೆಗಳನ್ನು ಕಾಂಕ್ರೀಟ್ ಹಾಗೂ ಡಾಮರಿಕರಣ ಮಾಡುವ ಮೂಲಕ ಜನರ ವಿಶ್ವಾಸಾರ್ಹ ಸದಸ್ಯ ನಾಗಿ ಗುರುತಿಸಲಾಯಿತು.
ಜನರ ಮೂಲಭೂತ ಸೌಕರ್ಯವನ್ನು ಮನೆಮನೆಗೆ ತಲುಪಿಸಲು ನೀರಿನ ಪೈಪ್ ಲೈನ್ ವಿಸ್ತರಣೆ ಮಾಡಿ ಶೇ.80 ರಷ್ಟು ಜನರಿಗೆ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ವನ್ನು ನೀಡಲಾಯಿತು.
ಕೆಂಜಿಲ ಪರಿಸರದ ಜನರ ಮನವಿಗಾಗಿ ಕೆಂಜಿಲ ಕೃಷ್ಣ ಶೆಟ್ಟಿಗಾರ್ ರವರ ಮನೆಯ ಬಳಿ ಸೇತುಬಂಧು ಯೋಜನೆಯಡಿ ಕಿರುಸೇತುವೆಗೆ 4ಲಕ್ಷ ವೆಚ್ಚದಲ್ಲಿ ಮಾಡಲಾಯಿತು

ಉದ್ಯಮಿ ಶ್ರೀ ರಾಕೇಶ್ ಶೆಟ್ಟಿ ಯವರು ನಿರ್ಮಿಸಿದ ಹಟ್ಟೆ -ಪುಂಚಮಾರು ಕಿರು ಸೇತುವೆ ಮೇಲ್ಬಾಗದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಕಾಂಕ್ರಿಟೀಕರಣ ಮಾಡಲಾಯಿತು… ಹಟ್ಟೆ -ಪುಂಚಮಾರು ಜನರಿಗೆ ವಾಹನ ಸಂಪರ್ಕಕ್ಕೆ ತೊಂದರೆಯಾಗಬಾರದೆಂಬ ದೃಷ್ಟಿಯಲ್ಲಿ ಆ ರಸ್ತೆಯು ಅಭಿವೃದ್ಧಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಹಾಗೂ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಮನವಿ ಸಲ್ಲಿಸಿ ರಸ್ತೆ ಡಾಮರೀಕರಣಕ್ಕೆ -2ಲಕ್ಷ ಅನುದಾನ ಒದಗಿಸಿದರು..ಗ್ರಾಮ ಪಂಚಾಯತ್ ವತಿಯಿಂದ ರಸ್ತೆ ಡಾಮರೀಕರಣಕ್ಕೆ -2ಲಕ್ಷ , ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮೊದಲ ಕಾಂಕ್ರೀಟ್ ರಸ್ತೆ ನಿರ್ಮಾಣ ,ಹಟ್ಟೆ -ಪುಂಚಮಾರು ರಸ್ತೆಯ ಬದಿಯಲ್ಲಿ ಚರಂಡಿ ವ್ಯವಸ್ಥೆ ಹಾಗೂ ಅರ್ಥ್ ವರ್ಕ್ ಕೂಡ ಮಾಡಲಾಯಿತು.. ಗ್ರಾಮ ಪಂಚಾಯತ್ ಅನುದಾನದಲ್ಲಿ ಮೊದಲ ಬಾರಿಗೆ ನೂತನ ದಾರಿದೀಪಕ್ಕೆ ಸಂಪರ್ಕ ಹಾಗೂ ವಿದ್ಯುತ್ ಕಂಬಕ್ಕೆ 1ಲಕ್ಷ ಅನುದಾನ ಬಿಡುಗಡೆಗೊಳಿಸಿ ದಾರಿದೀಪಕ್ಕೆ ಚಾಲನೆ ನೀಡಲಾಯಿತು…
ಎಣ್ಣೆಹೊಳೆ ದೆಯಲ್ ಬೆಟ್ಟು -ಗುಳಿಬೆಟ್ಟು ಪರಿಸರದ ಜನರಿಗೆ ಸಂಚರಿಸಲು ಕಾಲುದಾರಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಉಂಟಾಗಿತ್ತು. ಯಾವುದೇ ಸರಿಯಾದ ಸಂಪರ್ಕ ರಸ್ತೆಯಿರದಿದ್ದಗ ಕಾಲು ದಾರಿ ಇದ್ದದನ್ನು ವಾಹನ ಸಂಪರ್ಕಕ್ಕೆ ಉಪಯೋಗಿಸಲು ನೂತನ ರಸ್ತೆ ನಿರ್ಮಾಣ ಮಾಡಲಾಯಿತು ಕಾಲು ಸೇತುವೆಯನ್ನು ಕಿರುಸೇತುವೆ ನಿರ್ಮಿಸಲು ಬೆಂಗಳೂರು ಉದ್ಯಮಿ ರಾಕೇಶ್ ಶೆಟ್ಟಿಯವರಿಂದ ಸಿಮೆಂಟ್ ಪೈಪ್ ಜೊತೆಗೆ
ಕಿರು ಸೇತುವೆ ನಿರ್ಮಾಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ.ಉದಯ್ ಎಸ್ ಕೋಟ್ಯಾನ್ ರವರಿಂದ 1.50 ಲಕ್ಷ ಅನುದಾನ ಒದಗಿಸಲಾಯಿತು
ನೂತನ ರಸ್ತೆಗೆ ಮೊದಲ ಬಾರಿ ಕಾಂಕ್ರಿಟೀಕರಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಿಂದ 3ಲಕ್ಷ ಅನುದಾನ ,ಗ್ರಾಮ ಪಂಚಾಯತ್ ವತಿಯಿಂದ 4ಲಕ್ಷ ಅನುದಾನ ಈ ಭಾಗದ ಜನರಿಗೆ ವಾಹನ ವ್ಯವಸ್ಥೆಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿ ಜನರಿಂದ ಭೇಷ್ ಅನಿಸಿಕೊಂಡವರು..
ಲಿಥಿಯಂ ಸೋಲಾರ್ ದಾರಿ ದೀಪ, ಕುಮೇರುಮನೆ ಸುಂದರ್ ಶೆಟ್ಟಿಯವರ ಮನೆ ಬಳಿ ಕಿರು ಕಿಂಡಿ ಅಣೆಕಟ್ಟಿಗೆ ಅನುದಾನ ವಿನಿಯೋಗಿಸಲಾಯಿತು

ಇದು ಮಾತ್ರವಲ್ಲ ರಾಜ್ಯಹೆದ್ದಾರಿಯ ಬಗ್ಗೆ ಗಮನ ಹರಿಸುವ ಸಲುವಾಗಿ ಎಣ್ಣೆಹೊಳೆ ಪಡ್ಡೇಲ್ಮರ್ ರಸ್ತೆ ತಿರುವು ಅಗಲೀಕರಣ ಶಾಸಕರಿಂದ 1ಕೋಟಿ ಅನುದಾನ ತಂದು ತಿರುವನ್ನೆ ಬದಲಾವಣೆ ಮಾಡಿ ಅಪಘಾತ ರಹಿತ ತಿರುವನ್ನಾಗಿ ಮಾರ್ಪಡಿಸಲಾಯಿತು.
ಗ್ರಾಮ ಪಂಚಾಯತ್ ಅನುದಾನದದಿಂದ ಗಣೇಶ ಮಂದಿರ ಬಳಿ ಬಸ್ ತಂಗುದಾಣ 1.50ಲಕ್ಷ ವೆಚ್ಚದಲ್ಲಿ ಜನ ಸಾಮಾನ್ಯರಿಗಾಗಿ ಪ್ರಯಾಣಿಕರಿಗಾಗಿ ಬಸ್ ತಂಗುದಾಣವನ್ನು ಕಟ್ಟಿಸಲಾಯಿತು…

ಮುಖ್ಯರಸ್ತೆಯಲ್ಲಿ ಸರಿಸುಮಾರು ಎಲ್ಲಾ ವಿದ್ಯುತ್ ಕಂಬಗಳಿಗೆ ದಾರಿದೀಪ.. ಗಣೇಶ ಮಂದಿರದ ಮುಂಭಾಗ ಹಾಗೂ ಮಸೀದಿಯ ಬಳಿ ಲಿಥಿಯಂ ಸೋಲಾರ್ ದಾರಿ ದೀಪ ಅಳವಡಿಸಿ ಮಾದರಿ ವಾರ್ಡ್ ನಿರ್ಮಾಣಕ್ಕೆ ಬುನಾದಿ ಹಾಕಲಾಯಿತು

ಶಾಲೆ ಎಂದರೆ ಅದೊಂದು ಪುಣ್ಯ ಕ್ಷೇತ್ರ ಜ್ಞಾನ ದೇಗುಲ ಅದರ ನಿರ್ವಹಣೆ ಸುರಕ್ಷತೆಗಾಗಿ ಸ.ಹಿ.ಪ್ರಾ.ಶಾಲೆ ಎಣ್ಣೆಹೊಳೆಗೆ ತಾಲೂಕು ಪಂಚಾಯತ್ ಉಪಾಧ್ಯಕ್ಷರಿಂದ ನೂತನ ಶೌಚಾಲಯ ,ಜಿಲ್ಲಾ ಪಂಚಾಯತ್ ಸದಸ್ಯರಿಂದ ಶಾಲೆ ಬಳಿ ಕಾಂಪೌಂಡ್ ರಚನೆ.. ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಆಟೊಟ ಕ್ರೀಡೆಗಳಿಗಾಗಿ 20 ಸಾವಿರ ಮೊತ್ತದ ಕ್ರೀಡಾ ಕಿಟ್ ನೀಡಲಾಯಿತು..ಹಳೆಯ ಶೌಚಾಲಯ ದುರಸ್ತಿ ಹಾಗೂ ಶಾಲಾ ದುರಸ್ತಿಗೆ ಪಂಚಾಯತ್ ನಿಂದ ಅನುದಾನ ಬಿಡುಗಡೆಗೊಳಿಸಿ ವಿದ್ಯಾರ್ಥಿ ಸ್ನೇಹಿಯನ್ನಾಗಿಸಲಾಯಿತು.

ಊರು ನಮ್ಮ ನಿಮ್ಮ ಹೆಮ್ಮೆಯ ಶಾಲೆ ಎಂದಾಗ ನೆನಪಾಗುವುದೆ ಹಳ್ಳಿಯ.ರಾಧಾ ನಾಯಕ್ ಪ್ರೌಢಶಾಲೆ ಅಲ್ಲಿಯ ಕಲಿಕ ಸಾಮಾರ್ಥ್ಯ ಹಾಗೂ ವಿದ್ಯಾರ್ಥಿ ಗಳ ಸುರಕ್ಷತೆಗಾಗಿ ಜಿಲ್ಲಾ ಪಂಚಾಯತ್ ಸದಸ್ಯರಿಂದ ಸೈಕಲ್ ಸ್ಟಾಂಡ್ -1.10ಲಕ್ಷ , ಕಟ್ಟಡ ದುರಸ್ತಿ -3.15ಲಕ್ಷ , ನೂತನ ಶೌಚಾಲಯ ರಚನೆ , ಹಳೆ ಶೌಚಾಲಯ ದುರಸ್ತಿಗೆ ಅನುದಾನ…

ತಾಲೂಕು ಪಂಚಾಯತ್ ಅನುದಾನದಿಂದ ಅಂಗನವಾಡಿ ಕಟ್ಟಡ ಹಾಗೂ ಶೌಚಾಲಯ ದುರಸ್ತಿ -50ಸಾವಿರ ಮೀಸಲಿಟ್ಟು ಶಿಕ್ಷಣ ಸ್ನೇಹಿ ವಾತಾವರಣ ನಿರ್ಮಿಸಿದ ಖುಷಿ ಸದಸ್ಯ ನದಾಗಿತ್ತು.

ಜನರ ಆಧಾರ ಕಾರ್ಡ್ ಸಂಕಷ್ಟಕ್ಕೆ ದನಿಯಾಗುವ ಉದ್ದೇಶಕ್ಕಾಗಿ ಬೃಹತ್ ಆಧಾರ್ ಕಾರ್ಡ್ ಕ್ಯಾಂಪ್ ಎಣ್ಣೆಹೊಳೆಯಲ್ಲಿ ಆಯೋಜಿಸಿ ಎರಡು ದಿನದಲ್ಲಿ 1341 ಜನರಿಗೆ ಆಧಾರ್ ತಿದ್ದುಪಡಿ ಮಾಡಿ ಇದು ರಾಜ್ಯದಲ್ಲಿ ಪ್ರಥಮ ಎಂಬ ಹೆಗ್ಗಳಿಕೆ ಪಡೆದ ಗ್ರಾಮವೆಂದು ಪಾತ್ರ ವಾಗಿತ್ತು .

5 ವರ್ಷದಲ್ಲಿ ಬಸವ ವಸತಿ ಹಾಗೂ ಆವಾಸ್ ಯೋಜನೆಯಡಿಯಲ್ಲಿ 26 ಬಡ ಕುಟುಂಬ ದವರಿಗೆ ಮನೆ ನಿರ್ಮಾಣ ಮಾಡುವ ಮೂಲಕ ಬಡವರ ನಡುವಿನ ಸೇತುಬಂಧವಾಗಿ ಮಾರ್ಪಟ್ಟಿತು.

ಕಾರ್ಕಳ ತಾಲೂಕಿನ ಬಹುಬೇಡಿಕೆಯ ಹಾಗು ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ರವರ ಕನಸಿನ ಯೋಜನೆಯಾಗಿದ್ದ ಎಣ್ಣೆಹೊಳೆ -ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಯನ್ನು ‌ಶಾಶ್ವತವಾಗಿ‌ ನಿರ್ಮೂಲನೆ ಮಾಡಬೇಕೆಂದು ಏತ ನೀರಾವರಿ ಯೋಜನೆಗೆ 108 ಕೋಟಿ ರೂ ಬಿಡುಗಡೆ ಮಾಡಿ ಕಾಮಗಾರಿ ಗೆ ವೇಗವನ್ನು ಹೆಚ್ಚಿಸುವಂತೆ ಮಾಡಲಾಯಿತು .

ಉದ್ಯೋಗ ಖಾತರಿಯೊಜನೆಯಲ್ಲಿ ಪಂಚಾಯತ್ ವ್ಯವಸ್ಥೆ ಯಿಂದ ದುಸ್ತರವಾಗಿದ್ದ ರಸ್ತೆಗೆ ಕಾಂಕ್ರೀಟಿಕರಣ ಮಾಡುವ ಮೂಲಕ ಹೃದಯ ಮನಸ್ಸು ಗೆದ್ದಿದ್ದ ಗೌತಮ್ .

ಗ್ರಾಮಪಂಚಾಯತ್ ಸದಸ್ಯ ನಾಗಿ ಎಲ್ಲಾ ಜನಪ್ರತಿನಿಧಿಗಳಿಂದ ಹಾಗೂ ಇಲಾಖೆಯಿಂದ ಅನುದಾನವನ್ನು ತಂದು ಸದುಪಯೋಗ ಗೊಳಿಸಿ ಮಾದರಿ ವಾರ್ಡ್ ಮಾಡಲು ಶ್ರಮಿಸುವ ಖುಷಿ ಇದೆ ಎನ್ನುತ್ತಾರೆ

ತಾನೊಬ್ಬ ಸದಸ್ಯ ನಾಗಿದ್ದರು ಕೊಡುಗೈದಾನಿ ತನ್ನ ಮಟ್ಟದಲ್ಲಿ ಸಾಧ್ಯವಾದಷ್ಟು ಜನರ ಸಹೃದಯಿ ಸಹಾಯ ಮಾಡಿ ಜನತ ಹೃದಯ ತುಂಬಿದ್ದ ಹುಡುಗನಾತ . ಅಜೆಕಾರು ದಾಸಗದ್ದೆಯ ಭರತ್ ಭಟ್ ರಕ್ತದ ಕ್ಯಾನ್ಸರ್ ನಿಂದ ಬಳಲುತಿದ್ದಾಗ ಜನರ ಹಾಗೂ ಪಂಚಾಯತ್ ಸದಸ್ಯರ ಸಹಾಯಪಡೆದು 60000 ಕ್ಕು ಹೆಚ್ಚು ಹಣವನ್ನು ನೀಡಿ ಮಾನವೀಯತೆ ಮೆರೆದರು .

ಅದರಂತೆಯೇ COVID 19 ರ ಲಾಕ್ ಡೌನ್ ಸಂದರ್ಭದಲ್ಲಿ ತನ್ನ ವಾರ್ಡ್ ಹಾಗೂ ಇತರ ಕುಟುಂಬ ದವರಿಗೆ ದಾನಿಗಳಲ್ಲಿ ಮನವಿ ಮಾಡಿ 158 ಫುಡ್ ಕಿಟ್ ಕೊಟ್ಟು ಜನರ ಮನಸ್ಸು ಗೆದ್ದಿದ್ದರು.

ಕನಸುಗಳು ಹಾಗೂ ರೂಪುರೇಷೆಗಳು ಮುಂದಿನ ಯೋಜನೆಗಳು…..
ಕೋವಿಡ್ 19 ಸಂದರ್ಭದಲ್ಲಿ ಯೋಜನೆಗಳನ್ನು ರೂಪಿಸಿ ಕೆಲಸ ಅನುಷ್ಠಾನ ಗೊಳ್ಳುವ ಹೊತ್ತಿನಲ್ಲಿ
ಲಾಕ್ಡೌನ್ ಮಾಡಿದ ಕ್ಷಣದಿಂದ ಯಾವುದೆ ಕಾಮಗಾರಿಗಳು ನಡೆಯದ ಕಾರಣ ಕುಂಠಿತ ಗೊಳ್ಳಬೇಕಾಯಿತು.ನೂರಾರು ಸವಾಲುಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಯಕ್ಕನುಗುಣವಾಗಿ ಬದಲಾಗಲೇಬೇಕು ಅನಿವಾರ್ಯ , ಅದಕ್ಕಾಗಿ ಸ್ವಲ್ಪ ತಡವಾಗಿ ನಂತರದ ಆರ್ಥಿಕ ವರ್ಷದಲ್ಲಿ ಹೊಸದಾದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಅವುಗಳು ಇಂತಿವೆ

ರಾಧಾ ನಾಯಕ್ ಪ್ರೌಢಶಾಲೆ ಮುಂಭಾಗದ ರಸ್ತೆಯ ಬದಿಯಲ್ಲಿ ಮೋರಿ ರಚನೆ ,
ಅಪೆಂಡಿಸ್ ಎ’ ಯೋಜನೆಯಡಿಯಲ್ಲಿ ಹಟ್ಟೆ ಪುಂಚಮಾರು ಸಂಪರ್ಕ ರಸ್ತೆಗೆ ಶಾಸಕರಿಂದ 25 ಲಕ್ಷ ,
ವಿಧಾನ ಪರಿಷತ್ ಸದಸ್ಯರಾದ ಶ್ರೀ ಆಯನೂರ್ ಮಂಜುನಾಥ್ ರವರಿಂದ 3 ಲಕ್ಷ ಅನುದಾನ ಬಿಡುಗಡೆ ,
ದೋಣಿಕಡವು ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಸಂಸದೆಯಾದ ಕು.ಶೋಭಾ ಕರಂದ್ಲಾಜೆಯವರಿಂದ 5 ಲಕ್ಷ ರೂ ಬಿಡುಗಡೆ

ಕೃಷಿಗೆ ಉಪಯೋಗದ ದೃಷ್ಟಿಯಿಂದ ಶಾಸಕರ ವಿಶೇಷ ಮುತುವರ್ಜಿಯಿಂದ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ದೋಣಿಕಡವು ಬಳಿ 60ಲಕ್ಷ,ಪುಂಚಮಾರು ಬಳಿ 75ಲಕ್ಷ ಅನುದಾನದಿಂದ ಕಾಮಗಾರಿ ಟೆಂಡರ್ ಬಳಿಕ ಪ್ರಾರಂಭವಾಗಲಿದೆ…

ಬಂಡಸಾಲೆ -ಹಂಚಿಕಟ್ಟೆ ಸಂಪರ್ಕ ರಸ್ತೆಗೆ ಕೊಳವೆ ಬಾವಿ ರಚನೆ ಪಂಪ್ ಸೆಟ್,ಪೈಪ್ ಲೈನ್ ವಿಸ್ತರಣೆ, ಓವರ್ ಹೆಡ್ ಟ್ಯಾಂಕ್ – 4.25ಲಕ್ಷ ತಾಲೂಕು ಪಂಚಾಯತ್ ಉಪಾಧ್ಯಕ್ಷರಿಂದರಿಂದ ಪೈಪ್ ಲೈನ್ ವಿಸ್ತರಣೆ
2ಲಕ್ಷ ಅನುದಾನಬಿಡುಗಡೆಯಾಗಲಿದೆ ಎಂದು ಹರ್ಷ ವ್ಯಕ್ತ ಪಡಿಸುತಿದ್ದಾರೆ ಗೌತಮ್ ನಾಯಕ್

ತನ್ನ ಕನಸಿನ ಯೋಜನೆಯಾದ ಎಣ್ಣೆಹೊಳೆ ನದಿ ಬಳಿ ಪಾರ್ಕ್ ರಚನೆ, ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್, ಹ್ಯಾಂಗಿಂಗ್ ಬ್ರಿಡ್ಜ್ ಮಾಡಿ ಪ್ರವಾಸಿ ತಾಣವಾಗಬೇಕುನ್ನುವ ಉದ್ದೇಶದಿಂದ ಶಾಸಕರೊಡನೆ ಮನವಿ ಸಲ್ಲಿಸಿ ಏತ ನೀರಾವರಿ ಯೋಜನೆ ಬಳಿಕ ಅನುದಾನ ಬಿಡುಗಡೆಗೊಳಿಸುದಾಗಿ ಭರವಸೆ ನೀಡಿದ್ದಾರೆ

ವಾರ್ಡ್ ಗಳ ಬೇಡಿಕೆಗೆ ಆಧರಿತ ಮಾದರಿಗೆ ಪರಿವರ್ತನೆಯಾಗಬೇಕಾಗಿದೆ. ಹಳ್ಳಿಯಲ್ಲೇ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಬೇಕಾಗಿದೆ. ಅಗಲೇ ಆದರ್ಶ ಗ್ರಾಮವಾಗಲು ಸೂಕ್ತ. ವಾರ್ಡ್ಗಳು ಅಭಿವೃದ್ದಿಯಾದರೆ ಗ್ರಾಮ ಅಭಿವೃದ್ಧಿ ಸಾಧಿಸಿದಂತೆ. ಗ್ರಾಮಗಳು ಅಭಿವೃದ್ಧಿ ಸಾಧಿಸಿದರೆ ದೇಶ ಅಭಿವೃದ್ಧಿ ಸಾಧಿಸಿದಂತೆ . ಅದಕ್ಕೆ ಸೂಕ್ತ ವ್ಯಕ್ತಿಗಳು ಸದಸ್ಯರು ಅಭಿವೃದ್ಧಿ ಮನಸ್ಸುಳ್ಳ ನಾಯಕರು ಅಗತ್ಯ ವೆಂಬುದು ತಾತ್ಪರ್ಯ.https://wa.me/919945283600
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget