►►"ಯಾವುದೇ ತನಿಖೆಗೂ ನಾನು ಸಿದ್ದನಿದ್ದೇನೆ: ಸುಳ್ಳು ಆರೋಪಗಳಿಗೆ ಅಂಜುವುದಿಲ್ಲ"-ಶಾಸಕ ಸುನೀಲ್ ಕುಮಾರ್ ►►"ಸುಳ್ಳು ಆರೋಪ ಇದೆ ಮೊದಲಲ್ಲ, ನನ್ನ ತಂದೆ ತಾಯಿಯ ಜಾತಿಯ ಬಗ್ಗೆಯೂ ಆರೋಪವನ್ನು ಮಾಡಿದ್ದರು" ►►ಸುಳ್ಳು ಆರೋಪಕ್ಕೆ ಶಾಸಕರ ಸ್ಪಷ್ಟನೆ ಏನು ಗೊತ್ತಾ? ಇಲ್ಲಿದೆ ವಿಡಿಯೋ


►►"ಯಾವುದೇ ತನಿಖೆಗೂ ನಾನು ಸಿದ್ದನಿದ್ದೇನೆ: ಸುಳ್ಳು ಆರೋಪಗಳಿಗೆ  ಅಂಜುವುದಿಲ್ಲ"-ಶಾಸಕ ಸುನೀಲ್ ಕುಮಾರ್


►►"ಸುಳ್ಳು ಆರೋಪ ಇದೆ ಮೊದಲಲ್ಲ, ನನ್ನ ತಂದೆ ತಾಯಿಯ ಜಾತಿಯ ಬಗ್ಗೆಯೂ ಆರೋಪವನ್ನು ಮಾಡಿದ್ದರು"

►►ಸುಳ್ಳು ಆರೋಪಕ್ಕೆ ಶಾಸಕರ ಸ್ಪಷ್ಟನೆ  ಏನು ಗೊತ್ತಾ? ಇಲ್ಲಿದೆ ವಿಡಿಯೋ 


 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala


ಕಾರ್ಕಳ: ಕಾರ್ಕಳ ಶಾಸಕ ಶ್ರೀ ವಿ ಸುನೀಲ್ ಕುಮಾರ್ ರವರ ಮೇಲೆ ವಿರೋಧಿಗಳು ನಡೆಸುತ್ತಿದ್ದ ಆರೋಪಗಳಿಗೆ  ಸ್ವತಃ ಶಾಸಕರೇ ಇದೀಗ ಸ್ಪಷ್ಟನೆಯನ್ನು ನೀಡಿದ್ದಾರೆ.  ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುನೀಲ್ ಕುಮಾರ್ ತನ್ನ ವಿರುದ್ಧ ಹರಿದಾಡುವ ಸುಳ್ಳು ಆರೋಪಕ್ಕೆ ಪ್ರತಿಕ್ರಿಯೆ  ನೀಡಿದ್ದಾರೆ. 

2 ದಿನಗಳ ಹಿಂದೆ ವೆಬ್ ಚಾನಲ್ ಒಂದು ತನ್ನ ಮೇಲೆ ನಿರಾಧಾರವಾದ ಆರೋಪವನ್ನು ಮಾಡಿದ್ದು ಯಾವುದೇ ದಾಖಲೆಯ ಸ್ಪಷ್ಟೀಕರಣ ನೀಡದೆ ಸುಳ್ಳು ಕಂತೆಯನ್ನು ಪೋಣಿಸಿದೆ. 

ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ  ಬಳಿ ನಿಮಣವಾಗುತ್ತಿರುವ ಕಟ್ಟಡ ನಿರ್ಮಾಣ ಮತ್ತು ವಿನ್ಯಾಸವನ್ನು  ವಾಸ್ತು ಶಿಲ್ಪಿ ಪ್ರಮಲ್ ಕುಮಾರ್ ರವರಿಗೆ ನೀಡಿದ್ದು, ಕಟ್ಟಡ ಪ್ರಾರಂಭದಿಂದ ಪೂರ್ಣವಾಗುವವರೆಗೆ ಅವರಿಗೆ ಉಸ್ತುವಾರಿಯನ್ನು ನೀಡಲಾಗಿದೆ.ಈ ಕಟ್ಟಡದ ನಿರ್ಮಾಣವನ್ನು ಸೃಷ್ಟಿವೆಂಚರ್ಸ್ ಇಂಡಸ್ಟ್ರಿಯಲ್ ಏರಿಯಾ ನಂದಿಕೂರು, ಉಡುಪಿ ನವರಿಗೆ ನೀಡಿ ನಿರ್ಮಾಣದ ಒಪ್ಪಂದವನ್ನು 2009ರಲ್ಲಿ ಮಾಡಿಕೊಳ್ಳಗಳಾಗಿದೆ.ಈ ಕಟ್ಟಡದ ತಂತ್ರಜ್ಞಾನ ಉಭಯ ಜಿಲ್ಲೆಯಲ್ಲಿಯೇ ಪ್ರಥಮವಾಗಿದ್ದು ಜರ್ಮನ್  ತಂತ್ರಜ್ಞಾವನ್ನು ಒಳಗೊಂಡಿದೆ. ಈ ತಂತ್ರಜ್ಞಾನದ ವಿಶೇಷತೆಯೇನೆಂದರೆ ಅತೀ ಕಡಿಮೆ ದರದಲ್ಲಿ ಕಡಿಮೆ ಸಮಯದಲ್ಲಿ ನಿರ್ಮಾಣವಾಗುವಂತದ್ದು. ಈ ರೀತಿಯ ಕಟ್ಟಡಕ್ಕೆ ಕೆಂಪು ಇಟ್ಟಿಗೆ ಅಥವಾ ಇನ್ನಿತರ ಯಾವುದೇ ಇಟ್ಟಿಗೆಯನ್ನು ಬಳಸದೆ ECO-WALL PANEL ಮಾದರಿಯ  ಕಟ್ಟಡವಾಗಿದೆ. 

Trade & Non Trade ಸಿಮೆಂಟ್ ಬಗ್ಗೆ ಸಿಮೆಂಟ್ ಕಂಪೆನಿಯ ನಿಯಮಾವಳಿಯಲ್ಲಿಯೇ ಸ್ಪಷ್ಟತೆ ಇದ್ದು, ಟ್ರೇಡ್ ಸಿಮೆಂಟ್ ಎಂದರೆ ಡೀಲರ್ಸ್-ಟ್ರೇಡರ್ಸ್ ಮುಖಾಂತರ ಗ್ರಾಹಕರಿಗೆ ಮಾರಾಟವಾಗುವ ಸಿಮೆಂಟ್.NonTrade ಸಿಮೆಂಟ್ ಎಂದರೆ ಕಂಪೆನಿಯು ನೇರವಾಗಿ ಗ್ರಾಹಕರಿಗೆ ಮಾರಾಟವಾಗುವ ಸಿಮೆಂಟ್. ಗ್ರಾಹಕ ತನ್ನ ಬಳಕೆಗೆ ಮಾತ್ರ ಬಳಸಬೇಕೇ ಹೊರತು ಮರು ಮಾರಾಟಕ್ಕೆ ಅವಕಾಶವಿಲ್ಲ.  ಈ ಕಾರಣದಿಂದಾಗಿ ಕಂಪೆನಿಯೇ Not For Resale ಎಂದು ಮುದ್ರಿಸಿ ಗ್ರಾಹಕನಿಗೆ ನೀಡುತ್ತದೆ.

ಸಿಮೆಂಟ್ ಉತ್ಪಾದನೆಯಲ್ಲಿ ಸರಕಾರದ ಕೆಲಸಕ್ಕೆ ಬೇರೆ ಸಿಮೆಂಟ್  ಗ್ರಾಹಕರ ಬಳಕೆಗೆ ಬೇರೆ ಸಿಮೆಂಟ್ ಇದೆ ಎಂಬುದು ನನ್ನ ಅನುಭವಕ್ಕೆ ಬಂದಿಲ್ಲ.

ಒಪ್ಪಂದದಂತೆ  ಕಟ್ಟಡದ ಪೂರ್ತಿ ನಿರ್ಮಾಣ ಸೃಷ್ಟಿವೆಂಚರ್ಸ್ ನವರೇ ಮಾಡುತ್ತಿದ್ದು, ಖರೀದಿ,ಮಾರಾಟ, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲ ಜವಾಬ್ದಾರಿ ಅವರದ್ದೇ ಆಗಿದ್ದು, ಅದರಲ್ಲಿ ನನ್ನ ಜವಾಬ್ದಾರಿ ಇರುವುದಿಲ್ಲ. ವಿರೋಧಿಗಳು ಮತ್ತು ಕಾಂಗ್ರೆಸ್ ಈ ರೀತಿ ನಿರಾಧಾರ ಮಾಡುತ್ತಿರುವುದು ಇದೇ ಮೊದಲಲ್ಲ,ಕೆಲ ವರ್ಷಗಳ ಹಿಂದೆ ನನ್ನಲ್ಲಿ 50 ಲಾರಿಗಳಿವೆ-ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ-ಬೆಂಗಳೂರು ಸುತ್ತಮುತ್ತ ಡಿನೋಟಿಫಿಕೇಷನ್ ಮಾಡುತ್ತಿದ್ದಾರೆ-ನನ್ನಲ್ಲಿ ಬಹುಮಹಡಿ ಕಟ್ಟಡಗಳು ಹಾಗೂ ಮುಂಬೈ ನಲ್ಲಿ ಹೋಟೆಲ್ ಗಳಿವೆ ಎಂದು ನಿರಾಧಾರ ಆರೋಪವನ್ನು  ಮಾಡಿದ್ದರು ಮತ್ತು ಇನ್ನೂ  ಮಾಡುತ್ತಿದ್ದಾರೆ.ಅಷ್ಟೇ ಅಲ್ಲದೆ ನನ್ನ ತಂದೆ ತಾಯಿಯ ಜಾತಿಯ ಬಗ್ಗೆಯೂ ಆರೋಪವನ್ನು ಮಾಡಿದ್ದರು. ಆದರೆ ಇದುವರೆಗಿನ ಆರೋಪಗಳಿಗೆ ಯಾವುದೇ ದಾಖಲೆಗಳಿಲ್ಲ. ಎಲ್ಲ ಆರೋಪಗಳೂ ನೀರಮೇಲಿನ ಗುಳ್ಳೆಯಂತೆ ಮಾಯವಾಗಿದೆ.ವೆಬ್ ಚಾನಲ್ ಗಳ  ಮೂಲಕ ವಿರೋಧಿಗಳು ಮಾಡಿರುವ ಆರೋಪ ನಿರಾಧಾರ ಆರೋಪಗಳ ಪಟ್ಟಿಗೆ ಮತ್ತೊಂದು ಹೊಸ ಸೇರ್ಪಡೆಯಷ್ಟೇ. 
ಈ ರೀತಿಯ ನಿರಾಧಾರವಾಗಿರುವ ಯಾವುದೇ ಸ್ಪಷ್ಟತೆ  ಮತ್ತು ದಾಖಲೆಗಳಿಲ್ಲದ ವಿಷಯವನ್ನು ಇಟ್ಟುಕೊಂಡು ಪತ್ರಕರ್ತರಂತೆ  ಮುಖವಾಡ ಹಾಕಿರುವ ಕೆಲವರು ಇದನ್ನು ಮುಂದಿಟ್ಟುಕೊಂಡು ಬ್ಲಾಕ್ ಮೇಲ್  ಮಾಡುತ್ತಿದ್ದಾರೆ. ಈ ರೀತಿಯ ಯಾವುದೇ ಬ್ಲಾಕ್ ಮೇಲ್  ಗಳಿಗೆ ನಾನಾಗಲೀ ನನ್ನ ಕುಟುಂಬವಾಗಲೀ ಭಯ ಪಡುವುದಿಲ್ಲ.ಈ ರೀತಿಯಾಗಿ ಸಾರ್ವಜನಿಕವಾಗಿ ಸುಳ್ಳು ಆರೋಪ ಮಾಡುತ್ತಿರುವುದರ ಮೇಲೆ ಪ್ರತಿಯಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ.  ಈ ಕುರಿತಂತೆ ವಿರೋಧಿಗಳು ಮತ್ತು ಕಾಂಗ್ರೆಸ್ ಯಾವ ತನಿಖೆಗೆ ಗೆಗೆ ಒತ್ತಾಯಿಸಿದರೂ ನಾನು ಎದುರಿಸಲು ಸಿದ್ದನಿದ್ದೇನೆ. ಯಾವುದೇ ತನಿಖೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Video Link: https://www.facebook.com/394717541169251/posts/612977916009878/?app=fbl https://wa.me/919945283600
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget