ಕಾರ್ಕಳ:ವಿಶ್ವ ಜನಸಂಖ್ಯಾ ದಿನಾಚರಣೆಯ ಕರಪತ್ರ ಬಿಡುಗಡೆ ಕಾರ್ಯಕ್ರಮ-Times of karkala





ರೋಟರಿ ಆನ್ಸ್ ಕ್ಲಬ್ ಕಾರ್ಕಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ಹಾಗೂ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಕ್ರೆ ಇಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಕರಪತ್ರ ಬಿಡುಗಡೆ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮವನ್ನು ಅಧ್ಯಕ್ಷರಾದ ಶ್ರೀಮತಿ ರತಿ, ಜಿಲ್ಲಾ ನಿರ್ದೇಶಕರಾದ ಗಣೇಶ್ ಬಿ ಅವರು ಮತ್ತು ಕಾರ್ಯಕ್ರಮ ದ ಸಂಪನ್ಮೂಲ ವ್ಯಕ್ತಿಯಾಗಿ ರೋಟರಿ ಆನ್ಸ್ ಕ್ಲಬ್ ನ ನಿಯೋಜಿತ ಅಧ್ಯಕ್ಷೆ ರೊ. ರಮಿತಾ ಶೈಲೇಂದ್ರ ರಾವ್, ಹಾಗೂ ಯೋಜನಾಧಿಕಾರಿ ಭಾಸ್ಕರ್ ಇವರಿಂದ ಕರಪತ್ರದ ಬಿಡುಗಡೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಆನ್ಸ್ ಕ್ಲಬ್ಬಿನ ನಿಯೋಜಿತ ಕಾರ್ಯದರ್ಶಿ ಸುಮಾ ನಾಯಕ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಲ್ಲಿಕಾ,ಸೇವಾ ಪ್ರತಿನಿಧಿ ಅಮಿತಾ ಹಾಗೂ ಸಂಘ ದ ಪದಾಧಿಕಾರಿಗಳು ಉಪಸ್ಥಿರದ್ದರು.




Post a comment