ಕಾರ್ಕಳ:ನಿಮಗೆ ಇಷ್ಟವಾದ ಆಟೊಗಳನ್ನು ಈ ಆ್ಯಪ್ ಮೂಲಕ ಬುಕ್ ಮಾಡಿ-Times of karkala


 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala


ಕಾರ್ಕಳ:ನಿಮಗೆ ಇಷ್ಟವಾದ ಆಟೊಗಳನ್ನು ಈ  ಆ್ಯಪ್ ಮೂಲಕ ಬುಕ್ ಮಾಡಿ-Times of karkala 

ಆಟೋ ಪ್ಲೀಸ್ ಹೊಸ ಆ್ಯಪ್ ಅಪ್ಲಿಕೇಶನ್‌ನಿಂದಾಗಿ ಪ್ರಯಾಣಿಕರು ತಮಗೆ ಇಷ್ಟವಾದ ಆಟೊಗಳನ್ನು ಆಯ್ಕೆ ಮಾಡುವುದರ ಮೂಲಕ ತಮ್ಮ ಮನೆ ಬಾಗಿಲಿಗೆ ಆಟೋ ಸೇವೆಯನ್ನು ಒದಗಿಸುವ ಒಂದು ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರೊಫೆಸರ್ ಡಾಕ್ಟರ್ ವೇಣುಗೋಪಾಲ್ ಪಿಎಸ್ ಹೇಳಿದರು.

ಕಾರ್ಕಳ ರೋಟರಿ ಕ್ಲಬ್ ಆಯೋಜನೆಗೊಳಿಸಿ ಕಾರ್ಯಕ್ರಮದಲ್ಲಿ ಆಟೋ ಪ್ಲೀಸ್ ಹೊಸ ಆ್ಯಪ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸದ್ಯದ ಮಟ್ಟಿಗೆ ಆ್ಯಪ್‌ನ್ನು ಕಾರ್ಕಳ ಹಾಗೂ ನಿಟ್ಟೆ ಪರಿಸರಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂಬ
ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಅವರು ನೀಡಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರೊಫೆಸರ್ ಡಾಕ್ಟರ್ ವೇಣುಗೋಪಾಲ್ ಪಿಎಸ್ ತಮ್ಮ ತಂಡದ ಸದಸ್ಯರೊಂದಿಗೆ ವಿನೂತನವಾಗಿ ಆ್ಯಪ್ ರೂಪಿಸಿದ್ದಾರೆ.ಕಾರ್ಕಳ ರೋಟರಿ ಕ್ಲಬ್‌ನ ಅಧ್ಯಕ್ಷೆ ರೇಖಾ ಉಪಾಧ್ಯಾಯ, ಕಾರ್ಯದರ್ಶಿ
ಶಶಿಕಲಾ ಕೆ. ಹೆಗಡೆ, ಹರಿಪ್ರಕಾಶ್ ಶೆಟ್ಟಿ, ವೇಣುಗೋಪಾಲ್ ಪಿಎಸ್, ಅಶ್ವಿನಿ ವೇಣುಗೋಪಾಲ್, ಉಡುಪಿ ಜಿಲ್ಲೆ ಆಟೋ ಚಾಲಕ ಮಾಲಕ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಸಂತೋಷ ರಾವ್, ಉಪಾಧ್ಯಕ್ಷ ವಿಶ್ವನಾಥ ಭಂಡಾರಿ ಉಪಸ್ಥಿತರಿದ್ದರು.


https://wa.me/919945283600





Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget