ನಲ್ಲೂರು:ಬಾವಿಗೆ ಹಾರಿ ಯುವಕ ಆತ್ಮಹತ್ಯೆ-Times of karkala
ನಲ್ಲೂರು:ಕುಡಿತದ ಚಟವಿದ್ದ 24 ವರ್ಷದ ಯುವಕ ಅದೇ ವಿಚಾರದಿಂದ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದಲ್ಲಿ ನಡೆದಿದೆ.ಬಜಗೋಳಿಯ ನಲ್ಲೂರಿನ ಐದೊಕ್ಲು ಮನೆ ನಿವಾಸಿ ಚೇತನ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ.ಚೇತನ್ ಬುಧವಾರ ಜುಲೈ 8 ರಂದು ಬೆಳಿಗ್ಗೆ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಂದಿರದ ಕಾರಣ ತಾಯಿ ಫೋನ್ ಮಾಡಿ ಕೇಳಿದಾಗ ಬಜಗೋಳಿಯಲ್ಲಿದ್ದು ಬರುತ್ತೇನೆ ಎಂದು ಹೇಳಿದ್ದಾರೆ. ಆದರೆ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಹಿಂದೆ ಚೇತನ್ ಸ್ನೇಹಿತನ ಮನೆಯಲ್ಲಿ ಇರುತ್ತಿದುದ್ದರಿಂದ ಆತನನ್ನು ಹುಡುಕಾಡಿರಲಿಲ್ಲ.
ಆದರೆ ಚೇತನ್ ಅವರ ಮನೆಯ ಸಮೀಪದ ಮನೆಯೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Times Of karkala whatsapp Group link:
ಜಾಹೀರಾತು

Post a comment