ಕಾರ್ಕಳ:ರಾಜ್ಯಕ್ಕೆ ಮಾದರಿ ಶಾಸಕ ಸುನೀಲ್ ಕುಮಾರ್ ರವರ "ಪರಿಸರ ಉತ್ಸವ" ಪರಿಕಲ್ಪನೆ




ಕಾರ್ಕಳ:ರಾಜ್ಯಕ್ಕೆ ಮಾದರಿ ಶಾಸಕ ಸುನೀಲ್ ಕುಮಾರ್ ರವರ "ಪರಿಸರ ಉತ್ಸವ" ಪರಿಕಲ್ಪನೆ-Times of karkala
ಕಾರ್ಕಳ: ಕಾರ್ಕಳ ಶಾಸಕ ಶ್ರೀ ವಿ. ಸುನೀಲ್ ಕುಮಾರ್ ರವರ ವಿನೂತನ ಪರಿಕಲ್ಪನೆಯಲ್ಲಿ ಕಾರ್ಕಳದಲ್ಲಿ ರಾಜ್ಯಕ್ಕೆ ಮಾದರಿ ಎಂಬಂತೆ ಪರಿಸರ ಉತ್ಸವ ನಡೆಯಿತು
1 ನೇ ಹಂತ ಮನೆಗಳಲ್ಲಿ ತುಳಸಿ ಗಿಡ ನೆಡುವಂತದ್ದು, 2ನೇ ಹಂತ ಶಾಲಾ ಆವರಣದಲ್ಲಿ ನುಗ್ಗೆ ಲಿಂಬೆ ಹಣ್ಣು, ಕರಿಬೇವು, ನೆಲ್ಲಿಕಾಯಿ, ಪಪ್ಪಾಯಿ ಹಾಗೂ ಚಿಕ್ಕು 3ನೇ ಹಂತ ದೇವಾಲಯಗಳಲ್ಲಿ ಆಲ ಆರಳೆ, ಕಹಿಬೇವು, ಬಿಲ್ವ ಪತ್ರ ಹಾಗೂ 4ನೇ ಹಂತ ಸಾರ್ವಜನಿಕ ಸ್ಥಳಗಳಲ್ಲಿ ಪೇರಳೆ, ಮಾವು, ಹಲಸು ಹಾಗೂ ನೆಲ್ಲಿಕಾಯಿ ನೇರಳೆ ಹಾಗೂ ಪುರಸಭಾ ವ್ಯಾಪ್ತಿಯಲ್ಲಿ 1000 ಗಿಡಗಳನ್ನು ಹಾಗೂ 34 ಗ್ರಾಮ ಪಂಚಾಯತಗಳಿಗೆ ಒಂದು ಗ್ರಾಮಕ್ಕೆ 100 ರಂತೆ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ 500 ಗಿಡಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ಶ್ರೀ. ರತ್ನಾಕರ ಹಗ್ಡೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಸುಮಿತ್ ಶೆಟ್ಟಿ, ಶ್ರೀ ಉದಯ ಎಸ್. ಕೋಟ್ಯಾನ್, ಶ್ರೀಮತಿ ಜ್ಯೋತಿ ಹರೀಶ್, ಶ್ರೀಮತಿ ರೇಶ್ಮಾ ಉದಯ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷರಾದ ಶ್ರೀ ಹರೀಶ್ ನಾಯಕ್, ಡಿ.ಸಿ ಎಫ್ ಶ್ರೀ ಚಂದ್ರಣ್ಣ, ಸಾಮಾಜಿಕ ಅರಣ್ಯ ಇಲಾಖೆ ಉಡುಪಿ, ಶ್ರೀ ಪ್ರಶಾಂತ್ ಪಿ.ಕೆ.ಎಂ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೂಡುಬಿದ್ರೆ, ಡಿ.ಎಫ್.ಓ ಶ್ರೀ. ದಿನೇಶ್, ತಾಲೂಕು ತಹಶೀಲ್ದಾರರಾದ ಶ್ರೀ ಪುರಂದರ ಹೆಗ್ಡೆ, ತಾಲೂಕು ಕಾರ್ಯನಿರ್ವಹಕ ಅಧಿಕಾರಿಯಾದ ಶ್ರೀ ಡಾ. ಕೆ.ಬಿ. ಹರ್ಷ, ಹೆಬ್ರಿ ತಾಲೂಕು ತಹಶೀಲ್ದಾರರಾದ ಶ್ರೀ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. ನಾಗೇಶ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.




Post a comment