►►ಕೆರ್ವಾಶೆ:ಸ್ವರ್ಣ ಕಾರ್ಕಳದ ದುಸ್ಥಿತಿ ಶತ್ರುಗಳಿಗೂ ಬರಬಾರದು ಅನ್ನುತ್ತಾರೆ ಇಲ್ಲಿಯ ಜನ!
►►ಜನಪ್ರತಿನಿಧಿಗಳ ಪೊಳ್ಳು ಭರವಸೆ, ಮೆಸ್ಕಾಂ ಅಧಿಕಾರಿಗಳ ಉಡಾಫೆಯ ಉತ್ತರ!
►►ಬಡವರ ಬೇಡಿಕೆಗಿಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ!
►►ಲೋ ವೋಲ್ಟೇಜ್ ನಿಂದ ಮನೆಯ ಬಲ್ಬ್ ಉರಿಯೋದೂ ಕಷ್ಟವಾಗಿದೆ!
►►ಇದು ಟೈಮ್ಸ್ ಆಫ್ ಕಾರ್ಕಳ ವರದಿ




►►ಜನಪ್ರತಿನಿಧಿಗಳ ಪೊಳ್ಳು ಭರವಸೆ, ಮೆಸ್ಕಾಂ ಅಧಿಕಾರಿಗಳ ಉಡಾಫೆಯ ಉತ್ತರ!
►►ಬಡವರ ಬೇಡಿಕೆಗಿಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ!
►►ಲೋ ವೋಲ್ಟೇಜ್ ನಿಂದ ಮನೆಯ ಬಲ್ಬ್ ಉರಿಯೋದೂ ಕಷ್ಟವಾಗಿದೆ!
►►ಇದು ಟೈಮ್ಸ್ ಆಫ್ ಕಾರ್ಕಳ ವರದಿ
ಕಾರ್ಕಳ: ಕಾರ್ಕಳ ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಾಲೂಕು. ನೋಡನೋಡುತ್ತಿದ್ದಂತೆ ವಿಶಾಲಗೊಂಡ ರಸ್ತೆಗಳು,ಅಣೆಕಟ್ಟುಗಳು... ಸ್ವರ್ಣ ಕಾರ್ಕಳದ ಪರಿಕಲ್ಪನೆಯಲ್ಲಿ ಶಾಸಕರಾದಿಯಾಗಿ ಜನಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಸ್ವರ್ಣ ಕಾರ್ಕಳವೆಂದರೆ ಕೇವಲ ರಸ್ತೆ ಅಭಿವೃದ್ಧಿ ಮಾತ್ರವೇ? ಎಂದು ಕೇಳುತ್ತಿದ್ದರೆ ಈ ಭಾಗದ ಜನತೆ.
ತಾಲೂಕಿನ ಕೆರ್ವಾಶೆ ಗ್ರಾಮದ ಜನರು ಸದ್ಯ ಈ ಪ್ರಶ್ನೆಯನ್ನು ಎತ್ತಿದ್ದಾರೆ. ಹೌದು ಲೋ ವೋಲ್ಟೇಜ್ ಸಮಸ್ಯೆಯಿಂದ ಹೈರಾಣಾಗಿರುವ ಕೆರ್ವಾಶೆ ಭಾಗದ ಗ್ರಾಮಸ್ಥರು ಇದೀಗ ಜನಪ್ರತಿನಿಧಿಗಳ ವಿರುದ್ಧ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಕೆರ್ವಾಶೆ ಗ್ರಾಮದ ಗುತ್ತಿಕಂಬ್ಲ, ಪೇರ್ಗಬೆಟ್ಟು, ಕಂಡರಬೆಟ್ಟು, ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ದಿನದಿಂದ ದಿನಕ್ಕೆ ವಿಪರೀತವಾಗುತ್ತಿದ್ದು ಮನೆಬಳಕೆಯ ಬಲ್ಬ್ ಕೂಡಾ ಉರಿಯಲು ಕಷ್ಟವಾಗಿದೆ.
ಕೃಷಿಕರು ಅತೀ ಹೆಚ್ಚು ಇರುವ ಈ ಭಾಗದಲ್ಲಿ ಕೃಷಿಗೆ ಸಮರ್ಪಕವಾಗಿ ನೀರಾವರಿ ವ್ಯವಸ್ಥೆಯನ್ನು ಪೂರೈಸಲಾಗುತ್ತಿಲ್ಲ.ಈ ಭಾಗದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಎಷ್ಟು ಬಿಗಡಾಯಿಸಿದೆಯೆಂದರೆ ಮನೆಯ ಬಲ್ಬ್ ಕೂಡಾ ಉರಿಯುವುದಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರೊಬ್ಬರು "ಸ್ಥಳೀಯ ಜನಪ್ರತಿನಿಧಿಯೊಬ್ಬರು ಆಶ್ವಾಸನೆ ನೀಡಿ ಹತ್ತು ತಿಂಗಳು ಮುಗಿದಿದೆ, ಇದುವರೆಗೂ ಈ ಕಡೆ ತಲೆಯೇ ಹಾಕಿಲ್ಲ" ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
"ಮೆಸ್ಕಾಂ ನವರಿಗೆ ಕರೆ ಮಾಡಿದರೆ ಅವರಿಂದ ಉಡಾಫೆಯ ಉತ್ತರವೇ ಹೊರತು ಇದುವರೆಗೂ ಸಮರ್ಪಕ ಪರಿಹಾರ ಸಿಕ್ಕಿಲ್ಲ,ಕಾರ್ಕಳ ಅಭಿವೃದ್ಧಿ ಹೊಂದುತ್ತಿದೆಯಾದರೂ ಮೂಲಬೂತ ಸೌಕರ್ಯವನ್ನೇ ಒದಗಿಸಲಾಗದ ಸ್ವರ್ಣ ಕಾರ್ಕಳ ಪರಿಕಲ್ಪನೆ ಯಾರಿಗಾಗಿ?" ಎಂದು ಪ್ರಶ್ನೆ ಮಾಡುತ್ತಿದ್ದಾರೆ ಇಲ್ಲಿಯ ಕೃಷಿಕರು.
ಒಟ್ಟಿನಲ್ಲಿ ಕೃಷಿ ಕಾರ್ಯ ಮಾತ್ರವಲ್ಲ ಮನೆ ಬಳಕೆಯ ಬಲ್ಬ್ ಗಾಲೆ ಉರಿಯದಷ್ಟು ಲೋ ವೋಲ್ಟೇಜ್ ಸಮಸ್ಯೆಯನ್ನು ಅನುಭವಿಸುತ್ತಿರುವ ಈ ಭಾಗದ ಜನರಿಗೆ ಪರಿಹಾರ ಎನ್ನುವುದು ಮರೀಚಿಕೆಯೋ ಎಂಬಂತಾಗಿದೆ.
ವರದಿ:ಪ್ರಶಾಂತ್ ಮುಡಾರು




Times of karkala
Post a comment