ನಾಗರಪಂಚಮಿಗೆ ಅಡ್ಡಿಯಾಯಿತು ಕೊರೋನಾ;ಪ್ರಸಿದ್ಧ ದೇವಾಲಯದಲ್ಲೂ ಭಕ್ತರ ಪ್ರವೇಶಕ್ಕೆ ನಿರ್ಬಂಧ-Times of karkala
ಇಂದು ನಾಡಿನೆಲ್ಲೆಡೆ ನಾಗರಪಂಚಮಿ ಹಬ್ಬದ ಸಂಭ್ರಮ. ಆದರೆ ಈ ಕೊರೊನಾ ಸಾಂಕ್ರಮಿಕ ರೋಗ ನಾಗರಪಂಚಮಿ ಆಚರಣೆಗೂ ಅಡ್ಡಿಯಾಗಿದೆ. ಜನ ದಟ್ಟನೆಗೆ ಕಾರಣವಾಗಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಪ್ರಸಿದ್ಧ ದೇವಾಲಯದಲ್ಲೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಜಿಲ್ಲೆಯಾದ್ಯಂತ ಸರಳವಾಗಿ ನಾಗರ ಪಂಚಮಿ ಆಚರಿಸಲಾಗುತ್ತಿದೆ.ಯಾವುದೇ ದೇವಸ್ಥಾನಗಳ ಪ್ರವೇಶ ನಿರ್ಬಂಧದ ಹಿನ್ನಲೆಯಲ್ಲಿ ಭಕ್ತಾಧಿಗಳು ನಾಗ ಕ್ಷೇತ್ರಗಳ ಹೊರಗಿಂದಲೇ ನಾಗನಿಗೆ ಸೀಯಾಳ, ಪಿಂಗಾರ ಹೂಹಣ್ಣುಗಳನ್ನು ಸರ್ಮಿಪಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ,ಮಂಗಳೂರಿನ ಇತಿಹಾಸ ಪ್ರಸಿದ್ಧ ಕುಡುಪು ದೇಗುಲಕ್ಕೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು ಭಕ್ತರು ತಮ್ಮ ಮನೆ - ತರವಾಡುಗಳಲ್ಲಿ ಸರಳ ನಾಗರ ಪಂಚಮಿ ಆಚರಣೆಯಲ್ಲಿ ತೊಡಗಿದ್ದಾರೆ.
Post a comment