ಬಜಗೋಳಿ:ವರಮಹಾಲಕ್ಷ್ಮಿ ಪೂಜೆ:ಯೂಟ್ಯೂಬ್‌ನಲ್ಲಿ ನೇರಪ್ರಸಾರ-Times of karkala

 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala

ಬಜಗೋಳಿ:ವರಮಹಾಲಕ್ಷ್ಮಿ ಪೂಜೆ:ಯೂಟ್ಯೂಬ್‌ನಲ್ಲಿ ನೇರಪ್ರಸಾರ 


ಸಾರ್ವಜನಿಕ ವರಮಹಾಲಕ್ಷಿ   ಪೂಜಾ ಸಮಿತಿ ಕಾರ್ಕಳ, ಭಾರತೀಯ ಜನತಾ ಪಕ್ಷ, ಮಹಿಳಾ ಮೋರ್ಚಾ ಕಾರ್ಕಳ, ರೋಟರಿ ಆ್ಯನ್ಸ್ ಕ್ಲಬ್ ಕಾರ್ಕಳ ಹಾಗೂ ವಿವಿಧ ಸಂಘಟನೆಗಳ
ಸಂಯುಕ್ತ  ಆಶ್ರಯದಲ್ಲಿ 15ನೇ ವರ್ಷದ  ವರಮಹಾಲಕ್ಷ್ಮಿ  ಪೂಜೆಯು ದಿನಾಂಕ
31.07.2020ನೇ ಶುಕ್ರವಾರ ಮುಡ್ರಾಲು ದುರ್ಗಾಪರಮೇಶ್ವರಿ ದೇವಸ್ಥಾನದ
ವಠಾರದಲ್ಲಿ ಬೆಳಿಗ್ಗೆ ಗಂಟೆ 9.30ರಿಂದ ಗ0ಟೆ 12.30ರವರೆಗೆ ನಡೆಯಲಿದೆ.


ಕೋವಿಡ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಗುಂಪಾಗಿ ಪ್ರತೀ ವರ್ಷದಂತೆ ಈ ವರ್ಷವೂ ಆಚರಿಸಲು ಸಂಕಷ್ಟ ಒದಗಿರುವುದರಿಂದಾಗಿ ವಿಶಿಷ್ಠ ರೀತಿಯಲ್ಲಿ ಆಚರಣೆ ಮಾಡಲು ಸಮಿತಿ ಮುನ್ನಡಿಯಿರಿಸಿದೆ.  ಪೂಜಾ ಕೈಂಕರ್ಯ: ಪೂಜಾ ಕಾರ್ಯ ನಡೆಯುವ ದಿನದಂದು ಮುಡ್ರಾಲು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಪುರೋಹಿತರ ಮುಖಾಂತರ ಐದು ಜನ ಸುಮಂಗಲಿಯರನ್ನು ಪೂಜೆಗೆ ಕುಳ್ಳಿರಿಸಿ ಪೂಜೆ
ಯನ್ನು ನೆರವೇರಿಸಲಾಗುತ್ತದೆ.

ಈ ಪೂಜಾ ಕಾರ್ಯವನ್ನು “ನಮ್ಮ ಕಾರ್ಲ” ಚಾನೆಲ್ ಮೂಲಕ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗುವುದು. ಈ ಯೂ ಟ್ಯೂಬ್ ಮೂಲಕ ವೀಕ್ಷಣೆ ಮಾಡಿ ತಮ್ಮ ಮನೆಯಲ್ಲೇ
ಪೂಜೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

 ಪೂಜಾ ಸಾಮಾಗ್ರಿ: ಮನೆಯಲ್ಲೇ ಪೂಜೆ ಮಾಡುವವರಿಗೆ ಪೂಜಾ ಸಾಮಾಗ್ರಿಗಳ ಕಿಟ್, ರವಕೆ, ಹಣ, ಐದುದಾರ, ಬಳೆ, ಅರಶಿನ ಹುಡಿ, ಕುಂಕುಮ ನೀಡಲಾಗುತ್ತದೆ. ಈ ಸಾಮಾಗ್ರಿಗೆ ರೂ 50 ಸೇವಾ ಶುಲ್ಕ ವಿಧಿಸಲಾಗಿದೆ.https://wa.me/919945283600

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget